
ಅಕ್ಟೋಬರ್ 25 ರಂದು, ಸೇಂಟ್ ಆಗ್ನೆಸ್ ಪಿಯು ಕಾಲೇಜು ಅಜ್ಜಿಯರ ದಿನವನ್ನು ಅನುಗ್ರಹದಿಂದ ಮತ್ತು ಹೃತ್ಪೂರ್ವಕ ಮೆಚ್ಚುಗೆಯೊಂದಿಗೆ ಆಚರಿಸಿತು, ಅಜ್ಜಿಯರು ಕುಟುಂಬಗಳಿಗೆ ತರುವ ಬುದ್ಧಿವಂತಿಕೆ ಮತ್ತು ಪ್ರೀತಿಯನ್ನು ಗೌರವಿಸಿದರು. ಕಾರ್ಯಕ್ರಮವು 25 ಮಂದಿ ಅಜ್ಜಿಯರಿಗೆ ಗುಲಾಬಿಯನ್ನು ನೀಡುವ ಮೂಲಕ ಆತ್ಮೀಯ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರ ಆಕರ್ಷಕ ಮೌಲ್ಯಾಧಾರಿತ ನೃತ್ಯ ನಾಟಕವು ಅಜ್ಜಿ ಮತ್ತು ಅವರ ಮಕ್ಕಳ ನಡುವಿನ ಆಳವಾದ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. 1960 ಮತ್ತು 70 ರ ದಶಕದ ರೆಟ್ರೊ […]

ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಈ ಇಬ್ಬರು, ಬೀಜಾಡಿ ಬೀಚ್ ಸಮೀಪದ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದಾರೆನ್ನಲಾಗಿದೆ. ಬೆಳಿಗ್ಗೆ ಇಬ್ಬರೂ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ. ಕೂಡಲೇ ಸ್ಥಳೀಯರು ಓರ್ವನನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆ ಮೃತಪಟ್ಟರು. ಆದರೆ ನಾ ಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ […]

ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಬೆಳ್ಮಣ್ಣು ಜೇಸಿಐನ 44ನೇ ವರ್ಷದ ಜೇಸಿ ಸಪ್ತಾಹ “ಅಮೃತೋತ್ಸವ” ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕೃಷಿ, ಸ್ವಚ್ಛತೆ ಮುಂತಾದ ಹಲವಾರು ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ಜನಪಯೋಗಿ ಕಾರ್ಯಕ್ರಮ ನಡೆಸುತ್ತ ಬರುತ್ತಿರುವ ಸಂಸ್ಥೆಯ ಸಾಧನೆಯನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ […]

ಉಡುಪಿ, ಅಕ್ಟೋಬರ್ 24 ಮತ್ತು 25: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬ್ರಹ್ಮಾವರ ವಲಯದ, ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2024-25ನ್ನು ಮಿಲಾಗ್ರಿಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಶ್ರೇಷ್ಠಗುರು ಫರ್ಡಿನೆಂಡ್ ಗೊನ್ಸಾಲ್ವಿಸ್ರವರು ಪಥಸಂಚಲನದ ತಂಡಗಳಿಂದ ಗೌರವವನ್ನು ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಆಭಿನ್ ದೇವಾಡಿಗರವರು ಕ್ರೀಡಾಜ್ಯೋತಿ ಬೆಳಗಿ, […]

ಕುಂದಾಪುರ; ಹದಿನೇಳು ವರ್ಷದಿಂದ ಎಂಡೋಸಲ್ಫಾನ್ ಕಾರಣದಿಂದ ಹಾಸಿಗೆ ಹಿಡಿದ ಸೇನಾಪುರದ ಸಂತ್ರಸ್ತೆಗೆ ಕುಂದಾಪುರದ ಇಂಡಿಯನ್ ರೆಡ್ ಕ್ರಾಸನ ವತಿಯಿಂದ ದಿನನಿತ್ಯ ಅಗತ್ಯವಿರುವ ಅಂಡರ್ ಪ್ಯಾಡ್ ಗಳನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ ಗಡದ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ರೆಡ್ ಕ್ರಾಸನ ಸಭಾಪತಿ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ ಹಾಗೂ ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ ಉಪಸ್ಥಿತರಿದ್ದರು.

ಉಡುಪಿ: ವ್ಯಕ್ತಿ ಇನ್ನೋರ್ವ ವ್ಯಕ್ತಿಯೊಡನೆ ಮಾತನಾಡಿದಾಗ ಸಂಭಾಷಣೆ ಆರಂಭವಾದರೆ ಅದೇ ವ್ಯಕ್ತಿ ಸಮೂಹದೊಂದಿಗೆ ಮಾತನಾಡಿದಾಗ ಭಾಷಣದ ಆರಂಭವಾಗುತ್ತದೆ. ಭಾಷಣ ಕೂಡ ಸಂಪರ್ಕಾಕ್ಕಾಗಿ ಇರುವ ಮಾಧ್ಯಮ ಎಂದು ಉಡುಪಿ ಧರ್ಮಪ್ರಾಂತ್ಯದ ಭಾರತೀಯ ಕಥೊಲಿಕ ಯುವ ಸಂಚಾಲನದ ನಿರ್ದೇಶಕ ವಂ|ಸ್ಟೀವನ್ ಫೆರ್ನಾಂಡಿಸ್ ಅಭಿಪ್ರಾಯ ಪಟ್ಟರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೆಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಭಾಷಣವೆಂದರೆ ಕೇವಲ ಬರೀ ಮಾತುಗಳಾಗದೆ ನಮ್ಮ ನೈಜ ಭಾವನೆಗಳನ್ನು ಮತ್ತು […]

ಆರೋಗ್ಯ ತಪಾಸಣಾ ಶಿಬಿರ ರೆಡ್ ಕ್ರಾಸ್ ಸಂಸ್ಥೆಯು ನಿಯತವಾಗಿ ನಡೆಸುತ್ತಾ ಬಂದಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಬಳಿಯಿರುವ ಜನೌಷಧಿ ಕೇಂದ್ರದ ವಠಾರದಲ್ಲಿ ಜರುಗಿದ್ದು 146 ಮಂದಿ ಇದರ ಪ್ರಯೋಜನ ಪಡೆದರು.