ಶ್ರೀನಿವಾಸಪುರ : ಸರ್ಕಾರವು ಕಳೆದ ಸಾಲಿನಲ್ಲಿ ಸ್ಥಳಿಯ ಕೇಂದ್ರದಲ್ಲಿ ಎರಡು ವರ್ಷಗಳ ತೋಟಗಾರಿಕೆ ಡಿಪ್ಲಮೋ ಕೋರ್ಸ್ನ್ನು ಮುಚ್ಚಲು ಆದೇಶಿಸಿತ್ತು ಎಂದು ಹೊಗಳಗೆರೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ.ಆರ್.ಕೆ.ರಾಮಚಂದ್ರ ಪತ್ರಿಕೆಗೆ ಮಾಹಿತಿ ನೀಡಿದರು.
ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿ ಆದರೆ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಎರಡು ವರ್ಷಗಳ ಡಿಪ್ಲಮೋ ಕೋರ್ಸ್ನ್ನು ಪುನರಾಂಭಿಸಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ 2024-25 ಸಾಲಿಗೆ ಡಿಪ್ಲಮೋ ಕೋರ್ಸ್ಗೆ ಸೇರಲು ಬಯಸುವವರು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.uhsbagalkot.edu.in ನೋಡುವುದು .
ಅರ್ಜಿಯನ್ನು 25-10-24 ರ ಒಳಗೆ ಸಂಪೂರ್ಣ ವಿವಿರಗಳೊಂದಿಗೆ ಡೀನ್ (ಸ್ನಾತಕೋತ್ತರ) ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ. ಉದ್ಯನಾನಗರಿ ನವನಗರ . ಬಾಗಲಕೋಟೆ ಪಿನ್ಕೋಡ್ 587104 ಇವರಿಗೆ ತಲುಪಿಸಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ಸಂಖ್ಯೆ 9449872878 ದೂರವಾಣಿ ಕರೆ ಮಾಡಬಹುದಾಗಿದೆ ಎಂದರು.