

ಕುಂದಾಪುರ ; ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಪದಪ್ರದಾನ ಸಮಾರಂಭ ‘ಸಹನ’ದ ಕೃಷ್ಣ ಸಭಾಂಗಣದಲ್ಲಿ ಐವತ್ತು ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿದ ಕ್ಲಬ್ಬಿನ ಹಿರಿಯ ಸದಸ್ಯ ರೊ. ಡಾ. ರಾಮಮೋಹನ ದಂಪತಿಯನ್ನು ಸಮಾರಂಭದಲ್ಲಿ ಗುರುತಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಡಾ. ರಾಜಗೋಪಾಲ್ ಶೆಣೈ , ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಕೆ ಎಮ್ ಸಿ ಮಣಿಪಾಲ್ ಇವರು ಉಪಸ್ಥಿತರಿದ್ದರು . ಸಭಾ ಕಾರ್ಯಕ್ರಮವನ್ನು 2025-2026 ರ ಅಧ್ಯಕ್ಷ ರೊ. ಸಚಿನ್ ನಕ್ಕತ್ತಾಯ ವಿದ್ಯುಕ್ತವಾಗಿ ಆರಂಭಿಸಿದ ನಂತರ ರೊ. ಶ್ರೀನಿವಾಸ ಶೇಟ್ ಅವರ ಪ್ರಾರ್ಥನೆ, ಅಧ್ಯಕ್ಷರಿಂದ ಸ್ವಾಗತ, 2025-2026 ರ ಕಾರ್ಯದರ್ಶಿ ರೊ. ಜೆರಾಲ್ಡ್ ಕ್ರಾಸ್ಟ ದೃಶ್ಯ ಮಾಧ್ಯಮದ ಮೂಲಕ ಕ್ಲಬ್ಬಿನ ಕಾರ್ಯಕ್ರಮಗಳ ವಿವರ – ಹೀಗೆ ಕಾರ್ಯಕ್ರಮಗಳು ನಡೆದವು. 2026-2027 ರ ಸಾಲಿನ ಅಧ್ಯಕ್ಷ ರೊ. ಡಾ. ಆದರ್ಶ ಹೆಬ್ಬಾರ್ ಇವರ ಪರಿಚಯವನ್ನು ರೊ. ರಮಾನಂದ ಕಾರಂತ ಹಾಗೂ ಕಾರ್ಯದರ್ಶಿಯವರ ಪರಿಚಯವನ್ನು ರೊ.ಡಾ. ಉತ್ತಮ ಕುಮಾರ್ ಶೆಟ್ಟಿ ನಡೆಸಿದ ನಂತರ ಸಹಾಯಕ ಗವರ್ನರ್ ರೊ. ಶ್ರೀನಾಥ್ ಪದ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು . ನೂತನ ಅಧ್ಯಕ್ಷರು ತಮ್ಮ ತಂಡದ ಪರಿಚಯ ಮಾಡಿದ ನಂತರ ತಾನು ಕ್ಲಬ್ಬಿನಲ್ಲಿ ಅಧ್ಯಕ್ಷನಾಗಿ ಮುಂದುವರಿಯಲು ತನ್ನ ಸಹಮತವನ್ನು ತಿಳಿಸಿ ತನ್ನ ಮುಂದಿನ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಸದಸ್ಯರ ಸಹಕಾರವನ್ನು ಕೋರಿದರು. ಅದೇ ದಿನ ಡಾ. ವಿಷ್ಣುಮೂರ್ತಿ ಐತಾಳ್, ಡಾ. ಸ್ನೇಹ ಐತಾಳ್ ಹಾಗೂ ಜೇನಿಫ್ಫ್ ರೀಮಾ ಡಿ ಅಲ್ಮೇಡಾ ಅವರನ್ನು ಕ್ರಮವಾಗಿ ರೊ.ಡಾ ಅನುಲೇಖ ಬಾಯರಿ , ರೊ. ಡಾ. ಪ್ರಿಯಾಂಕಾ ಜೋಗಿ ಹಾಗೂ ರೊ. ಸುಪ್ರೀತ್ ಛಾತ್ರ ಸಭೆಗೆ ಪರಿಚಯಿಸಿದ ನಂತರ ಅವರನ್ನು ಹೊಸ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು. ಪದ ಪ್ರದಾನ ಅಧಿಕಾರಿಯಾಗಿ ಸಹಾಯಕ ಗವರ್ನರ್ ರೊ. ಶ್ರೀನಾಥ್ ರಾವ್ ರೋಟರಿ ಧ್ಯೇಯಗಳೊಂದಿಗೆ ಈ ಕ್ಲಬ್ , 2026-2027 ರಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಲಿ ಎಂದು ಹಾರೈಸಿದರು. ಕ್ಲಬ್ ಮುಖವಾಣಿ ‘ಜಾಸ್ಮಿನ್’ ಇದರ ಸಂಪಾದಕಿ ರೊ. ಸುರೇಖ ಪುರಾಣಿಕ ಇವರ ಸಹಕಾರದೊಂದಿಗೆ ವಿಶೇಷ ಸಂಚಿಕೆಯನ್ನು ವಲಯ ಸೇನಾನಿ ರೊ. ಸತ್ಯನಾರಾಯಣ ಪುರಾಣಿಕ ಬಿಡುಗಡೆ ಗೊಳಿಸಿ ಕ್ಲಬ್ಬಿನ ವಿಶೇಷತೆಗಳನ್ನು ಶ್ಲಾಘಿಸಿದರು.
ಸಮಾಜ ಸೇವೆಯಾಗಿ ರೊ. ನಂದಾ ನಾಯಕ್ ವಿಶೇಷ ಮಕ್ಕಳ ಶಾಲೆಗೆ ನೀಡಲಾದ ಸಹಾಯಧನ, ರೊ. ಶ್ರೀಧರ ಶೆಟ್ಟಿಯ ಅವರು ವಂಡ್ಸೆ ಸರಕಾರಿ ಶಾಲೆಯ ಶಿಕ್ಷಕರಿಗೆ ನೀಡಲಾದ ವೇತನದ ಹಣವನ್ನು ಹಾಗೂ ರೊ. ಮನೋಹರ್ ಪ್ರಾಯೋಜಕತ್ವದ ಉತ್ತಮ ಅಂಕ ಗಳಿಸಿ ಪ್ರಸ್ತುತ ಪಿಯುಸಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಸಹಾಯಧನ ಇವೆಲ್ಲವನ್ನೂ ಫಲಾನುಭವಿಗಳಿಗೆ ನೀಡಲಾಯಿತು.ರೊ. ಡಾ. ಉಮೇಶ ಪುತ್ರನ್ ಮುಖ್ಯ ಅತಿಥಿ ಡಾ. ರಾಜಗೋಪಾಲ್ ಶೆಣೈ ಅವರನ್ನು ಸಭೆಗೆ ಪರಿಚಯಿಸಿದರು. ಡಾ. ಶೆಣೈ ಅವರು ತಾನು ಕೂಡಾ ಸೇವಾ ಸಂಸ್ಥೆಯ ಸದಸ್ಯನಾಗಿದ್ದು ಸಮಾಜ ಸೇವೆ ಮಾಡುವ ಸಂತೋಷವನ್ನು ವ್ಯಕ್ತ ಪಡಿಸುತ್ತಾ ರೋಟರಿ ಧ್ಯೇಯ ವಾಕ್ಯ “ಶಾಶ್ವತ ಪರಿಣಾಮ ನೀಡುವಂತಹ” ಕಾರ್ಯಕ್ರಮಗಳನ್ನು ಮಾಡಿ ಎಂದು ಹಾರೈಸಿದರು. ಸಭೆಗೆ ಬಂದ ರೋಟರಿ ಗಣ್ಯರನ್ನು ಗುರುತಿಸಿದ ನಂತರ ಕಾರ್ಯದರ್ಶಿ ರೊ ಮನೋಹರ ಪಿ ಧನ್ಯವಾದ ನೀಡಿದರು.

