

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ನವೆಂಬರ್ 07, 2026 ರಂದು ಸಂಜೆ 4.00 ಗಂಟೆಗೆ ʼಕಾವ್ಯಾಂ ವ್ಹಾಳೊ-20ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ವಹಿಸಿಕೊಳ್ಳಲಿದ್ದಾರೆ. ಕೊಂಕಣಿಯ ಹಿರಿಯ ನಟ, ನಿರ್ದೇಶಕ ಹಾಗೂ ಕವಿಯಾದಂತಹ ಶ್ರೀ ಡೆನಿಸ್ ಮೊಂತೇರೊರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಂಕಣಿಯ ಕುಡುಂಬಿ ಸಮುದಾಯದ ಜಾನಪದ ಕಲಾವಿದರಾಗಿರುವ ಶ್ರೀ ರಾಮ ನಾಯ್ಕ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಯಿತ್ರಿಯಾದ ಡಾ. ಫ್ಲಾವಿಯಾ ಕ್ಯಾಸ್ತೆಲಿನೊರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ರೆನಿಶಾ ರೋನಾ ಲೋಬೊ, ಡಾ.ಅರವಿಂದ ಶ್ಯಾನಭಾಗ್, ಆಶ್ನಾ ಲೆನಾ ಪಿರೇರಾ, ಫ್ಲಾವಿಯಾ ಅಲ್ಬುಕರ್ಕ್, ಆಂತೊನ್ ಲುವಿಸ್ ಮಣಿಪಾಲ್, ಪೂರ್ಣಿಮಾ ಸುರೇಶ್ ನಾಯಕ್, ಲೋಯ್ಡ್ ರೇಗೊ ತಾಕೊಡೆ, ವಾಣಿ ಪರ್ಕಳ, ಮಾರ್ಟಿನ್ ಆರ್. ಡಿಸೋಜಾ ಮತ್ತು ರೋಬರ್ಟ್ ಮಿನೇಜಸ್ ಕಣಜಾರ್ ಇವರು ತಮ್ಮ ಕವಿತೆಗಳನ್ನು ವಾಚಿಸುವರು.
ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.


