

ಒಮಾನ್ನಲ್ಲಿ ದಿಢೀರ್ ಪ್ರವಾಹ ಸಂಭವಿಸಿದ್ದು, ಭಾರತೀಯರು ಸೇರಿದಂತೆ ನಾಲ್ವರ ಸಾವನ್ನಪ್ಪಿದ್ದಾರೆ. ಕೇರಳದ ಇಬ್ಬರು ಮೃತಪಟ್ಟಿದ್ದು ಇನ್ನೋರ್ವ ಮಹಿಳೆ ನಾಪತ್ತೆಯಾಗಿದ್ದಾರೆ. ತುರ್ತು ನೆರವು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಸನ್ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರವನ್ನು ಬರೆದಿದ್ದಾರೆ. ಘಟನೆ ಈದ್ ಹಬ್ಬದಂದು ನಡೆದಿದೆ
ಪ್ರವಾಹದಲ್ಲಿ ಕೇರಳದ ತ್ರಿಥಾಲದ ನಿವಾಸಿಗಳಾದ ಯೂಸುಫ್ ಮತ್ತು ಶಮ್ಲಾ ಸಾವನ್ನಪ್ಪಿದ್ದಾರೆ. ಕಾಣೆಯಾದ ಮಹಿಳೆಯನ್ನು ತ್ರಿಥಾಲ ಮೂಲದವರಾದ ರಮ್ಲಾ ಎಂದು ಗುರುತಿಸಲಾಗಿದೆ.ವರದಿಗಳ ಪ್ರಕಾರ, ಒಮಾನ್ನ ಅಲ್ ಬಟಿನಾ ಗವರ್ನರೇಟ್ನಲ್ಲಿ ದಿಢೀರ್ ಆಗಿ ಪ್ರವಾಹ ಸಂಭವಿಸಿದೆ. ಈ ವೇಳೆ ಮೃತರು ಕಾರಿನಲ್ಲಿದ್ದರು ಎಂದು ಹೇಳಲಾಗಿದೆ. ಸಂತ್ರಸ್ತರನ್ನು ಸುರಕ್ಷಿತವಾಗಿ ಕರೆತರಲು ಮತ್ತು ಮೃತರ ಕುಟುಂಬಗಳಿಗೆ ಸಹಾಯ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವಂತೆ ಸತೀಸನ್ ಪ್ರಧಾನಿ ಮೋದಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸಲು ಮತ್ತು ಬಲಪಡಿಸುವಂತೆ ಒಮಾನಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಕೇಂದ್ರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸತೀಸನ್ ಒತ್ತಾಯಿಸಿದ್ದಾರೆ.


