
ಶ್ರೀನಿವಾಸಪುರ : ಪಟ್ಟಣ ಅಭಿವೃದ್ಧಿಗಾಗಿ ಸರ್ಕಾರವತಿಯಿಂದ ಅನೇಕ ಅನುದಾನಗಳು ಬರುತ್ತವೆ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳವ ವ್ಯವಸ್ಥೆಯನ್ನು ಅಧಿಕಾರಿಗಳು ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಸ್.ಅಂಬಿಕಾ ಸೂಚಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಸಂಬಂದಿಸಿದಂತೆ ಪ್ರಗತಿ ಪರಿಶೀಲಾನ ಸಭೆ ನಡೆಸಿದರು.ಪಟ್ಟಣಕ್ಕೆ ಸಂಬಂದಿಸಿದಂತೆ ಕುಡಿಯುವ ನೀರು, ಸ್ವಚ್ಚತೆ, ನೈರ್ಮಲ್ಯ ಕಾಪಾಡುವುದು, ಬೀದಿ ದೀಪಗಳು, ರಸ್ತೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿ ಮಾಹಿತಿ ಪಡೆದು ಪಟ್ಟಣ ಅಭಿವೃದ್ಧಿಗಾಗಿ […]

ಶ್ರೀನಿವಾಸಪುರ : ಸರ್ಕಾರದಿಂದ ಬಂದತಹ ಅನುದಾನಗಳನ್ನು ಯಾವ ಯಾವ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಹಾಗು ಬಾಕಿ ಇರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುವ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ತಾಲೂಕಿನ ನೋಡಲ್ ಅಧಿಕಾರಿಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿ.ಪಂ. ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್ ಸೂಚಿಸಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎಸ್.ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ […]

ಶ್ರೀನಿವಾಸಪುರ 2 : ಅಂಗವಿಕಲ್ಯ ಶಾಪ ಎಂದು ಭಾವಿಸದೆ ಸಮಾಜದಲ್ಲಿ ಗೌರವಹಿತ ಜೀವನ ನಡೆಸಲು ಮುಂದಾಗಿ ಎಂದು ಪುರಸಭೆ ವ್ಯವಸ್ಥಾಪಕ ಜಿ.ನವೀನ್‍ಚಂದ್ರ ಹೇಳಿದರು.ಪಟ್ಟಣದ ಪುರಸಭೆ ಕಛೇರಿ ಸಭಾಂಗಣದಲ್ಲ್ಲಿ ಮಂಗಳವಾರ ವಿಕಲಚೇತನರ ಸಮನ್ವಯ ವಿಶೇಷ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.ಸಮಾಜದಲ್ಲಿ ಎಲ್ಲರಿಗೂ ಅವರದ್ದೆ ಆದ ಸ್ಥಾನ ಮಾನ ಇದ್ದು, ಯಾವುದೇ ಹಿಂಜರಿಕೆ ಇಲ್ಲದೆ ಮುಂದೆ ಸಾಗುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು. ಸಮ ಸಮಾಜ ನಿರ್ಮಿಸುವಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳೂ ನಡೆದಿವೆ ಎನ್ನುತ್ತಾ, ಸರ್ಕಾರದಿಂದ ಬರುವ […]

ಶ್ರೀನಿವಾಸಪುರ ; ಭಾನುವಾರ ಸುದ್ದಿವಾಹಿನಿಯೊಂದರಲ್ಲಿ ಸುಣ್ಣಕಲ್ ಗ್ರಾಮದ ಬಳಿ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನವು ಅನ್ಯಕೋಮಿನವರು ದ್ವಂಸಗೊಳಿಸಲಾಗಿದೆ ಎಂದು ಸುದ್ದಿ ಬಿತ್ತರವಾಗುತ್ತಲೇ ಸೋಮವಾರ ಬೆಳಗ್ಗೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸ್ಥಳಕ್ಕೆ ಬೇಟಿ ಸ್ಥಳ ಪರಿಶೀಲಿಸಿ, ಗ್ರಾಮಸ್ಥರೊಂದಗೆ ದೇವಾಲಯದ ಹಿನ್ನೆಲೆಯ ಬಗ್ಗೆ ಹಾಗೂ ಸರ್ಕಾರದ ಜಮೀನಿನ ಬಗ್ಗೆ ಮಾಹಿತಿ ಪಡೆದರು . ಗ್ರಾಮಸ್ಥರು ಪಾಲೆಗಾರರರು ನಿರ್ಮಿಸಿರುವ ದೇವಸ್ಥಾನ ಹಾಗು ಕೋಟೆಯ ಇದಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸಂಬಂದಿಸಿದ ಜಮೀನು ಅಕ್ರಮವಾಗಿ ಉಳಿಮೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‍ರವರು ಗ್ರಾಮಸ್ಥರೊಂದಿಗೆ […]

ಶ್ರೀನಿವಾಸಪುರ : ಪ್ರತಿಯೊಬ್ಬರು ಹಕ್ಕು ಮತ್ತು ಕರ್ತವ್ಯಗಳನ್ನು ಜೊತೆ ಜೊತೆಯಾಗಿ ಜೋಡಿ ಎತ್ತುಗಳಂತೆ ಮುನ್ನೆಡಯಬೇಕು ಎಂದು ಸಲಹೆ ನೀಡಿದರು ಎಂಎಲ್‍ಸಿ ವೈ.ಎ.ನಾರಾಯಣಸ್ವಾಮಿ ವ್ಯಾಖ್ಯಾನಿಸಿದರು.ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗು ತಾಲೂಕು ಆಡಳಿತ ಮಂಡಲಿ ವತಿಯಿಂದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ನಮ್ಮ ದೇಶವು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೇತೃತ್ವದಲ್ಲಿ ಅಭಿವೃದ್ದಿಯತ್ತಾ ಸಾಗುತ್ತಿದ್ದು, ಭಾರತ ದೇಶದ ಗಣತಂತ್ರದ ತಾಯಿ ಎಂಬ ಘೋಷ ವಾಕ್ಯದ ಮೂಲಕ […]

ಶ್ರೀನಿವಾಸಪುರ : ಸಂವಿಧಾನ ಕಲ್ಪಿಸಿರುವ ಹಕ್ಕುಗಳಲ್ಲಿ ಮತದಾನ ಕೂಡ ಶ್ರೇಷ್ಟವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.ಪಟ್ಟಣದ ಪುರಸಭೆ ಕಛೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮತದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರು ಅರಿತು ಮತದಾನದಲ್ಲಿ ಕ್ರಿಯೆಯಲ್ಲಿ ಪಾಲ್ಗುಳ್ಳಬೇಕು. ಭಾರತದೇಶದಲ್ಲಿ ವ್ಯಕ್ತಿ ಮತ್ತು ಪಕ್ಷವನ್ನು ನೋಡಿ ಮತಚಲಾಯಿಸುತ್ತಾರೆ. ವ್ಯಕ್ತಿ ಮತ್ತು ಪಕ್ಷವನ್ನು ನೋಡಿ ದೇಶವನ್ನ ಅಭಿವೃದ್ಧಿಯತ್ತಾ ಕೊಂಡಯ್ಯುವ ಆದರ್ಶ ನಾಯಕನನ್ನು ಆಯ್ಕೆ ಮಾಡುವುದರಲ್ಲಿ ಯುವ ಮತದಾರರು […]

ಶ್ರೀನಿವಾಸಪುರ : ತಾಲೂಕಿನ ರೋಜೋರಪಲ್ಲಿ ಗ್ರಾಮದ ಬುಧವಾರ ವಾರದ ಸಂತೆಯಲ್ಲಿ ಕುರಿಗಳ ಸಂತೆಯಲ್ಲಿ ಕಳ್ಳರಿಗೆ ರೈತರಿಂದ ಧರ್ಮದೇಟು . ರೈತರು ಕುರಿ ಕುದಿಯಲು ಬಂದಿದ್ದ ಇಬ್ಬರನ್ನ ಹಿಡಿದು ಕೈ ಕಟ್ಟಿಹಾಕಿ ಥಳಿಸಿದ ರೈತರು .ಬೆಂಗಳೂರಿನ ಡಿಜೆ ಹಳ್ಳಿಯ ಮುಜನೀರ್‍ಖಾನ್, ಶಬ್ಭೀರ್ ಇಬ್ಬರು ಕುರಿ ಸಂತೆಯಲ್ಲಿ ಖರೀದಿ ಮಾಡುವ ನೆಪದಲ್ಲಿ ಬಂದಿದ್ದ ಇಬ್ಬರು ಕುರಿಗಳ ಕಳ್ಳತನ ಮಾಡುತ್ತಿರುವುದನ್ನು ಗಮನಿಸಿದ ರೈತರು ಇಬ್ಬರನ್ನು ಹಿಡಿದು ಶ್ರೀನಿವಾಸಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣದ ದಾಖಲು ಆಗಿದೆ

ಶ್ರೀನಿವಾಸಪುರ : ತಾಲೂಕಿನ ಬೈರಗಾನಹಳ್ಳಿ ಗ್ರಾಮಪಂಚಾಯಿತಿ ಪ್ರಬಾರಿ ಪಿಡಿಒ ಎಂ.ಎಸ್. ಶ್ರೀನಿವಾಸರೆಡ್ಡಿ, ಪಂಚಾಯಿತಿ ವ್ಯಾಪ್ತಿಗೆ ಸಂಬಂದಿಸಿದಂತೆ ನರೇಗಾ ಯೋಜನೆ ಕಾಮಗಾರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಕಾಮಗಾರಿ ನಡೆಸದೆ ಇದ್ದರೂ ಬಿಲ್ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಬಸಂತಪ್ಪರವರು ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ನರೇಗಾ ಯೋಜನೆಯಡಿಯಲ್ಲಿ ಕೊತ್ತಹುಡ್ಯ, ಬೈರಗಾನಹಳ್ಳಿ ಗ್ರಾಮದ ಗೋಮಾಳ ಸವೇ , ನಂ. 124 ರಲ್ಲಿ ಗೋಕುಂಟೆ ನಿರ್ಮಾಣ ಮಾಡಿದ್ದು, ಈ ಕಾಮಗಾರಿಗಳಲ್ಲಿ ನ್ಯೂನ್ಯತೆ ಕಂಡಿಬಂದಿರುವ ಹಿನ್ನೆಲೆಯಲ್ಲಿ ಪರಿಶೀಲಿಸಲು […]

ಕೋಲಾರ: ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: 01.01.2024 ಕ್ಕೆ ಅನ್ವಯವಾಗುವಂತೆ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಂತೆ (22-01-2024) ಒಟ್ಟು 12,78,183 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಬಾರಿ 33,497 ಯುವ ಮತದಾರರು ನೋಂದಣಿಯಾಗಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಯಾರೂ ಮತದಾನದಿಂದ ವಂಚಿತರಾಗದಂತೆ ಮಾಡಲು […]