

ಕುಂದಾಪುರ ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆ ದಲ್ಲಿ ಸೆಪ್ಟಂಬರ್ 5 ರಂದು ಶಾಲಾ ವಿದ್ಯಾರ್ಥಿಗಳೆಲ್ಲರೂ ಸೇರಿ ಶಿಕ್ಷಕರೊಂದಿಗೆ ಸಂಭ್ರಮದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಆದರ್ಶ ಹೆಬ್ಬಾರ್,ಆದರ್ಶ ಹಾಸ್ಪಿಟಲ್ ನ ಸಂಸ್ಥಾಪಕರು, ಇವರು ತಮ್ಮ ಶಿಕ್ಷಕಿಯಾದ ಶಾಲಾ ಸಂಚಾಲಕಿ ಶ್ರೀಮತಿ ಐರಿನ್ ಸಾಲಿನ್ಸ್ ರವರನ್ನು ಸನ್ಮಾನಿಸಿದರು. ಮಕ್ಕಳೆಲ್ಲರೂ ಶಿಕ್ಷಕರಲ್ಲರಿಗೂ ವಿವಿಧ ಬಗೆಯ ಉಡುಗೊರೆಗಳನ್ನು ಮನೋರಂಜನೆಗಳನ್ನು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅದಕ್ಕೆ ಬಹುಮಾನಗಳನ್ನು ನೀಡಿ ಶಿಕ್ಷಕರ ಮನೆಗೆದ್ದರು. ವೇದಿಕೆಯಲ್ಲಿ ಅಧ್ಯಕ್ಷರಾದ ಶಾಲಾ ಸಂಚಾಲಕಿ ಶ್ರೀಮತಿ ಐರಿನ್ ಸಾಲಿನ್ಸ ಮುಖ್ಯಅತಿಥಿಗಳಾದ ರೆವೆರೆಂಡ್ ಇಮ್ಮನುಲ್ ಜಯಕರ,ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್
ಡಿಸೋಜಾ ಸಿ ಎಸ್ ಐ ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸವಿತಾ, ಕುಂದಾಪುರ ರೋಟರೆಕ್ಟ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಡಾ.ಆದರ್ಶ ಹೆಬ್ಬಾರ್ ಅದರ ಕಾರ್ಯದರ್ಶಿಗಳಾದ ಮನೋಹರ್ ಪಿ ಉಪಸ್ಥಿತರಿದ್ದರು. ಏಳನೆಯ ತರಗತಿಯ ವಿದ್ಯಾರ್ಥಿನಿ ನೇಹಾ ಶಿಕ್ಷಕರ ದಿನದ ಕುರಿತು ಭಾಷಣ ಮಾಡಿದಳು., ತಮನ್ನಾ ಎಲ್ಲರನ್ನೂ ಸ್ವಾಗತಿಸಿದಳು, ಶಾಲಾ ಸಹ ಶಿಕ್ಷಕಿ ಶ್ರೀಮತಿ ಪವಿತ್ರ ಮತ್ತು ಏಳನೆಯ ತರಗತಿಯ ವಿದ್ಯಾರ್ಥಿನಿ ಶರಣ್ಯ ನಿರೂಪಣೆ ಮಾಡಿದರು.
Kundapur; Teachers’ Day celebration at UBMC and CSI Krupa English Medium School

UBMC and CSI Krupa English Medium School, Kundapur celebrated Teachers’ Day with great enthusiasm on Saturday, September 5, with the school’s alumni Adarsh Hebbar, founder of Adarsh Hospital, felicitating his teacher, the school’s director Mrs. Irene Sallins. The children presented various gifts, entertainment, and various competitions to all the teachers and gave prizes to the teachers. The presiding officer of the school, Mrs. Irene Sallins, was present on the stage. The chief guests were Reverend Immanul Jayakar, school principal Anita Alice D’Souza, headmistress of CSI Krupa Nursery School, Mrs. Savita, president of Kundapur Rotaract Club, Mr. Adarsh Hebbar, and its secretary Manohar P. Neha, a seventh grade student, gave a speech on Teachers’ Day. Tamanna welcomed everyone, while the school’s co-teacher, Mrs. Pavitra, and Sharanya, a seventh grade student, gave a presentation.


























