

ಬೈಂದೂರು : ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಮೊಬೈಲ್ ಇ ವಿ ಎಂ ಮೂಲಕ ಡಿಜಿಟಲ್ ಮಾದರಿಯಲ್ಲಿ ನಡೆಯಿತು. ಮಕ್ಕಳಲ್ಲಿ ಮತದಾನದ ಜಾಗೃತಿ ಮತ್ತು ಮಹತ್ವ ತಿಳಿಯುವ ಉದ್ದೇಶ, ಪ್ರಜಾಪ್ರಭುತ್ವದ ಮೌಲ್ಯಗಳು,ನಾಯಕತ್ವದ ಗುಣಗಳು ಹಾಗೂ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ನಾಯಕ ಉಪನಾಯಕ ಹಾಗೂ ವಿವಿಧ ಕ್ಲಬ್ ಗಳ ಪದಾಧಿಕಾರಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಿತು. ವಿದ್ಯಾರ್ಥಿಗಳು
ಸಕ್ರೀಯವಾಗಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತ ಎಣಿಕೆಯ ಬಳಿಕ ಫಲಿತಾಂಶವನ್ನು ಘೋಷಿಸಲಾಯಿತು. ಶಾಲಾ ನಾಯಕನಾಗಿ ಸಾಕ್ಷತ್ ಹಾಗೂ ಉಪನಾಯಕಿಯಾಗಿ ಅಂಜಲಿ, ಕ್ರೀಡಾ ಮಂತ್ರಿಯಾಗಿ ಧನ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ಜಾನ್ವಿ, ಶಿಸ್ತಿನ ಮಂತ್ರಿಯಾಗಿ ಅಫಾಫ್ ಹಾಗೂ ಆಹಾರ ಮಂತ್ರಿಯಾಗಿ ಚಕ್ರವರ್ತಿ ಆಯ್ಕೆಯಾದರು ಮುಖ್ಯ ಚುನಾವಣಾಧಿಕಾರಿಯಾಗಿ ಸಂಸ್ಥೆಯ ಪ್ರಾಂಶುಪಾಲ ಡಾI ರವಿದಾಸ್ ಶೆಟ್ಟಿ ಕಾರ್ಯ ನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ನವ್ಯಾ, ದೇವಕಿ, ಮೈನಾ,ವೇದಾ,ವಿದ್ಯಾಶ್ರೀ, ತೇಜಸ್ವಿನಿ, ನಾಗರತ್ನ, ಪವಿತ್ರಾ ಮತ್ತು ರೇಣುಕಾ ಹಾಗೂ ಮಂಜುನಾಥ್ ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಕರೆ ನೀಡಲಾಯಿತು.






