

ಮೂಡ್ಲಕಟ್ಟೆ ;ಇಲ್ಲಿನ ತಾಂತ್ರಿಕ ಕಾಲೇಜು ಮತ್ತು ಲಯನ್ಸ್ ಕ್ಲಬ್ ಹಂಗಳೂರು ಇವರ ಸಹಭಾಗಿತ್ವದಲ್ಲಿ ದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ, ಇವರ ಸಹಕಾರ ದೊಂದಿಗೆ ಸ್ವಯಂ ಪ್ರೇರಿತ ” ಬೃಹತ್ ರಕ್ತದಾನ ಶಿಬಿರ ” ಜರುಗಿತು.ರಕ್ತದಾನವು ಮಾನವೀಯತೆಯ ಅತ್ತ್ಯುತ್ತಮ ಸೇವೆಯಾಗಿದೆ. ಅನೇಕರ ಜೀವನಗಳಿಗೆ ಆಶಯಗಳನ್ನು ಒದಗಿಸುವಂತದ್ದು. ಜ್ಯೋತಿ ಬೆಳಗಿಸಿ, ಪ್ರಾರ್ಥನಾ ಗೀತೆ ಹಾಡುವ ಮುಖಾಂತರ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿ ಯಾಗಿ ಆಗಮಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಜಯಶಂಕರ್ ಶೆಟ್ಟಿ ಅವರು ವಿದ್ಯರ್ಥಿಗಳಿಗೆ ರಕ್ತದಾನದ ಮಹತ್ವ ಮತ್ತು ಅದರಿಂದ ಆರೋಗ್ಯಕ್ಕಾಗುವ ಉಪಯೋಗಗಳನ್ನು ತಿಳಿಸಿದರು. ಜೊತೆಗೆ ನಾವು ಈ ಕಾಲೇಜಿನಲ್ಲಿ ಸತತ 10 ವರ್ಷ ಗಳಿಂದ ರಕ್ತದಾನ ಶಿಬಿರವನ್ನು ನಡೆಸುತ್ತ ಬಂದಿದ್ದೇವೆ ಎಂದು ಸಂತಸಪಟ್ಟರು. ನೀವು ನೀಡುವ ರಕ್ತವು ಎಷ್ಟೋ ರೋಗಿಗಳಿಗೆ ಹಾಗೂ ಸೈನಿಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಮತ್ತೊರ್ವ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ ಅವರು ರಕ್ತದಾನ ಶ್ರೇಷ್ಠದಾನ, ಎಲ್ಲರು ರಕ್ತದಾನ ಮಾಡಿ ತಮ್ಮ ಕೈಲಾದಷ್ಟು ಜೀವಗಳನ್ನು ಉಳಿಸಲು ಸಹಾಯ ಮಾಡಿ ಎಂದರು, ಇದು ಒಂದು ಸಮಾಜ ಸೇವೆ ಎಂದು ಅರಿವು ಮೂಡಿಸಿದರು, ಹಾಗೆಯೇ ತಮ್ಮ ಲಯನ್ಸ್ ಕ್ಲಬ್ ಇಂದ ಆಗುವ ಸಮಾಜ ಸೇವೆಗಳ ಬಗ್ಗೆ ಎಲ್ಲರ ಜೊತೆ ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ ಈ ರಕ್ತದಾನ ಶಿಬಿರ ಯಶಸ್ವಿ ಯಾಗಲಿ ಎಂದು ಶುಭಹಾರೈಸಿದರು. ಅಂತೆಯೇ ಕಾಲೇಜಿನ ನಿರ್ದೇಶಕರಾದ ಡಾ. ಎಸ್ ಏನ್ ಭಟ್ ಅವರು ರಕ್ತದಾನವು ಒಂದು ನೊಬೆಲ್ ಆಕ್ಟಿವಿಟಿ ಅಂದರೆ ಇದು ಸಮಾಜದ ಋಣ ತೀರಿಸುವ ಒಂದು ಅವಕಾಶ. ಹಾಗೂ ಒಂದು ಯೂನಿಟ್ ರಕ್ತವು 3 ಜೀವಗಳನ್ನು ಉಳಿಸಬಲ್ಲದು ಎಂದು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ 107 ಬಾರಿ ರಕ್ತದಾನ ಮಾಡಿದ ಶ್ರೀ ವಿಜಯ ಪೂಜಾರಿ ಹಾಗೂ ಇನ್ನಿತರ ರೆಡ್ ಕ್ರಾಸ್ ಹಾಗೂ ಲಯನ್ಸ್ ಕ್ಲಬ್ ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಬಹುಪಾಲು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಕಾಲೇಜಿನ ರಾಷ್ಟೀಯ ಸ್ವಯಂ ಸೇವಾ ಕೋಶದ ಸಮನ್ವಯಕರಾದ ಪ್ರೊ. ಗಗನ್ ಬಂಗೇರ ಅವರು ಅತಿಥಿಗಳಿಗೆ ಸ್ವಾಗತ ಕೋರಿದರು. ಜೊತೆಗೆ ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಮಹಾಪ್ರಭು ನಿರೂಪಣೆ ಮಾಡಿ, ರೋಣಿತ್ ವಂದನಾರ್ಪಣೆಯನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಎಲ್ಲ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಒಟ್ಟಿನಲ್ಲಿ ಈ ಬೃಹತ್ ರಕ್ತದಾನ ಶಿಬಿರವು ಯಶಶ್ವಿಯಾಗಿ ಜರುಗಿತು.

