ಕೋಲಾರ:- ಗ್ರಾಪಂ ಸದಸ್ಯನಿಂದ ಸಚಿವರವರೆಗೂ, ಡಿಗ್ರೂಪ್ ನೌಕರನಿಂದ ಅಧಿಕಾರಿವರೆಗೂ ಇಂದು ಯಾವುದೇ ಹುದ್ದೆ ಕಳಂಕರಹಿತವಾಗಿಲ್ಲ ಎಂದು ವಿಷಾದಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಎಷ್ಟೇ ದೊಡ್ಡ ಸ್ಥಾನಮಾನ ಸಿಕ್ಕರೂ `ಮೊದಲು ಮಾನವನಾಗು’ ಎಂಬ ದಾಸರ ವಾಣಿ ನೆನಪಿನಲ್ಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಭಾನುವಾರ ಕೋಲಾರ ಬ್ರಾಹ್ಮಣ ಸಂಘದಿಂದ ನಗರದ ಪಿಸಿ ಬಡಾವಣೆಯ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಶಾಲಾ,ಕಾಲೇಜುಗಳ ತಲಾ ಇಬ್ಬರು ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರನ್ನು ಪುರಸ್ಕರಿಸಿದ ಅವರು […]
ಶ್ರೀನಿವಾಸಪುರ : ಡೆಂಘ್ಯು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಗ್ರಾಮಪಂಚಾಯಿತಿ ಕೈ ಜೋಡಿಸಿ ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೂಚಿಸಿದರು.ಪಟ್ಟಣದ ಹೊರವಲಯದ ಹೊಗಳಗೆರೆ ತೋಟಗಾರಿಕಾ ಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಕೆಡಿಪಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಅಲ್ಲದೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದಲ್ಲಿ ಸರಿಪಡಿಸುವಂತೆ ಪಿಡಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಳ್ಳಿಗಳಲ್ಲಿನ ಸಶ್ಮಾನಗಳನ್ನು ಸರ್ವೆ ಮಾಡಿಸಿ ಬೌಂಡರಿ ಹಾಕಿಸುವಂತೆ ಪಿಡಿಒ ರವರಿಗೆ ಸೂಚಿಸಿದರು. ಆರೋಗ್ಯ ಇಲಾಖೆಯು […]
ಶ್ರೀನಿವಾಸಪುರ : ಜಲಸಮಿತಿಗಳು, ಗ್ರಾಮಗಳ ನೀರು ಸರಬರಾಜು ವ್ಯವಸ್ಥೆಗಳ ಯೋಜನೆ, ಅನುಷ್ಟಾನ , ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಮೂಲಕ ಪ್ರತಿ ಮನೆಗೂ ನಿಯಮಿತವಾಗಿ ಮತ್ತು ದೀಘಾವದಿಯಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತವೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಗುರುವಾರ ಜಲಜೀವನ ಮಿಷನ್ ಯೋಜನೆಯಡಿಯಲ್ಲಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನಲ್ಲಿ ಸಧ್ಯಕ್ಕೆ ನೀರನ ಸಮಸ್ಯೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಡೆಂಗ್ಯು, ಚಿಕುನ್‍ಗುನ್ಯ ಸಾಂಕ್ರಮಿಕ ರೋಗಗಳು ರಾಜ್ಯ ದ್ಯಾಂತ […]
ಶ್ರೀನಿವಾಸಪುರ : 2024-25 ನೇ ಸಾಲಿನ ಬಜೆಟ್ ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಹಂಚಿಕೆ ಮೀಸಲಿಟ್ಟು ಅಂಗನವಾಡಿಗಳನ್ನು ಬಲಪಡಿಸಿ ಮತ್ತು ಕಾರ್ಯಕರ್ತೆಯರು, ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಎನ್.ಸುದೀಂದ್ರರವರ ಮೂಲಕ ಕೇಂದ್ರದ ಹಣಕಾಸು ಮಂತ್ರಿಗಳಿಗೆ ಮನವಿ ಮಾಡಿದರು.ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಬುಧವಾರ ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಹಂಚಿಕೆ ಮೀಸಲಿಟ್ಟು […]
ಶ್ರೀನಿವಾಸಪುರ: ಭೂಮಿ ಎಲ್ಲರ ಆಸ್ತಿ, ರೋಟರಿ ಸಂಸ್ಥೆಯಿಂದ ಉಚಿತವಾಗಿ ನೀಡುತ್ತಿರುವ ತೆಂಗಿನ ಗಿಡವನ್ನು ಚೆನ್ನಾಗಿ ಬೆಳೆಸಿ, ಹಸಿರನ್ನು ಬೆಳೆಸಲು ಪ್ರೋತ್ಸಾಹ ನೀಡಿ, ನೀವು ಸಹ ಚೆನ್ನಾಗಿ ಬೆಳೆಯಿರಿ, ನೀವು ಬೆಳೆಸಿರುವ ಗಿಡವನ್ನು ನೋಡಿದ ನಿಮ್ಮ ಪೋಷಕರು ಸಹ ಸಂತೋಷಪಡುತ್ತಾರೆ ಎಂದು ವಿದ್ಯಾರ್ಥಿಗಳಿಗೆ ರೋಟರಿ ಜಿಲ್ಲಾಪಾಲಕರಾದಂತಹ ಶ್ರೀದರ್ ತಿಳಿಸಿದರು.ತಾಲ್ಲೂಕಿನ ಲಕ್ಷ್ಮೀಸಾಗರದ ಶತಶೃಂಗ ಶಾಲೆಯಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತು ರೋಟರಿ ಜಿಲ್ಲಾ ವತಿಯಿಂದ ಲಕ್ಷ ಕಲ್ಪವೃಕ್ಷ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಪಾಲಕರಾದಂತಹ ಶ್ರೀದರ್, ನಾನು ಹಳ್ಳಿ ಶಾಲೆಯಲ್ಲಿ […]
ಶ್ರೀನಿವಾಸಪುರ : ಜನಸಂಖ್ಯಾ ಸ್ಪೋಟದಿಂದಾಗುವ ಅಪಾಯಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಿದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಘ್ಯು ರೋಗವು ಹರಡುವುದು ಸಾಮಾನ್ಯ ಆದರೆ ಸಾರ್ವಜನಿಕರು ಮನೆಗಳ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಟಿಎಚ್‍ಒ ಮಹ್ಮಮದ್ ಷರೀಫ್ ಸಲಹೆ ನೀಡಿದರು.ಪಟ್ಟಣದ ಎಂಜಿ ರಸ್ತೆಯಲ್ಲಿ ಗುರುವಾರ ಎಸ್‍ವಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಾಗು ಡೆಂಘ್ಯು ರೋಗ ತಡೆಗಟ್ಟಲು ಹಮ್ಮಿಕೊಳ್ಳಲಾದ ಜಾಗೃತಿ ಜಾಥಗೆ ಚಾಲನೆ ನೀಡಿ ಮಾತನಾಡಿದರು.ಎಸ್‍ವಿ […]
ಕೋಲಾರ,ಜು.11: ವಿಮಾ ರಂಗದಲ್ಲಿ ಜಿ.ಎಸ್.ಟಿ ಹಿಂಪಡೆಯುವಂತೆ ಒತ್ತಾಯಿಸಿ ಸಂಸದ ಎಂ.ಮಲ್ಲೇಶ್ ಬಾಬುರನ್ನು ಅವರ ನಿವಾಸದಲ್ಲಿ ಬೇಟಿ ಮಾಡಿ ವಿಮಾ ನೌಕರರ ಸಂಘ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಿಲಾಯಿತು.ನಿಯೋಗದಲ್ಲಿ ವಿಮಾ ನೌಕರರ ಸಂಘ ಕೋಲಾರ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ಮುರಳಿ, ಕಾರ್ಯದರ್ಶಿ ಎಸ್.ರಮೇಶ್, ಖಜಾಂಚಿ ಜಿ.ಆರ್.ಶ್ರೀಧರ್, ಸಿ.ನಾಗರಾಜು, ತುಷಾರ್ ಹೆಬ್ಬಳ್ಳಿ, ಕೆ.ಎಸ್.ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀನಿವಾಸಪುರ : ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ರೈತ ಸಂಘದ ಉಪಾಧ್ಯಕ್ಚ ಬಚ್ಚೇಗೌಡ ಆಗ್ರಹಿಸಿದರು.ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಬಾರದು, ಹಾಗೂ ಕೇರಳ, ತಮಿಳು ನಾಡು, ತೆಲಂಗಾಣ ರಾಜ್ಯ ಸರ್ಕಾರಗಳಂತೆ ರಾಜ್ಯದಲ್ಲಿಯೂ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂದು ವಿಧಾನ ಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ರಾಜ್ಯದಲ್ಲಿ […]
ಕೋಲಾರ,ಜು.09: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಲು ಹಾಗೂ ಕ್ಷೇತ್ರಕ್ಕೆ ಲಭ್ಯವಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿಗಳ ಕುರಿತು ಸಂಸದ ಎಂ.ಮಲ್ಲೇಶ್ ಬಾಬು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಿದರು.ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ಸಂಸದರು ಕೋಲಾರ ಕ್ಷೇತ್ರದ ಮೂಲಕ ಹಾದು ಹೋಗಿರುವ ಚನೈ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಗೆ ಭೂಮಿಯನ್ನು ನೀಡಿರುವ ರೈತರಿಗೆ ಪರಿಹಾರ ಧನ […]