

ಕುಂದಾಪುರ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದಿಂದ ವಕ್ವಾಡಿ ಹೂವಿನಕೆರೆ ಸಮೀಪದಲ್ಲಿ ಇತ್ತೀಚೆಗೆ “ರೆಡ್ ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ ” ನಿವೇಶನದಲ್ಲಿ ನೂರಕ್ಕೂ ಅಧಿಕ ವಿವಿಧ ಹಣ್ಣು ಹಂಪಲದ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮುಖ್ಯ ಅತಿಥಿಗಳಾಗಿ ಹರ್ಷ ರಿಫ್ರೆಶಮೆಂಟನ ಮಾಲಿಕರಾದ ಪತ್ತುಮುಡಿ ರಘುರಾಮ ರಾವ್ ಗಿಡ ನೆಟ್ಟು ವಿಶ್ವ ಪರಿಸರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಕೋರಿದರು. ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ.ಸೋನಿ ಡಿ ಕೋಸ್ಟ, ಅನಿಲ್ ಕುಮಾರ ಶೆಟ್ಟಿ, ಸದಸ್ಯರಾದ ಬಿ.ಎಂ. ಚಂದ್ರಶೇಖರ, ಆಶಾ ಶಿವರಾಮ ಶೆಟ್ಟಿ ಹಾಗೂ ವೀರೇಂದ್ರ ಸಕ್ರಿಯವಾಗಿ ಪಾಲ್ಗೊಂಡರು.

