Karnataka Governor Awards Hon. Doctorate to Bishop Henry D’Souza for his contribution to education and social fields

ಬಳ್ಳಾರಿ, ನವೆಂಬರ್ 16: ಶಿಕ್ಷಣ, ಸಾಮಾಜಿಕ ಸೇವೆ, ಸಂವಹನ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಲ್ಲಿಸಿರುವ ಗಣನೀಯ ಕೊಡುಗೆಯನ್ನು ಗುರುತಿಸಿ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಬಿಷಪ್ ಡಾ. ಹೆನ್ರಿ ಡಿ’ಸೋಜಾ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.
ಬಳ್ಳಾರಿಯಲ್ಲಿ ಸೋಮವಾರ ನಡೆದ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಗೌರವಾನ್ವಿತ ಡಾ. ಸುಧಾ ಯಾದವ್ ಅವರು ಈ ಗೌರವವನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಗಜಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸರಳತೆ, ವಿನಯಶೀಲತೆ ಹಾಗೂ ದೂರದೃಷ್ಟಿಯ ನಾಯಕತ್ವಕ್ಕೆ ಹೆಸರಾಗಿರುವ ಬಿಷಪ್ ಹೆನ್ರಿ ಡಿ’ಸೋಜಾ ಅವರು ಧಾರ್ಮಿಕ ಸೇವೆಯೊಂದಿಗೆ ಶಿಕ್ಷಣ, ಸಾಮಾಜಿಕ ಅಭಿವೃದ್ಧಿ, ಮಾಧ್ಯಮ, ಸಂವಹನ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಸಮಾಜದ ವಿವಿಧ ವರ್ಗಗಳ ಸಬಲೀಕರಣಕ್ಕಾಗಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳು ಚರ್ಚ್ ಮತ್ತು ಸಮಾಜದಲ್ಲಿ ಅವರಿಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿವೆ.
ಸಾಮಾಜಿಕ ಸಂವಹನ ಕ್ಷೇತ್ರದಲ್ಲಿ ಮುಂಚೂಣಿ ಸಾಧನೆ
ಕ್ಯಾಥೋಲಿಕ್ ಸಾಮಾಜಿಕ ಸಂವಹನ ಕ್ಷೇತ್ರದಲ್ಲಿ ಪ್ರವರ್ತಕ ಕಾರ್ಯಗಳನ್ನು ಕೈಗೊಂಡಿರುವ ಬಿಷಪ್ ಹೆನ್ರಿ ಡಿ’ಸೋಜಾ ಅವರು, ಭಾರತದ ಮೊದಲ ಸಾಮಾಜಿಕ ಸಂವಹನದ ಪಾಲನಾ ಯೋಜನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಅಭಿವೃದ್ಧಿಗೆ ನಾಯಕತ್ವ ನೀಡುವುದರೊಂದಿಗೆ ಧಾರ್ಮಿಕ ಸೌಹಾರ್ದ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಭಾರತೀಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಸಂಘದ ರಾಷ್ಟ್ರೀಯ ಹಾಗೂ ಕರ್ನಾಟಕ ಮಟ್ಟದ ಯುವಜನ ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಹಾಗೂ ಅವರ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಲು ಪ್ರೇರಣೆ ನೀಡಿದ್ದಾರೆ.
ಕಲೆ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ
ಭಾರತೀಯ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ನೃತ್ಯ ಹಾಗೂ ಸಂಗೀತದಲ್ಲಿ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಅವರು ಆರಂಭಿಸಿದ ಸಂದೇಶ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆ (Sandesha Institute for Culture and Education) ಅನೇಕ ಯುವಕ-ಯುವತಿಯರ ಪ್ರತಿಭಾ ವಿಕಸನಕ್ಕೆ ಮಹತ್ವದ ವೇದಿಕೆಯಾಗಿದೆ.
ಸಾಹಿತ್ಯ, ಕಲೆ, ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ಕರ್ನಾಟಕ ರಾಜ್ಯಮಟ್ಟದ ಸಂದೇಶ ಪ್ರಶಸ್ತಿಗಳನ್ನು ಕಳೆದ 35 ವರ್ಷಗಳಿಂದ ಪ್ರತಿವರ್ಷ ಪ್ರದಾನ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯದ ಸಾಂಸ್ಕೃತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಂಸ್ಥೆಯು ಮಹತ್ವದ ಕೊಡುಗೆ ನೀಡುತ್ತಿದೆ.
ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕೆ ಆದ್ಯತೆ
ಸಾಮಾಜಿಕ ನ್ಯಾಯ ಮತ್ತು ಮಾನವೀಯ ಸೇವೆಯನ್ನು ತಮ್ಮ ಕಾರ್ಯಗಳ ಪ್ರಮುಖ ಭಾಗವಾಗಿಸಿಕೊಂಡಿರುವ ಬಿಷಪ್ ಹೆನ್ರಿ ಡಿ’ಸೋಜಾ ಅವರು, ತೃತೀಯ ಲಿಂಗಿಗಳು, ದೇವದಾಸಿಯರು ಮತ್ತು ಅವರ ಮಕ್ಕಳ ಅಭಿವೃದ್ಧಿಗಾಗಿ ಇಡೀ ಭಾರತದಲ್ಲೇ ಮೊದಲ ಹಾಗೂ ಏಕೈಕ ವಿಶೇಷ ನಿಯೋಗವನ್ನು ಸ್ಥಾಪಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಅವರು ತೋರಿಸಿರುವ ಬದ್ಧತೆ ಶ್ಲಾಘನೀಯವಾಗಿದೆ.
ದಲಿತರು, ಎಚ್ಐವಿ/ಏಡ್ಸ್ನಿಂದ ಬಾಧಿತರಾದವರು ಹಾಗೂ ಕುಷ್ಠರೋಗದಿಂದ ಬಳಲುತ್ತಿರುವವರು ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಉನ್ನತಿಗಾಗಿ ವಿಶೇಷ ಆದ್ಯತೆ ನೀಡಿದ್ದಾರೆ.
ಧರ್ಮಗಳ ನಡುವಿನ ಸೌಹಾರ್ದ ಸಂಬಂಧಗಳನ್ನು ಬಲಪಡಿಸುವುದು, ಭಾಷಾ ಮತ್ತು ಸಾಂಸ್ಕೃತಿಕ ಅಕಾಡೆಮಿಗಳೊಂದಿಗೆ ಸಹಕಾರ ಬೆಳೆಸುವುದು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ವಿಸ್ತರಿಸುವುದು ಅವರ ನಿರಂತರ ಬದ್ಧತೆಯಾಗಿದೆ. ಅವರ ಜೀವನ ಮತ್ತು ಸೇವೆ ನಂಬಿಕೆ, ಶಿಕ್ಷಣ, ಸಂವಹನ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಸಮನ್ವಯಕ್ಕೆ ಸಾಕ್ಷಿಯಾಗಿದೆ.
ಪ್ರಾದೇಶಿಕ ಶಿಕ್ಷಣಾಭಿವೃದ್ಧಿಗೆ ವಿಶ್ವವಿದ್ಯಾಲಯದ ಕೊಡುಗೆ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಹೆಸರನ್ನು ಹೊಂದಿದೆ. ಕ್ರಿ.ಶ. 1509ರಿಂದ 1529ರವರೆಗೆ ಆಳ್ವಿಕೆ ನಡೆಸಿದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಹಂಪಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಂದು ಹಂಪಿ ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪರಂಪರೆಯ ತಾಣವಾಗಿದೆ.
ವೈಜ್ಞಾನಿಕ ಮನೋಭಾವನೆ, ಸಂಶೋಧನೆ ಹಾಗೂ ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ವಿಶ್ವವಿದ್ಯಾಲಯವು, ವಿಶೇಷವಾಗಿ ಕಲ್ಯಾಣ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಸಬಲೀಕರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು ವಿಶ್ವವಿದ್ಯಾಲಯದ ಪ್ರಮುಖ ಆಶಯವಾಗಿದೆ.
ಶಿಕ್ಷಣ, ಸಂಸ್ಕೃತಿ, ಸಂವಹನ ಮತ್ತು ಸಮಾಜಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಬಿಷಪ್ ಹೆನ್ರಿ ಡಿ’ಸೋಜಾ ಅವರು ಸಲ್ಲಿಸಿರುವ ದೀರ್ಘಕಾಲದ ಸೇವೆಗೆ ಈ ಗೌರವ ಡಾಕ್ಟರೇಟ್ ಮಹತ್ವದ ಮನ್ನಣೆಯಾಗಿದೆ.
ಪೂಜ್ಯ ಬಿಷಪ್ ಹೆನ್ರಿ ಡಿ’ಸೋಜಾ ಅವರ ಬಹುಮುಖ ಕೊಡುಗೆ ಮತ್ತು ನಿಸ್ವಾರ್ಥ ಸೇವೆಗೆ ಇಡೀ ಧರ್ಮಕ್ಷೇತ್ರವು ಚಿರಋಣಿಯಾಗಿದೆ.
ವರದಿ:
ಫಾದರ್ ಐವನ್ ಪಿಂಟೊ
ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (PRO)
ಕ್ಯಾಥೋಲಿಕ್ ಬಳ್ಳಾರಿ ಧರ್ಮಕ್ಷೇತ್ರ, ಬಳ್ಳಾರಿ.
Karnataka Governor Awards Hon. Doctorate to Bishop Henry D’Souza for his contribution to education and social fields

16 NOVEMBER 2026 BALLARI: Governor of Karnataka awarded Doctorate (Honorary) to Bishop Henry D’Souza, Bishop of Bellary in recognition of his outstanding contribution to education and social fields today at the Vijayanagara Sri Krishnadevaraya University (VSKU) convocation ceremony held at Ballari.
Her Excellency, Dr. Sudha Yadav, Hon’ble Governor of Karnataka and Chancellor of the University presented the award at the fourteenth annual convocation of Vijayanagar Sri Krishnadevaraya University, Ballari in the presence of Vice Chancellor Prof. M. Muniraju and Ballari City Mayor Sri Gajappa.
Bishop Henry D’Souza, a simple and unassuming and distinguished leader, a pioneer in social communication, a visionary, institution builder and committed servant of society.
His contribution extends beyond the administration of a diocese. Through his pioneering work in Catholic communications, his role in developing India’s first Pastoral Plan for Social Communications, his leadership in cultural and educational institutions and his sustained commitment to pastoral and social development, he has made a significant contribution to the Church and society in India.
As Chairman of youth commissions of the Bishops of India, both at the national and Karnataka levels, Bishop D’Souza motivated scores of young men and women to be leaders and achievers.
Promotion of inter-religious relations, networking with linguistic and cultural academies and institutions of higher learning has been his undaunted commitment aimed at national integration.
His initiative to start Sandesha institute for culture and education which has been training young talents in Indian and western classical dance and music has prepared hundreds of young talents.
The prestigious Karnataka state level Sandesha Awards in literature, arts, journalism, media education and other outstanding contributions have been being presented annually for the last thirty-five years.
Helping to uplift the socially and economically backward sections such as Dalits, transgenders, devadasis, people infected with HIV/AIDS and Leprosy has been his priority.
His life and service represent a remarkable synthesis of faith, intellectual vision, communication, education, culture and service to humanity.
The University of Ballari is named after Sri Krishnadevaraya, an emperor of Vijayanagara Empire (1509-1529) from Hampi, a UNESCO recognised world heritage place.
The university strives to impart quality higher education with greater emphasis on scientific temper and research; empowering students from the socially and economically backward Kalyana Karnataka region for social and financial inclusion.
Report by
Fr Ivan Pinto
Diocesan Public Relations Officer
Catholic Diocese of Bellary





