

ಕುಂದಾಪುರ, (ಅ.15) ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಸಡಗರ ಮತ್ತು ಭಕ್ತಿಯಿಂದ ಅಗೋಸ್ಟ್ 15 ರಂದು ಆಚರಿಸಲಾಯಿತು.ಮೇರಿ ಮಾತೆ ದೇವ ಪುತ್ರ ಯೇಸುವಿನ ಮಾತೆ. ಹೇಗೆ ಯೇಸು ಕ್ರಿಸ್ತರು ಪಾಪ ರಹಿತನೊ, ಮೇರಿ ಮಾತೆಯು ಪಾಪರಹಿತೆ, ದೇವರು ಒರ್ವ ಬಡ, ಸುಗುಣವಂತೆ ಕನ್ಯೆಯನ್ನು ಆರಿಸಿದನು, ಅವಳೇ ಮೇರಿ, ಅವಳು ಯೇಸುವನ್ನು ಜನ್ಮ ನೀಡಿ, ಮಗ ಪುತ್ರನ ಮಾನವರನ್ನು ಪಾಪದಿಂದ ವಿಮೋಚನೆ ಮಾಡಿ ಮಾನವನ ರಕ್ಷಣೆಯ ಕಾರ್ಯದಲ್ಲಿ ಕೊಟ್ಟಿಗೆಯಿಂದ ಹಿಡಿದು ಶಿಲುಭೆಯ ತನಕ ಪುತ್ರನಿಗೆ ಜೊತೆ ನೀಡಿದಳು, ಅವಳು ಯೇಸುವಿನ ಪ್ರಥಮ ಶಿಸ್ಯೆ, ಅವಳ ನಿಷ್ಠೆಗೆ ಬಹುಮಾನವಾಗಿ ದೇವರು ಮೇರಿ ಮಾತೆಯನ್ನು ಜೀವಂತವಾಗಿ ಸ್ವರ್ಗಕ್ಕೆ ಬರಮಾಡಿಕೊಂಡನು, ಮೇರಿ ಮಾತೆ ಜಗದ ಮತ್ತು ಸ್ವರ್ಗಲೋಕದ ರಾಣಿಯಾಗಿದ್ದಾಳೆ, ಸ್ವರ್ಗದಲ್ಲಿ ನಮಗಾಗಿ ಅನುದಿನವೂ ದೇವರಲ್ಲಿ, ಪ್ರಾಥಿಸುತ್ತಾಳೆ’ ಎಂದು ಸಂದೇಶ ನೀಡಿದರು
ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಂತ ಮೇರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ।ಧರ್ಮಗುರು ರೋಲ್ವಿನ್ ಫೆರ್ನಾಂಡಿಸ್ ಸಹ ಬಲಿದಾನವನ್ನು ಅರ್ಪಿಸಿದರು. ಬಹಳ ವರ್ಷಗಳಿಂದ ಪ್ರಚಲಿತವಿದ್ದು ಕೊಂಕಣಿ ಭಾಷೆಯಲ್ಲಿ ನಡೆಯುತಿದ್ದ ಬಲಿದಾನದ ಪ್ರಾರ್ಥನ ವಿಧಿಯ, ಪ್ರಾರ್ಥನೆಗಳ ಶ್ಲೋಕಗಳನ್ನು ಪವಿತ್ರ ಸಭೆಯು ಸ್ವಲ್ಪ ಬದಲಾವಣೆ ಮಾಡಿ, ಗೋವ,ರತ್ನಗಿರಿ ಮಂಗಳೂರು ಧರ್ಮಪ್ರಾಂತ್ಯಗಳಿಗೆ ಒಂದೇ ಥರನಾಗಿ ಬದಲಾವಣೆ ತಂದು, ಇಂದಿನಿಂದ ಏಕಕಾಲಕ್ಕೆ ನೂತನವಾಗಿ ಆರಂಭಗೊಂಡವು. ಈ ಹಬ್ಬದ ಬಲಿದಾದಲ್ಲಿ,ಧರ್ಮ ಭಗಿನಿಯರು, ಪಾಲನ ಮಂಡಳಿಯವರು, ಸಂಘ ಸಂಸ್ಥೆಯವರು, ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದು, ಪವಿತ್ರ ಬಲಿದಾನದ ಪ್ರಾರ್ಥನ ವಿಧಿಗಳನ್ನು ಚಿಕ್ಕವರ ಮೇರಿ ಸೊಡೆಲಿಟಿಯ ಮಕ್ಕಳು ನಡೆಸಿಕೊಟ್ಟರು.

















