
ಶ್ರೀನಿವಾಸಪುರ; ಪಟ್ಟಣ ಹೊರವಲಯದ ಶ್ರೀ ವಿಜಯಾದ್ರಿ ವಿದ್ಯಾ ಸಂಸ್ಥೆ ಆವರಣದಲ್ಲಿ ಶುಕ್ರವಾರ 69ನೇ ಕನ್ನಡರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನ ವಿದ್ಯಾ ಸಂಸ್ಥೆಯ ಆಡಳಿತ ಮಂಡಲಿವತಿಯಿಂದ ವಿತರಿಸಲಾಯಿತು.ಆಡಳಿತ ಮಂಡಲಿ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ಆಡಳಿತಾಧಿಕಾರಿ ಎ.ವೆಂಕಟರಾಮರೆಡ್ಡಿ,ಕಾರ್ಯದರ್ಶಿ ಬಾಬುಗೌಡ, ಪ್ರಾಂಶುಪಾಲ ಎನ್.ಶಿವಕುಮಾರ್, ಉಪನ್ಯಾಸಕರಾದ ಸತೀಶ್, ಪಿ.ವಿ.ಶಿವಕುಮಾರ್, ರೀಯಜ್ ಪಾಷ, ಭವ್ಯ, ಬಿ.ಎಮ್.ಪವಿತ್ರ,ಎನ್.ಚಲಪತಿ, ಎಚ್.ಎನ್.ಸಂದೀಪ್, ಅನೀಲ್ಕುಮಾರ್, ಪೃಥ್ವಿ, ಶಿಕ್ಷಕರಾದ ಸಲ್ಮ ಸುಲ್ತಾನ, ಪ್ರೇಮಾ, ಸುಮತಿ, ಎನ್.ಝೈಬಾ ಆಯೇಶಾ, ವೈಷ್ಣವಿ, […]

ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವವು ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರ ಗದ್ದಲ, ವಿರೋಧ, ಆಕ್ರೋಶ ಬಹಿಷ್ಕಾರಗಳ ನಡುವೆ ನಡೆಯಿತು. ಧ್ವಜಾರೋಹಣ ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿದ ತಹಶೀಲ್ದಾರ್ ಧ್ವಜಾರೋಹಣ ಕುರಿತು ರಾಜ್ಯ ಸರ್ಕಾರದ ನಡೆಯ ವಿರುದ್ದವೂ ಮುಖಂಡರು ಆಕ್ರೋಶ, ಕಾರ್ಯಕ್ರಮದಲ್ಲಿ ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದರ ವಿರುದ್ಧವೂ ಬೇಸರ ವ್ಯಕ್ತಪಡಿಸಿದರು. ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಕನ್ನಡಬಾಷೆ ಉಳಿವಿಗಾಗಿ ಅನೇಕ ಮಹನೀಯರು ಹೋರಾಡಿದ್ದಾರೆ ಅವರನ್ನು ಇಂದಿನ ಯುವ ಪೀಳಿಗೆ […]

ಕೋಲಾರ,ಅ.30: ಹಿಂದಿನ ದಿನಕ್ಕಿಂತ ನಾಳೆಯೇ ಲೇಸು ಎಂಬ ನುಡಿಯು ಅರ್ಥಪೂರ್ಣವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಅರೋಗ್ಯಕರ ಮನಸ್ಸು ಅಗತ್ಯವಿದೆ. ಭಾಷೆಗೂ ಭಾವನೆಗೂ ಅವಿನಭಾಜ್ಯ ಸಂಬಂಧವಿದೆ. ಕನ್ನಡ ಭಾಷೆ ಸಂವಾಹನ ಅಭಿವ್ಯಕ್ತವಾಗುತ್ತಿದೆ ಎಂದು ಡಾ. ಕೆ.ರಾಜಕುಮಾರ್ ಅಭಿಪ್ರಾಯಪಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೋಲಾರದ ಅಂತರಗಂಗೆ ರಸ್ತೆಯ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಲುವಾಗಿ ಕನ್ನಡ ಪರಿಚಾರಕ-2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ಕನ್ನಡ ಪರಿಚಾರಕ ಎಂಬುವುದಕ್ಕಿಂತ ನುಡಿ ಪರಿಚಾರಕ ಎಂಬುವುದು ಸೂಕ್ತವಾಗಿದೆ ಎಂದು […]

ಶ್ರೀನಿವಾಸಪುರ;ಪಟ್ಟಣದ ಪುರಸಭೆ ಮುಂಭಾಗ ಮಂಗಳವಾರ ದಿ.ಪುನಿತ್ರಾಜಕುಮಾರ್ರವರ 3ನೇ ವರ್ಷದ ಪುಣ್ಯ ತಿಥಿಯನ್ನು ಪುನಿತ್ರಾಜಕುಮಾರ್ ಬಳಗವು ಆಯೋಜಿಸಿ ಅನ್ನಸಂತರ್ಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಪುರಸಭೆ ಅಧ್ಯಕ್ಷ ಬಿ.ಆರ್.ಬಾಸ್ಕರ್, ಪಿಎಸ್ಐ ಜಯರಾಮ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಜಿ.ಎಸ್.ಶ್ರೀನಿವಾಸ್, ಪುನಿತ್ರಾಜಕುಮಾರ್ ಅಭಿಮಾನಿ ಬಳಗದ ಪದಾಧಿಕಾರಿಗಳಾದ ರಾಜ್ ದ್ವನಿ ವರ್ಧಕ ಮಾಲೀಕ ಶ್ರೀನಿವಾಸ್, ಚಂದ್ರು, ಎಚ್.ಎಸ್. ನಾರಾಯಣಮೂರ್ತಿ, ಲಕ್ಷ್ಮಣಬಾಬು, ಗೊಂಗರ್ ಶ್ರೀನಿವಾಸ್, ಕಾರ್ತೀಕ್ , ಮುನಿರಾಜು, ಮಂಜು ಇದ್ದರು.

ಶ್ರೀನಿವಾಸಪುರ : ಈ ಭಾಗದಲ್ಲಿ ಅತಿ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದೇವೆ ಕೃಷಿ ಆಧಾರಿತ ಕಂಪನಿಗಳು ಎಂದರೆ ಉಪ್ಪಿನಕಾಯಿ ಕಾರ್ಖಾನೆಗಳು ಹಣ್ಣು ತಿರುಳು ತೆಗೆಯುವ ಕಾರ್ಖಾನೆಗಳು ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್ ತಯಾರು ಮಾಡುವಂತಹ ಕಾರ್ಖಾನೆಗಳು ಹಾಗೂ ಇವುಗಳಿಗೆ ಬೇಕಾದಂತಹ ಪ್ಯಾಕಿಂಗ್ ಮೆಟೀರಿಯಲ್ ಇಂದ ಹಿಡಿದು ಇನ್ನು ಅನೇಕ ಕಂಪನಿಗಳು ಬರಬಹುದು ನಂತರ ನಾವು ತಯಾರಿಸಿದ ಪ್ರಾಡಕ್ಟ್ಸ್ ಅನ್ನು ದೇಶವಿದೇಶಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತಹ ಪ್ರಕ್ರಿಯೆಗಳನ್ನು ಮಾಡಿದರೆ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು […]

ಶ್ರೀನಿವಾಸಪುರ; ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಬಾವಿ ಸಭೆ, ಕುಂದುಕೊರತೆ ಸಭೆ, ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿ ಹಾಗು ಇತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಶ್ರೀನಿವಾಸಪುರ : ತಾಲ್ಲೂಕಿನ ಯಲವಳ್ಳಿ ಯಿಂದ ಕೋಲಾರ ಶ್ರೀನಿವಾಸಪುರ ಮುಖ್ಯ ರಸ್ತೆಯ ತನಕ ಬಂಡಿದಾರಿಯಿದ್ದು ರಸ್ತೆ ಬದಿಯ ಜಮೀನು ಮಾಲೀಕರು ರಸ್ತೆಯನ್ನು ಸೋಮವಾರ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಲಾಯಿತು.ಹಲವು ವರ್ಷಗಳಿಂದ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಜಮೀನು ಮಾಲೀಕರು ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಸಹ ಸಮಸ್ಯೆ ಬಗೆಹರಿದಿಲ್ಲ ಕಳೆದ ಏಳು ದಿನಗಳ ಹಿಂದೆ ಗ್ರಾಮಸ್ಥರು ಪುನಃ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು ಕಂದಾಯ ಇಲಾಖೆ […]

ಶ್ರೀನಿವಾಸಪುರ : ನನ್ನ ಕ್ಷೇತ್ರಕ್ಕೆ ಸಂಬಂದಿಸಿದ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು , ಅವರ ಅಭಿವೃದ್ದಿಯೇ ನನ್ನ ಗುರಿ . ಅವರಿಗೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡುವ ವ್ಯವಸ್ಥೆ ಮಾಡಲು ಇಚ್ಚಿಸಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯ ಆವರಣದ ಮುಂಭಾಗದಲ್ಲಿ ಸೋಮವಾರ ಕೃಷಿ ಇಲಾಖೆಯಿಂದ ಕೃಷಿ ಪರಿಕರಗಳನ್ನು ಅರ್ಹ ಫಲಾನುಭವಿಗಳಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು.ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ […]

ಕೋಲಾರ.ಅ.28: ಗಡಿಭಾಗಗಳಲ್ಲಿ ರೈತರ ಬೆಳೆ ನಾಶಮಾಡುತ್ತಿರುವ ಕಾಡಾನೆಗಳು ಹಾಗೂ ಕಾಡಂದಿಗಳ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ರೈತ ಸಂಘದಿಂದ ಉಪ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಕಳ್ಳರು ಬಂದು ಊರು ದೋಚಿದ ಮೇಲೆ ಊರ ಬಾಗಿಲು ಹಾಕಿದರೂ ಎಂಬ ಗಾದೆಯಂತೆ ಕಾಡಾನೆಗಳಿಂದ ರೈತರ ಬೆವರು ಸುರಿಸಿ ಬೆಳೆದ ಬೆಳೆ ನಾಶವಾದ ನಂತರ ಪತ್ತೆಯಾಗುವ ಅರಣ್ಯ ಅಧಿಕಾರಿಗಳ ರೈತ ವಿರೋಧಿ ದೋರಣೆ ಹಾಗೂ ಗಡಿಭಾಗದ […]