

ಕುಂದಾಪುರ: ಸೆಪ್ಟೆಂಬರ್ 10ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರಾದ ಡಾ. ಎ. ಎಸ್. ಭಂಡಾರ್ಕರ್ ಅವರ ಪತ್ನಿ ದಿವಂಗತ ಶ್ರೀಮತಿ ಸುಲೋಚನಾಬಾಯಿ ಭಂಡಾರ್ಕರ್ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಡಾ.ಎ.ಎಸ್.ಭಂಡಾರ್ಕರ್ ಅವರು ಕಾಲೇಜಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿಲಾಯಿತು.
ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ.ದೇವದಾಸ ಕಾಮತ್, ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ , ಸದಸ್ಯರಾದ ಪ್ರಜ್ನೇಶ್ ಪ್ರಭು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್ ಉಪಸ್ಥಿತರಿದ್ದರು. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ನಂತರ ಡಾ.ಎ.ಎಸ್ ಭಂಡಾರ್ಕರ್ ಅವರ ಪುತ್ರಿ ಮಹಾಮಾಯಾ ಭಂಡಾರ್ಕರ್ ಆಶಯದಂತೆ ದಿವಂಗತ ಶ್ರೀಮತಿ ಸುಲೋಚನಾಬಾಯಿ ಭಂಡಾರ್ಕರ್ ಜನ್ಮದಿನದ ಸ್ಮರಣಾರ್ಥ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಿಶೇಷ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು

