Yuvaraj D. Kunder Bags Double Gold at DK Masters Athletics Meet


ಮಂಗಳೂರು, ಸೆಪ್ಟೆಂಬರ್ 21: ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಸೆ. 20 ರಂದು ನಡೆದ ‘ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್
ಅಥ್ಲೆಟಿಕ್ ಮೀಟ್’ನಲ್ಲಿ ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ.
ಕುಂದರ್ ಅತ್ಯುತ್ತಮ ಪ್ರದರ್ಶನ ನೀಡಿ ಎರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಯುವರಾಜ್ ಡಿ.ಕುಂದರ್ ಅವರು
ಬಾಲಕರ 4೦೦ ಮೀಟರ್ ಓಟ ಹಾಗೂ ಉದ್ದ ಜಿಗಿತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಯ ಈ ಅದ್ಭುತ ಸಾಧನೆಯನ್ನು ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ ಅಲ್ಮೇಡಾ ಎಸ್. ಜೆ
ಶ್ಲಾಘಿಸಿದ್ದಾರೆ.ಉಪ ಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿ’ಸೋಜಾ, ಶ್ರೀಮತಿ ಅಪರ್ಣಾ ಸುರೇಶ್ ಶಿಕ್ಷಕ ವೃಂದ ಹಾಗೂ
ಸಹಪಾಠಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿ ಯುವರಾಜ್ ಕುಂದರ್ ಅವರ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದ್ದಾರೆ.
Yuvaraj D. Kunder Bags Double Gold at DK Masters Athletics Meet
Mangaluru: Yuvaraj D. Kunder of Class IX, St Aloysius Gonzaga School, Mangaluru, won two gold medals at the DK Masters Athletics Meet held at Mangala Stadium, Mangaluru, on September 20, 2026.Yuvaraj secured gold in the 400m race and long jump, demonstrating his athletic ability, determination and sporting talent. The school management, Principal Rev. Fr Rohan D’Almeida SJ, Vice-Principals Ms Laurel D’Souza and Ms Aparna Suresh, staff and students congratulated Yuvaraj on his impressive achievement and commended his dedication and hard work. They wished him continued success and many more laurels in the field of athletics.

