

ಬೈಂದೂರು; ಮೇ. ಬೈಂದೂರಿನ ಹೋಲಿಕ್ರಾಸ್ ಚರ್ಚ್ನ ನೂತನ ಧರ್ಮಗುರುಗಳಾಗಿ ವಂದನೀಯ ಡೆನ್ನಿಸ್ ಡಿ’ಸೋಜಾರವರು 12 ರಂದು ಅಧಿಕಾರ ವಹಿಸಿಕೊಂಡರು, ಪ್ರಸ್ತುತ ಧರ್ಮಗುರು ವಂ.ವಿನ್ಸೆಂಟ್ ಕುವೆಲ್ಲೊ, ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೆಪನ್ ಡಯಾಸ್ ಅವರು ನೂತನ ಧರ್ಮಗುರುಗಳನ್ನು ಚರ್ಚಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ.ಪಾವ್ಲ್ ರೇಗೊ ರವರು ಅಧಿಕಾರ ಸ್ವೀಕಾರ ಸಮಾರಂಭದ ವಿಧಿ ವಿಧಾನಗಳನ್ನು ನೆರವೆರಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ವಲಯದ ಪ್ರಧಾನ ಧರ್ಮಗುರು ವಂ.ಆಲ್ಬನ್ ಡಿ’ಸೋಜಾ, ವಂ.ರೋಮನ್ ಮಸ್ಕರೆನ್ಹಸ್, ವಂ.ಹೆರಾಲ್ಡ್ ಪಿರೇರಾ, ವಂ.ಅಶ್ವಿನ್ ಆರಾನ್ಹಾ, ವಂ.ಎಡ್ವಿನ್ ಡಿ’ಸೋಜಾ, ವಂ.ವಿಶಾಲ್ ಲೋಬೊ, ವಂ.ನೆಲ್ಸನ್ ರೆಬೆರೊ, ವಂ.ಮ್ಯಾಪ್ಲಿನ್ ಲೋಬೊ, ಸಿಸ್ಟರ್ ಆನ್ಸಿ ಪಾವ್ಲ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಆಯೋಗಗಳ ಸಂಯೋಜಕಿ ಜೋಸ್ಪಿನ್ ರೊಡ್ರಿಗಸ್ ಉಪಸ್ಥಿತರಿದ್ದರು.





























