
Photos : Rev. Fr. Paul Rego, Sheryl dsouza, Hevin Cotha

ಕುಂದಾಪುರ, ಸೆ. 14; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸೆ. 13 ರಂದು, ಚರ್ಚಿನ ಯುವ ಆಯೋಗದಿಂದ ಆಯೋಜಿಸಲ್ಪಟ್ಟ ಚರ್ಚ್ ವ್ಯಾಪ್ತಿಯ ವಾಳೆಯವರಿಗಾಗಿ ಪ್ರತಿಭಾ ದಿನವನ್ನುಆಚರಿಸಲಾಯಿತು. ಇದನ್ನು ಚರ್ಚಿನ ಐ.ಸಿ.ವೈ.ಎಮ್. ಯುವ ಸಂಘಟನೆ ನಡೆಸಿಕೊಟ್ಟರು. ಚರ್ಚಿನ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಆಶೀರ್ವಚನ ಮಾಡಿ, ಎಲ್ಲಾ ವಾಳೆಯವರಿಗೆ ಶುಭ ಹಾರೈಸಿದರು
ಈ ಪ್ರತಿಭಾ ದಿನಕ್ಕೆ ಚರ್ಚಿನ ಎಲ್ಲಾ 13 ವಾಳೆಯವರು, ವಿವಿಧ ರೀತಿಯ ಕಿರು ನಾಟಕ, ಸಂಸ್ಕ್ರತಿ ಪ್ರದರ್ಶನ, ನ್ರತ್ಯ, ಹಾಡು, ಗುಮ್ಟಾ ಸಂಗೀತ, ಹಾಸ್ಯಗಳಿಂದ ಕೂಡಿದ ಪ್ರದರ್ಶನ ನೀಡಿದರು. ಎಲ್ಲಾ ವಾಳೆಯವರಿಗಾಗಿ ಸಂಗೀತಕ್ಕೆ ತಕ್ಕಂತೆ ಕುಣಿತದ ಪ್ರದರ್ಶನ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಐ.ಸಿ.ವೈ.ಎಮ್ ಅಧ್ಯಕ್ಷ ಹರ್ಸಲ್ ಕೋತಾ, ಕಾರ್ಯದರ್ಶಿ ಡೆಲ್ವಿಯಾ ಬರೆಟ್ಟೊ ಸಚೇತಕ ಕಿರಣ್ ಪಾಯ್ಸ್ ಹಾಜರಿದ್ದರು, ಸ್ಯಾಮುವೇಲ್ ಲುವಿಸ್ ಮತ್ತು ವಿಯೊನ್ನಾ ಡಿಸೋಜಾ ನಿರೂಪಿಸಿದರು.























