ಕುಂದಾಪುರದ ಖ್ಯಾತ ಲೇಖಕಿ, ಕುಂದಾಪ್ರ ಕನ್ನಡದಲ್ಲಿ ರೂಪಕ, ನಾಟಕ,ಸಾಹಿತ್ಯರಚನೆ ಮಾಡಿದ ಶಿಕ್ಷಕಿ ಸಮಿತ್ರಾ ಐತಾಳ(58)ಡಿ 1ರಂದು ಸಂಜೆ ನಿಧನರಾದರು.ಇತ್ತೀಚಿನ ತನಕ ಟಿವಿ,ರೆಡಿಯೋ ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿರುವ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದವರು. ಕೆಲವು ದಿನಗಳ ಹಿಂದೆ ಅವರ ಪುಸ್ತಕ ಬಿಡುಗಡೆ,ನಾಟಕ ಪ್ರದರ್ಶನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು.ಆದರೆ ಅವರ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು. ಇವರು ಪತಿ,ಪುತ್ರನನ್ನು ಅಗಲಿದ್ದಾರೆ.
ಕುಂದಾಪುರದ ಹಿರಿಯ ವ್ಯವಹಾರಸ್ಥರಾದ ರತ್ನಾಕರ ಶ್ಯಾನುಭಾಗ್-ವಸಂತಿ ದಂಪತಿಯ ಪುತ್ರಿ ಅಂಜನಿ ಶ್ಯಾನುಭಾಗ್ (51) ಹೃದಯಾಘಾತದಿಂದ ನ.24ರಂದು ಮಂಗಳೂರಿನ ಸಹೋದರಿಯ ಮನೆಯಲ್ಲಿ ನಿಧನರಾದರು. ಕುಂದಾಪುರದಲ್ಲಿ ತನ್ನ ಕುಟುಂಬದ ವ್ಯವಹಾರದಲ್ಲಿ ಕ್ರಿಯಾಶೀಲತೆಯಿಂದ ದುಡಿಯುತ್ತಿದ್ದ ಇವರು ಉತ್ತಮ ಜನಸಂಪರ್ಕ ಹೊಂದಿದ್ದರು. ತಂದೆ, ತಾಯಿ ಸಹೋದರ, ಸಹೋದರಿಯನ್ನು ಇವರು ಅಗಲಿದ್ದಾರೆ.
ಶ್ರೀನಿವಾಸಪುರ: ತಾಲ್ಲೂಕಿನ ನಾರಾಯಣಪುರ ಗ್ರಾಮದ ವಕೀಲ ಆರ್.ಶಿವಣ್ಣ (43) ಗುರುವಾರ ನಿಧನರಾದರು.ಅವರು ಅನಾರೋಗ್ಯದಿಂದ ಬಳಲಿದ್ದರು.ತಾಲ್ಲೂಕು ಮಡಿವಾಳ ಮಚಿದೇವರ ಕ್ಷೇಮಾಭಿವೃದ್ಧಿ ಸಂಘದ ಖಚಾಂಚಿಯಾಗಿದ್ದ ಅವರಿಗೆ, ಪತ್ನಿ, ಮಗ ಮತ್ತು ಮಗಳು ಅಗಲಿದ್ದಾರೆ.ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಶಾಸ್ತ್ರೊವದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಯಿತು.
ಕುಂದಾಪುರ: ಸ್ಥಳೀಯ ಕಾನ್ವೆಂಟ್ ರಸ್ತೆಯ ನಿವಾಸಿ ಟ್ರಾನ್ಸ್ ಪೋರ್ಟ್ ಉದ್ಯಮಿ ಬಿ.ಅಬ್ಬಾಸ್ ಸಾಹೇಬ್ ( 73)ದಿನಾಂಕ 15 11 22ರ ಮಂಗಳವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು.ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಬಿ.ಹಾರೂನ್ ಸಾಹೇಬ್ ಅವರ ಸಹೋದರರಾಗಿರುವ ಇವರು ಪತ್ನಿ,ಓರ್ವ ಪುತ್ರ ಹಾಗೂ ಹಾಗೂ ಮೂವರು ಪುತ್ರಿಯರನ್ನು ಆಗಲಿದ್ದಾರೆ.
ಕುಂದಾಪುರದ ಚರ್ಚ್ (ಸಮೀಪದ) ರಸ್ತೆ ನಿವಾಸಿ,ಹರಿಕ್ರೃಪಾ ಏಜೆನ್ಸೀಸ್ ಮಾಲಕ,ಸಮಾಜ ಸೇವಕ ಗಣೇಶ್ ಕಿಣಿ (63) ನ.15ರಂದು ಮಂಗಳವಾರ ಹ್ರೃದಯಾಘಾತದಿಂದ ನಿಧನರಾದರು.ತಮ್ಮ ನಡೆ ನುಡಿ,ಸೇವಾ ಗುಣಗಳಿಂದ ಜನಸಾಮಾನ್ಯರಿಂದ ಉತ್ತಮ ಗೌರವ ಪಡೆಯುತ್ತಿದ್ದ ಇವರು,ತಮ್ಮ ಹರಿಕ್ರಪಾ ಏಜೆನ್ಸೀಸ್ ಮೂಲಕ ಕ್ರೃಷ್ಣ ತುಪ್ಪ ಸೇರಿದಂತೆ ಪ್ರಸಿದ್ದ ಕಂಪೆನಿಗಳ ಸಿದ್ಧ ಆಹಾರ ವಸ್ತುಗಳ ವಿತರಣೆ ನಡೆಸುತ್ತಿದ್ದರು.ವ್ಯಾಪಾರಿ ವಲಯದಲ್ಲಿ ಜನಾನುರಾಗಿಯಾಗಿದ್ದರು.ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರ ಅನನ್ಯ ಭಕ್ತರಾದ ಇವರು ಪ್ರತೀದಿನ ಪ್ರಾತಃಕಾಲ ದ ಪೂಜೆ ಆಗುವ ಮುನ್ನ ಉಪಸ್ಥಿತರಿದ್ದು,ಪೂಜೆಯ ನಂತರ ತನ್ನ ವ್ಯವಹಾರ,ಸೇವಾ […]
ಕುಂದಾಪುರದ ಪ್ರಸಿದ್ದ ಮೆ. ಜಿ.ಎಸ್.ನಾಯಕ್ ಎಂಡ್ ಕೊ.ಸಂಸ್ಥೆಯ ಪಾಲುದಾರ ,ಸಮಾಜ ಸೇವಕ ,ಎಚ್.ಶಾಂತಾರಾಮ ಪೈ(62) ದಿ.10ರಂದು ರಾತ್ರಿ ನಿಧನರಾದರು.ಧಾರ್ಮಿಕ,ಸೇವಾ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದ ಇವರು ಉತ್ತಮ ಸಂಘಟಕರಾಗಿದ್ದರು.ಇವರು ಸಹೋದರ, ಸಹೋದರಿ ಅಪಾರ ಬಂಧುಗಳನ್ನು ಅಗಲಿದ್ದಾರೆ
ಕೋಟ: ಚಾಂತಾರು ಪ್ರಗತಿಪರ ಕೃಷಿಕ ಗೋಪಾಲ ಗಾಣಿಗ ಇವರ ಧರ್ಮಪತ್ನಿ ರಾಧಾ ಗಾಣಿಗ(86)ಭಾನುವಾರದಂದು ನಿಧನರಾದರು. ಮೃತರು ನಾಟಿವೈದ್ಯರಾಗಿದ್ದು,ಚಾಂತಾರು ಪರಿಸರದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದ್ದರು. ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಕೋಟೇಶ್ವರದ ಖ್ಯಾತ ವ್ಯವಹಾರೋದ್ಯಮಿ,ಮೆ.ಆಟಕೆರೆ ಅನಂತ ಶ್ರೀನಿವಾಸ ಪೈ ಎಂಡ್ ಸನ್ಸ್,ಮಹಾಮಾಯ ಸಂಸ್ಥೆಗಳ ಮುಖ್ಯಸ್ಥರಾದ ಆಟಕೆರೆ ರಾಮಚಂದ್ರ ಅನಂತ ಪೈ, (58) ದಿನಾಂಕ 16ರಂದು ರವಿವಾರ ನಿಧನರಾದರು.ಉಡುಪಿ ಜಿಲ್ಲೆಯ ರಖಂ ದಿನಸಿ ವ್ಯವಹಾರದಲ್ಲಿ ಪ್ರಸಿದ್ಧವಾಗಿದ್ದ ಕುಟುಂಬದ ವ್ಯವಹಾರವನ್ನು ಸಹೋದರರೊಂದಿಗೆ ಇನ್ನಷ್ಟು ಅಭಿವೃದ್ಧಿ ಪಡಿಸಿ,ಆಧುನೀಕರಣ ಗೊಳಿಸಿದ ಖ್ಯಾತಿ ಇವರದ್ದು. ಇವರು ಪತ್ನಿ,ಇಬ್ಬರು ಪುತ್ರರು ಹಾಗೂ ಅಪಾರಬಂಧುಗಳನ್ನು ಅಗಲಿದ್ದಾರೆ.
ಕುಂದಾಪುರ: ಕಂದಾವರ ಕೊಂಗವಳ್ಳಿ ಮನೆ ದಿ. ಶಂಕರ ಶೆಟ್ಟರ ಪತ್ನಿ ಗುಳ್ವಾಡಿ ದೊಡ್ಡಮನೆ ರಾಜೀವಿ ಶೆಡ್ತಿಯವರು( 85 ವರುಷ) ಇದೇ 30 ರಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರು ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಲೇಖಕಿ ಡಾ .ರೇಖಾ ವಿ. ಬನ್ನಾಡಿ ಇವರ ಮಗಳು. ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.