
ಶ್ರೀನಿವಾಸಪುರ : ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಶ್ರಮಿಸಿ, ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುವುದು. ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲಮಾಡಲಾಗುವುದು ಎಂದು ಪಿಡಿಒ ಕೆ.ಪಿ.ಶ್ರೀನಿವಾಸರೆಡ್ಡಿ ಹೇಳಿದರು.ತಾಲೂಕಿನ ಯಲ್ದೂರು ಗ್ರಾಮದ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಗ್ರಾಮಸಭೆಯಲ್ಲಿ ಮತನಾಡಿದರು.ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಬೀದಿ ದೀಪಗಳಿಗೆ ಬಲ್ಬುಗಳು ಇಲ್ಲದೆ ಇರುವ ಕಂಬಗಳನ್ನು ಪರಿಶೀಲಿಸಿ ಬಲ್ಬುಗಳನ್ನು ಹಾಕಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಹಳ್ಳಿಗಳಲ್ಲಿ ನೀರಿನ ಪೈಪ್ ಲೈನ್ ಹೊಡೆದು […]

ಶ್ರೀನಿವಾಸಪುರ : ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅಧ್ಯಯನ ನಡೆಸಿ ಅರಿವು ಮೂಡಿಸಿಕೊಂಡು ಸಾರ್ವಜನಿಕರಿಗೂ ಸಹ ಕಾನೂನಿನ ಬಗ್ಗೆ ತಿಳಿ ಹೇಳಬೇಕು. ಗ್ರಾಮೀಣ ಭಾಗದಲ್ಲಿ ಅಕ್ಷರಸ್ಥರು ಕಡಿಮೆ ಇರುವುದರಿಂದ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಕಾಯ್ದೆಯ ಬಗ್ಗೆ ಅರಿತು ಸುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಸಚಿನ್ ಹೇಳಿದರು.ಪಟ್ಟಣ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ತಾಲೂಕು ಕಾನೂನು ಸೇವ ಸಮತಿವತಿಯಿಂದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ […]

ಶ್ರೀನಿವಾಸಪುರ : ಪಟ್ಟಣದ ನೌಕರರ ಭವನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಎಂ.ಬೈರೇಗೌಡ ಸಲ್ಲಿಸಿದರು. ನಾಮ ಪತ್ರ ಸಲ್ಲಿಸುವ ಕೊನೆಯ ದಿನವಾದ ಗುರುವಾರ ನಾಮಪತ್ರವನ್ನ ಚುನಾವಣಾಧಿಕಾರಿ ಐಮಾರೆಡ್ಡಿರವರಿಗೆ ಸಲ್ಲಿಸಿದರು.ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂ.ಬೈರೇಗೌಡ ಮಾತನಾಡುತ್ತಾ ಈಗಾಗಲೇ ವಿವಿಧ ಇಲಾಖೆಗಳಿಂದ ಚುನಾವಣೆಯಲ್ಲಿ 32 ನಿರ್ದೆಶಕರು ವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 3 ಮಂದಿ ಆಕಾಂಕ್ಷಿಗಳಿದ್ದೇವೆ ಇವರಲ್ಲಿ ನಾನೂ ಒಬ್ಬನಾಗಿದ್ದೇನೆ ನನಗೆ ಒಮ್ಮೆ ಅವಕಾಶ ನೀಡಿ ತಾಲ್ಲೂಕಿನ ನೌಕರರ ಸಮಸ್ಯೆಗಳಿಗೆ ದ್ವನಿಯಾಗಿ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.ಎಲ್ಲಾ ನಿರ್ದೇಶಕರು ನನ್ನ ಅಧ್ಯಕ್ಷನಾಗಿ […]

ಕೆ.ಎಸ್.ಗಣೇಶ್ಕೋಲಾರ: ಬಂಗಾರಪೇಟೆ ತಾಲೂಕಿನಲ್ಲಿ 6 ಎಕರೆ 9 ಗುಂಟೆ ಬಿ ಖರಾಬ್ ಜಮೀನನ್ನು ಕಾನಿಡೆಂಟ್ ಚಾಂಪಿಯನ್ ರೀಫ್ ಗಾಲ್ ಸಂಸ್ಥೆಗೆ ಮಂಜೂರು ಮಾಡುವ ಹಾಗೂ ಅನಿಗಾನಹಳ್ಳಿ ಗುಂಡು ತೋಪು ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ಕಾಯ್ದಿರಿಸಲು ಕೋರಿರುವ ಕುರಿತು ವಿವರವಾದ ವರದಿ ಹಾಗೂ ಕೈಗೊಂಡ ಕ್ರಮದ ಮಾಹಿತಿಯನ್ನು ಕೂಡಲೇ ಒದಗಿಸುವಂತೆ ಜಿಲ್ಲಾಕಾರಿಗಳನ್ನು ಕಂದಾಯ ಇಲಾಖೆ ಕೋರಿದೆ.ಸರಕಾರದ ಅೀನ ಕಾರ್ಯದರ್ಶಿ ಮಹಾಂತಯ್ಯ ಎಸ್ ಹೊಸಮಠ ಈ ಕುರಿತು ಅ.21 ರಂದು ಜಿಲ್ಲಾಕಾರಿಗಳಿಗೆ ಪತ್ರ ಬರೆದು ವಿವರವಾದ ಪ್ರಸ್ತಾವನೆ ವರದಿ ಹಾಗೂ […]

ಕೋಲಾರ:- ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯವಿದ್ದು, ಅವರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಅಂಜುಮಾನ್ ಅಲಮಿನ್ ಶಾಲಾ ಆವರಣದಲ್ಲಿ ನಡೆದ ೨೦೨೪-೨೫ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಆಧುನಿಕತೆ ಬೆಳೆದಂತೆ ಮೊಬೈಲ್, ದೂರದರ್ಶನದ ದಾಳಿಯಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ […]

ಶ್ರೀನಿವಾಸಪುರ; ಪಟ್ಟಣದ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ವಿ.ನಾಗರಾಜು ರವರು ಬುಧವಾರ ಅಧಿಕಾರ ಸ್ವೀಕರಿಸಿದರು. ಚಿಕ್ಕಮಂಗಳೂರಿಗೆ ವಗಾವಣೆಯಾಗಿರುವ ವೈ.ಎನ್.ಸತ್ಯನಾರಾಯಣರವರನ್ನ ಬೀಳ್ಕೊಡಲಾಯಿತು. ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಪುರಸಭೆ ಮಾಜಿ ಅಧ್ಯಕ್ಷ ಮುಕ್ತಿಯಾರ್, ಸದಸ್ಯರಾದ ತಜಮಲ್, ಆನಂದ್, ಮುಖಂಡ ಜಿ.ಆರ್.ಶ್ರೀನಿವಾಸ್ ಇದ್ದರು.

ಶ್ರೀನಿವಾಸಪುರ : ಜೀವನದ ಪ್ರತಿ ಹಂತದಲ್ಲೂ ಟಾಕ್, ವಾಕ್,ವರ್ಕ್ ಅಭ್ಯಾಸಮಾಡಿಕೊಳ್ಳಿ, ಆಗ ಮಾತ್ರ ಕ್ರಿಯಾಶೀಲ ಜೀವನ ಸಾಧ್ಯ ಎಂದು ಖ್ಯಾತ ಮನೋ ವೈದ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸಿ.ಆರ್ ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ಪ್ರಶಸ್ತಿ ಪುರಸ್ಕೃತ ರನ್ನು ಸನ್ಮಾನಿಸಿ ಅವರು ಮಾತನಾಡಿದರು.ಜ್ಞಾನ ಮತ್ತು ವಿಜ್ಞಾನ ಯಾರ ಆಸ್ತಿಯೂ ಅಲ್ಲ. ವಿಜ್ಞಾನ ಯುಗದಲ್ಲಿ ಕಲಿಕೆ ನಮ್ಮ ಮೊದಲ ಆದ್ಯತೆ ಆಗಬೇಕು, ಕಲಿಯುವಾಗ ವಿದ್ಯಾರ್ಥಿ ಪ್ರೀತಿಯಲ್ಲಿ ಪ್ರಶ್ನೆ – […]

ಶ್ರೀನಿವಾಸಪುರ : ತಾಲೂಕಿನ ಪೆಗಳಪಲ್ಲಿ ಗ್ರಾಮದ ಬಳಿಯ ಮಾವಿನ ತೋಟದಲ್ಲಿ ಶನಿವಾರ ಸಂಜೆ 4 ಗಂಟೆ ಸಮಯದಲ್ಲಿ ಖಚಿತ ಮಾಹಿತಿಯ ಮೇರೆಗೆ ಇಸ್ಪೀಟ್ ದಂದೆಯ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್ ಹಾಗು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ ಏಳು ಮಂದಿ ಆರೋಪಿಗಳು ಹಾಗು 9500 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.ಇದೇ ಸಮಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಮಾತನಾಡಿ ಇತ್ತೀಚಿಗೆ ಕಾನೂನು ಬಾಹಿರದಲ್ಲಿ ಪಾಲ್ಗುಂಡಿರುವವರನ್ನ ಮಟ್ಟಹಾಕಲು ಎಸ್ಪಿರವರ ನಿರ್ದೇಶನದ ಮೇರೆಗೆ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಆಕ್ರಮ […]

ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರ ಗೌಡಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಕರೇಗೌಡ, ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರು. ನಾಡು ನುಡಿಯ ರಕ್ಷಣೆ ಎಲ್ಲರ ಹೊಣೆ -ಗೋಪಾಲಗೌಡ ಶ್ರೀನಿವಾಸಪುರ ನಾಡು ನುಡಿಯ ರಕ್ಷಣೆ ನಾಡಿನ ಎಲ್ಲರ ಹೊಣೆ. ಕನ್ನಡ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ […]