

ಕುಂದಾಪುರ; ತೆಕ್ಕಟ್ಟೆ ಶ್ರೀ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜುಲೈ 19ರ ಭಾನುವಾರ ನಡೆದ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಪದಪ್ರದಾನ ಸಮಾರಂಭದಲ್ಲಿ,
PMJF Ln ವೆಂಕಟೇಶ್ ಹೆಬ್ಬಾರ್ ರ ಅಮೃತ ಹಸ್ತಗಳಿಂದ ಪದ ಪ್ರದಾನ ಸಮಾರಂಭ ನೆರವೇರಿತು. ನೂತನ PSTಗಳಾಗಿ Ln ಚಂದ್ರಿಕಾ ಧನ್ಯ, Ln ಜಯಶೀಲ ಕಾಮತ್ ಹಾಗೂ Ln ಶುಭಾ ಶೇಟ್ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಸದಾನಂದ ನಾವುಡ, Zone 1 ರ ವಲಯ್ಯಾಧ್ಯಕ್ಷರಾದ ಲಯನ್ ರವೀಂದ್ರ ಕಾವೇರಿ, ಪ್ರಾಂತ್ಯ 2ರ ಪ್ರಾಂತ್ಯಾಧ್ಯಕ್ಷರಾದ ಲಯನ್ ಸರಸ್ವತಿ ಪುತ್ರನ್, ಕಾರ್ಯದರ್ಶಿಯವರಾದ ಲಯನ್ ಆಶಾ ಶಿವರಾಮ ಶೆಟ್ಟಿ, ಎಕ್ಸ್ಟೆಂಶನ್ ಚೇರ್ ಪರ್ಸನ್ ಲಯನ್ ಅಕ್ಷಯ್ ಹೆಗ್ಡೆ ಮೊಳಹಳ್ಳಿ, Dist GAT officer Ln ಅರುಣ್ ಕುಮಾರ್ ಹೆಗಡೆ, ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾ ಭಾಸ್ಕರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸ್ಯಾಕ್ಸೋಫೋನ್ ವಾದನದಲ್ಲಿ ಅದ್ವಿತೀಯ ಸಾಧನೆ ಮೆರೆದ ಅರಳು ಪ್ರತಿಭೆ, ಕುಮಾರಿ ಐಸಿರಿ ದೇವಾಡಿಗ, ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಅಡಿಗ ಇವರನ್ನು ಸನ್ಮಾನಿಸಲಾಯಿತು. ಪರಿಸರದ ಭಜನೆ ಗುರುಗಳಾದ ಶ್ರೀ ದಿನೇಶ್ ಸುವರ್ಣ ಇವರಿಗೆ ” ಕರಾವಳಿ ಭಜನಾ ಗುರು ” ಬಿರುದು ನೀಡಿ ಗೌರವಿಸಲಾಯಿತು. ಪರಿಸರದ ಈರ್ವರು ಅಸಹಾಯಕರನ್ನು ಗುರುತಿಸಿ, ತಲಾ 5,000 ಹಾಗೂ 10,೦೦೦ ಚೆಕ್ಕುಗಳನ್ನು ವಿತರಿಸಲಾಯಿತು.
Ln ಡಾ| ಮೈತ್ರಿ ಜಿ ನಾಯಕ್ ಫ್ಲಾಗ್ ಸೆಲ್ಯೂಟೇಷನ್ ಹಾಗೂ Ln ಗೀತಾಂಜಲಿ ನಾಯಕ್ ಇವರು ಲಯನ್ ಕೋಡ್ ಆಫ್ ಎಥಿಕ್ಸ್ ವಾಚಿಸಿದರು. ಲಯನ್ ಪ್ರತಿಮಾ ಪ್ರಾರ್ಥಿಸಿದರು. ಲಯನ್ ಕಲ್ಪನಾ ಭಾಸ್ಕರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಲಯನ್ ಸುಮಶ್ರೀ ಧನ್ಯ ,ಲಯನ್ ಸುಪ್ರಿಯ ಶೆಟ್ಟಿ, ಲಯನ್ ದೀಪಿಕಾ ಸಾಮಗ,ಲಯನ್ ಗೀತಾಂಜಲಿ ನಾಯಕ್ , Ln ಪ್ರತಿಮಾ ,ಮುಖ್ಯ ಅತಿಥಿಗಳ ,ಸನ್ಮಾನಿತರ ಪರಿಚಯ ಮಾಡಿಕೊಟ್ಟರು.ಲಯನ್ ಚಂದ್ರಿಕಾ ಧನ್ಯ ಇವರು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಲಯನ್ ಜಯಶೀಲಾ ಕಾಮತ್ ಧನ್ಯವಾದ ಸಮರ್ಪಣೆ ಮಾಡಿದರು. ಲಯನ್ ಡಾ|| ವಾಣಿಶ್ರೀ ಐತಾಳ್ ಹಾಗೂ ಲಯನ್ ಶ್ರುತಿ ಶೆಟ್ಟಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಆರಭಿ ಸಾಮಗಳಿಂದ ಸ್ವಾಗತ ನೃತ್ಯ ಹಾಗೂ ಐಸಿರಿ ದೇವಾಡಿಗ ಇವರಿಂದ ಸ್ಯಾಕ್ಸೋಫೋನ್ ವಾದನ ಜರುಗಿತು
ಪ್ರಾಂತ್ಯದ ಎಲ್ಲಾ ಪಿಎಸ್ಟಿಗಳು ಹಾಗೂ ಲಯನ್ಸ್ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಎಲ್ಲರಿಗೂ ರಾಂಬುಟನ್ ಗಿಡವನ್ನು ಕಾರ್ಯಕ್ರಮದ ಸವಿ ನೆನಪಿಗಾಗಿ ಹಂಚಲಾಯಿತು.












