

ಕುಂದಾಪುರ, ಬಸ್ರೂರು; ವಸತಿ ನಿಲಯದ ಮಕ್ಕಳ ಸುರಕ್ಷತೆಗಾಗಿ ಬಹುದಿನಗಳ ಬೇಡಿಕೆಯಾದ ಮಲಗುವ ಕೋಣೆಯ ಕಿಟಕಿ ಗಳಿಗೆ ಅಲ್ಯೂಮಿನಿಯಂ ಮೊಸ್ಕಿಟೋ ನೆಟ್ ಕುಂದಾಪುರ ಲಯನ್ಸ್ ಕ್ಲಬ್ ಹಸ್ತಾಂತರಿಸಿತು.
ಕೊಡುಗೆ ಹಸ್ತಾಂತರದ ಸಭೆಯಲ್ಲಿ ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಲಯನ್ ಡಾ. ರಾಜೇಂದ್ರ ಕೆ ಕಾರ್ಯದರ್ಶಿಗಳಾದ ಲಯನ್ ದಿನಕರ್ ಆರ್ ಶೆಟ್ಟಿ ಕೋಶಾಧಿಕಾರಿಗಳಾದ ಲಯನ್ ಶಂಕರ್ ಶೆಟ್ಟಿ ಅಲ್ಲದೆ ಹಿರಿಯ ಸದಸ್ಯರಾದ ಲಯನ್ ವೇಣುಗೋಪಾಲ್ ಶೆಟ್ಟಿ, ಲಯನ್ ಸುಧಾಕರ್ ಹೆಗ್ಡೆ ಹಾಗೂ ಲಯನ್ ಪ್ರೊಫೆಸರ್ ಕೆ ರಾಧಾಕೃಷ್ಣ ಶೆಟ್ಟಿ ಬಸುರೂರು ಪ್ರಾಥಮಿಕ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾಕ್ಟರ್ ಮಹೇಶ್ ಐತಾಳ್ ಹಾಗೂ ಭೋಜರಾಜ ಶೆಟ್ಟಿ ಭಾಗವಹಿಸಿದ್ದರು.ಕುಂದಾಪುರ
ಇಲಾಕಾವತಿಯಿಂದ ತಾಲೂಕು ಕಲ್ಯಾಣ ವಿಸ್ತರಣಾಧಿಕಾರಿ ಶ್ರೀಮತಿ ಆಶಾ ದೇವಿ ನಾಯಕ್, ಹಾಸ್ಟೆಲ್ ವಾರ್ಡನ್ ಸಂಜೀವ ದೇವಾಡಿಗ ಹಾಗೂ ವಸತಿ ನಿಲಯದ ಸಹಾಯಕರು ಹಾಗೂ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.



