

ಕಾರವಾರ : ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ ಅರತಿ ಬೈಲ್ ಬಳಗಾರ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಧಾರವಾಡ ಮೂಲದ ಪ್ರವಾಸಿಗರು ಕ್ರೂಶರ್ ವಾಹನದಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದರು. ಕ್ರೂಶರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಅಪಘಾತದ ರಭಸಕ್ಕೆ ಕ್ರೂಷರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿ, ರಸ್ತೆ ಪಕ್ಕದ ಗಟಾರಕ್ಕೆ ಬಿದ್ದಿದೆ. ಸ್ಥಳದಲ್ಲಿ ಆರು ಜನ ಪ್ರವಾಸಿಗರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀವೇಗ ಹಾಗೂ ನಿಷ್ಕಾಳಜಿತನದಿಂದ ವಾಹನ ಚಲಾಯಿಸಿದ್ದು ಅಪಘಾಯಕ್ಕೆ ಕಾರಣ ಎನ್ನಲಾಗಿದೆ. ಅಂಕೋಲಾ ಕಡೆಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಲಾರಿಗೆ ಎದುರಿನಿಂದ ಕ್ರೂಶರ್ ವಾಹನ ಡಿಕ್ಕಿ ಹೊಡೆದಿದೆ ಅಕ್ಷಯ, ಅಭಿಷೇಕ ಈಶ್ವರ, ಅಭಿಷೇಕ ಮಡಬಾವಿ, ಬಸಪ್ಪ ದೇವಪ್ಪ ಕನಕನವರ ಸ್ಥಳದಲ್ಲಿಯೇ ಧಾರುಣ ಸಾವು ಕಂಡಿದ್ದಾರೆ. ಚಾಲಕ ಸಂಜೀವ ಮೈಲಾರ ಅಂಗಡಿ ಕುಡುಬಗಟ್ಟಿ ಸಹ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಡಿಸಿ -ಎಸ್ಪಿ ಭೇಟಿ :
ಸ್ಥಳಕ್ಕೆ ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಎಸ್ಪಿ ದಿಲೀಪ್ ಎಂ.ಎನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ ಶಶಿ, ಅಪಘಾತ ಸ್ಥಳ ವೀಕ್ಷಿಸಿ, ಗಾಯಾಳುಗಳಿಗೆ ನೆರವಾದರು. ಶಿರಸಿ ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್, ಮುಂಡಗೋಡ ಸಿಪಿಐ ರಮೇಶ ಹಾನಾಪುರ,ಪಿಎಸ್ಐ ಸಿದ್ದಪ್ಪ ಗುಡಿ,ರಾಜಶೇಖರ ವಂದಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

