

ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ನಲ್ಲಿ “ಅಪ್ಪಂದಿರ ದಿನಾಚರಣೆ ‘ನಡೆಯಿತು ಉಡುಪಿ ಧರ್ಮ ಪ್ರಾಂತ್ಯದ “ಉಜ್ವಾಡ್ “ಪತ್ರಿಕೆಯ ಸಂಪಾದಕರಾದ ಫಾದರ್ ಆಲ್ವಿನ್ ಸಿಕ್ವೇರಾ ಬಲಿ ಪೂಜೆ ನಡೆಸಿ ಅಪ್ಪಂದಿರ ದಿನಾಚರಣೆ ಮಹತ್ವ ತಿಳಿಸಿ ಕುಟುಂಬದಲ್ಲಿ ತಾಯಿಗೆ ಮಹತ್ವದ ಸ್ಥಾನವಿದೆ ಅಷ್ಟೇ ಸ್ಥಾನ ತಂದೆಗೆ ಇದ್ದು , ಅಪ್ಪಂದಿರನ್ನು ಹೂವಿನ ತೋಟದ ಮಾಲಿಕನಿಗೆ ಹೊಲಿಕೆ ಮಾಡಿ ಅವನು ಗಿಡಗಳನ್ನು ನೆಟ್ಟು ಅದಕ್ಕೆ ಸಮಯಕ್ಕೆ ಸರಿಯಾಗಿ ಗೊಬ್ಬರದ ರೀತಿ ಪಾಲನೆ ಪೋಷಣೆ ನೀರಿರುಣಿಸುತ್ತಾ ತನ್ನ ಕರ್ತವ್ಯಹಿಸಿ ತನ್ನ ಕುಟುಂಬ ಹಾಗೂ ಸಮಾಜ ಕಟ್ಟುವ ಕೆಲಸ ಮಾಡುತ್ತಾನೆ ಎಂದರು .ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೊ ಹಾಜರಿದ್ದು ಸಂದೇಶ ನೀಡಿದರು ಅಪಾರ ಸಂಖ್ಯೆಯ ಅಪ್ಪಂದಿರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.






