

ಕುಂದಾಪುರ (ಎ. 16 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸೀಸನ್ 3 ಸಮ್ಮರ ಕ್ಯಾಂಪ್ನ 9 ನೇ ದಿನವಾದ ಇಂದು ಚಿತ್ತೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.ಮೊದಲಿಗೆ ಚುಚ್ಚಿಯಲ್ಲಿರುವ ಕಾರಿಕೊಡ್ಲು ಡ್ಯಾಂಗೆ ಭೇಟಿ ನೀಡಿ, ನಂತರ ಅಲ್ಲಿಯೇ ಸ್ವಲ್ಪ ದೂರದಲ್ಲಿ ಹರಿಯುವ ನೀರಿನಲ್ಲಿ ನೀರಾಟವಾಡಿದರು.
ಅಲ್ಲಿಂದ ಹಾರ್ಮಣ್ಣಿನಲ್ಲಿರುವ ಶ್ರೀಯುತ ಮಂಜುನಾಥ ಮಡಿವಾಳರವರ ಶ್ರೀ ಮಹಾಗಣಪತಿ ಐಸ್ಕ್ರೀಮ್ ಪ್ಯಾಕ್ಟರಿಗೆ ಭೇಟಿ ನೀಡಿ ವಿವಿಧ ಬಗೆಯ ಐಸ್ಕ್ರೀಮ್ ತಯಾರಿಕೆಯ ಬಗ್ಗೆ ತಿಳಿದುಕೊಂಡು, ಅವರು ನೀಡಿದ ಐಸ್ಕ್ರೀಮ್ನ್ನು ಸವಿದರು. ನಂತರ ಮಧ್ಯಾಹ್ನದ ವೇಳೆಗೆ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ತಲುಪಿ, ದೇವರ ದರ್ಶನ ಪಡೆದು ಅಲ್ಲಿಯೇ ಊಟ ಮುಗಿಸಿ ಶಾಲೆಗೆ ಹಿಂತಿರುಗಿದರು.

