

ಕುಂದಾಪುರ: ಗಾಣಿಗರಬೆಟ್ಟು ಆನಗಳ್ಳಿ ಗ್ರಾಮದ ಉದಯ (30) ರವರು ಹೊಳೆಯಲ್ಲಿ ಬಲೆ ಹಾಕಿ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, 27/08/2026 ರಂದು ಬೆಳಿಗ್ಗೆ 09.15 ಗಂಟೆಗೆ ಮನೆಯಿಂದ ಬಲೆಯನ್ನು ತೆಗೆದುಕೊಂಡು ಮೀನು ಹಿಡಿಯಲು ಹೋದವರು ವಾಪಾಸು ಬಾರದೇ ಇದ್ದು, ಹುಡುಕಾಡಿದಾಗ ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿ ಮಂಜು ಬಿಲ್ಲವ ಎಂಬವವರಿಗೆ ಸೇರಿದ ಕೆರೆಯಲ್ಲಿ ಉದಯರವರ ಬಲೆ ಕಂಡುಬಂದಿದ್ದು, ಬೆಳಿಗ್ಗೆ 10.30 ಗಂಟೆ ಸುಮಾರಿಗೆ ನೋಡಲಾಗಿ ಕೆರೆಯ ನೀರಿನಲ್ಲಿ ಬಲೆ ಸಮೇತ ಉದಯ ರವರ ಮೃತ ದೇಹ ಕಂಡುಬಂದಿರುತ್ತದೆ. ಉದಯ ರವರು ಮೀನು ಹಿಡಿಯಲು ಕೆರೆಯಲ್ಲಿ ಬಲೆ ಹಾಕಿದ ಸಮಯ ಆಕಸ್ಮಿಕವಾಗಿ ಬಲೆ ಸಮೇತ ಕೆರೆಯ ನೀರಿಗೆ ಬಿದ್ದು, ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ .ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿದೆ

