

ಗಂಗೊಳ್ಳಿ ; ಕ್ರೈಸ್ತ ಜ್ಯುಬಿಲಿ ವರ್ಷದ ಕಾರ್ಯಕ್ರಮದ ಅಂಗವಾಗಿ ಕೊಸೆಸಾಂವ್ ಮಾತೆಯ ದೇವಾಲಯದಲ್ಲಿ ಯುವಜನರ ಮಹೋತ್ಸವವು ಅಗಸ್ಟ್ 10, 2025 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂ. ಗುರು ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು, ಫಿಯೊನಾ ಡಾಯಸ್, ಕ್ಯಾರಲ್ ರೆಬೇರೊ, ಸಿಂಡ್ರೆಲಾ ರೇಬೆರೊ, ಫಿಯೊನಾ ರೆಬೇರೊ, ರಿಶೆಲ್ ಡಿಸೋಜ, ಜೊಲ್ವಿನ್ ರೆಬೆಲ್ಲೊ, ಶರೆಲ್ ಫೆರ್ನಾಂಡಿಸ್ ರವರು ಸಕ್ರಿಯರಾಗಿ ಭಾಗವಹಿಸಿದರು. ಬಳಿಕ ಧರ್ಮಗುರುಗಳಾದ ವಂ| ತೋಮಸ್ ರೋಶನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಜನರ ಘನತೆ ಮತ್ತು ಭಾರತದ ಸಂವಿಧಾನ” ಎಂಬ ವಿಷಯದ ಬಗ್ಗೆ ಅರಿವು ಮೂಡಿಸಿದರು. ವೇದಿಕೆಯಲ್ಲಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜ, ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯವರ ವ್ಯಕ್ತಿ ಪರಿಚಯವನ್ನು ಅನ್ನಿ ಕ್ರಾಸ್ತರವರು ನೀಡಿದರು. ತದನಂತರ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಐ.ಸಿ.ವೈ.ಎಂ. ಘಟಕದ ಅಧ್ಯಕ್ಷರಾದ ಕುಮಾರಿ ವಿನ್ಸಿಟಾ ಲೋಬೊರವರು ಸ್ವಾಗತಿಸಿದರು, ರೆನಿಟಾ ಬಾರ್ನೆಸ್ ಕಾರ್ಯಕ್ರಮ ನಿರೂಪಿಸಿದರು.
ಜೆನ್ನಿ ಬುತ್ತೆಲ್ಲೊ, ಫೆಲ್ಸಿ ಓಲಿವೇರಾ, ಪ್ರೀತಿ ಫೆರ್ನಾಂಡಿಸ್, ಜೋನ್ ಲೋಬೊ ಹಾಗೂ ಓವಿನ್ ರೆಬೆಲ್ಲೊ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕಾರ ನೀಡಿದರು.


































