ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ರೋಟರಿ ಜಿಲ್ಲೆಯ ಈ ವರ್ಷದ ಯೋಜನೆಗಳಲ್ಲಿ ಒಂದಾದ ಸ್ತ್ರೀ ಸಶಕ್ತೀಕರಣದ ಅಂಗವಾಗಿ ಶ್ರೀಮತಿ ಲಕ್ಷ್ಮಿ ಬೀಜಾಡಿ ಇವರಿಗೆ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕರ ‘ಸವಿತಾ’ ಫೌಂಡೇಶನ್ನಿನ ಮೂಲಕ ಹೊಲಿಗೆ ಯಂತ್ರವನ್ನು ಪೂರ್ವಾಧ್ಯಕ್ಷರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.
ಕುಂದಾಪುರ, ಅ.31: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ತಿಥಿ ಹಾಗೂ ದೇಶದ ಪ್ರಥಮ ಗೃಹ ಸಚಿವ ಸರದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು. “ಸ್ವತಂತ್ರ ಭಾರತದ ಇತಿಹಾಸದಲ್ಲಿ ಕ್ರಾಂತಿಕಾರಕವಾದ ಉಳುವವನೆ ಹೊಲದೊಡೆಯ ಕಾನೂನನ್ನು ಜಾರಿಗೊಳಿಸುವ ಮೂಲಕ ದೇಶದ ಕಟ್ಟ ಕಡೆಯ ಕೃಷಿಕಾರ್ಮಿಕನಿಗೆ ಭೂಮಿಯ ಹಕ್ಕನ್ನು ನೀಡುವ ಮೂಲಕ ಮತ್ತು ಶ್ರೀಮಂತ ವರ್ಗಕ್ಕಷ್ಟೆ ಸೀಮಿತವಾಗಿದ್ದ ಬ್ಯಾಂಕ್ಗಳನ್ನು ರಾಷ್ಟ್ರೀಕರಣದ ಮಾಡುವ ಮೂಲಕ ದೇಶದ ಸಾಮಾನ್ಯ ಜನತೆಗೆ ಬ್ಯಾಂಕಿನ ಸಾಲ ಮತ್ತಿತರ ಸೌಲಭ್ಯಗಳು […]
ಬೆಳ್ತಂಗಡಿ, ಅ. 28 ರಂದು ನಡೆದ ಶ್ರೀ ಮಂಜುನಾಥೇಶ್ವರ ರತ್ನವರ್ಮ ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಹೋಲಿ ರೆಡೀಮರ್ ಆ.ಮಾ. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಆಲ್ಸ್ಟನ್ (7 ನೇ ತರಗತಿ) ಮತ್ತು ದೀಕ್ಷಿತಾ (8 ನೇ ತರಗತಿ) ಕ್ಲಸ್ಟರ್ ಮಟ್ಟದ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆಲ್ಸ್ಟನ್ (7 ನೇ ತರಗತಿ) 600 ಮೀ ಮತ್ತು 400 ಮೀ ಓಟದಲ್ಲಿ ಪ್ರಥಮ ಸ್ಥಾನ ಮತ್ತು 200 ಮೀ ಓಟದಲ್ಲಿ ದ್ವಿತೀಯ ಸ್ಥಾನ. […]
ಬೆಳ್ತಂಗಡಿ, ಅ. 28 ರಂದು ನಡೆದ ಶ್ರೀ ಮಂಜುನಾಥೇಶ್ವರ ರತ್ನವರ್ಮ ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಟ್ಪುಟ್ನಲ್ಲಿ ಸೃಷ್ಟಿ (10ನೇ ತರಗತಿ) ಪ್ರಥಮ ಸ್ಥಾನ, 200 ಮೀಟರ್ ಓಟ ಮತ್ತು ಎತ್ತರ ಜಿಗಿತದಲ್ಲಿ ಜೋಶನ್ (10ನೇ ತರಗತಿ) ಪ್ರಥಮ ಸ್ಥಾನ. ಬಾಲಕರ ರಿಲೇಯಲ್ಲಿ ಜೋಶನ್, ವರುಣ್, ಧನುಷ್ ಮತ್ತು ಶಾಮಿಲ್ ಪ್ರಥಮ ಸ್ಥಾನ ಪಡೆದರು. 400ಮೀ ಮತ್ತು 800ಮೀ ಓಟದಲ್ಲಿ ಲುಹಾ (10ನೇ ತರಗತಿ)ದ್ವಿತೀಯ, […]
ಕುಂದಾಪುರ : ಎಷ್ಟೋ ಜನರ ಬಾಳಿಗೆ ಬೆಳಕಾಗಿದ್ದ ಅಪ್ಪು ಇಲ್ಲದೆ ವರುಷವೊಂದು ಕಳೆದು ಹೋಗಿದೆ ಕನ್ನಡ ಚಿತ್ರರಂಗದ ದಂತ ಕತೆಯಾಗಿರುವ ಪುನೀತ್ ರಾಜ್ ಕುಮಾರ್ ಸೂರ್ಯ ಚಂದ್ರರಿರುವ ತನಕ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತರಾಗಿರುತ್ತಾರೆ. ಎಂದು ಕನ್ನಡಾಭಿಮಾನಿ ಡಾ.ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿಯವರು ಹೇಳಿದರು.ಅವರು ಸಂಘ ವತಿಯಿಂದ ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಪುನೀತ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ದೀಪ ಹಚ್ಚಿ ಮಾತನಾಡಿದರು.ಮೊಂಬತ್ತಿ ಬೆಳಗಿಸುವುದರ ಮೂಲಕ ಒಂದು ನಿಮಿಷ ಮೌನವನ್ನುಆಚರಿಸಲಾದ […]
ಕುಂದಾಪುರ, ಅ. 29: ‘ಅಜ್ಞಾನ ಎಂಬುದು ತೊಲಗಿ ಜ್ಞಾನ ಎಂಬ ಜ್ಯೋತಿ ನಮ್ಮಲ್ಲಿ ಬೆಳಗಬೇಕು, ಕೆಟ್ಟದನ್ನು ಬಿಟ್ಟು ಒಳ್ಳೆದನ್ನು ಆರಂಭಿಸಬೇಕು, ದುಷ್ಟತನಕ್ಕೆ ಸೋಲುಂಟಾಗಿ, ಒಳ್ಳೆತನಕ್ಕೆ ಜಯವಾಗಬೇಕು, ಹಿಂದೆ ನಾವೆಲ್ಲ ಎಲ್ಲರೂ ಒಟ್ಟಾಗಿ ದೀಪಾವಳಿ ಆಚರಿಸುತಿದ್ದೇವು, ಸಿಹಿ ತಿಂಡಿಗಳಿಗೆ ಕಾತರಿಸುತ್ತೀದ್ದೆವು, ಯೇಸು ಸ್ವಾಮಿ ಹೇಳಿದ್ದನು, ನಿನ್ನ ದೀಪವನ್ನು ಪೆಟ್ಟಿಗೆಯಲ್ಲಿ ಅವಿತಿಡಬೇಡ, ಎತ್ತರದ ಜಾಗದಲ್ಲಿಟ್ಟು ಎಲ್ಲರೂ ಅದರ ಬೆಳಕು ಸಿಗುವಂಗಾಗಬೇಕೆಂದು, ಹೀಗೆ ನಾವೆಲ್ಲರೂ ಜಗತ್ತಿನ ದೀಪಗಾಬೇಕು” ಎಂದು ಕುಂದಾಪುರ ವಲಯ ಪ್ರಧಾನ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| […]
ರಾಜ್ಯ ಮಟ್ಟದಲ್ಲಿ ಕ್ರೀಡಾ ಗಾಯನ ಮತ್ತು ಅಧ್ಯಯನ ಕ್ಷೇತ್ರದಲ್ಲಿ 7 ಸಾಧಕರು ಮತ್ತು ಎಸ್ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ 28 ಟಾಪರ್ಗಳನ್ನು ಸನ್ಮಾನಿಸಲಾಯಿತು.ಚರ್ಚಿನ ಧರ್ಮಗುರು ವಂ| ವಾಲ್ಟರ್ ಡಿಸೋಜಾ 21 ಆಯೋಗಗಳ ಸಂಯೋಜಕ ಶ್ರೀ ರಾಜೇಶ್ ಡಿಸೋಜ, ಪಾಲನ ಮಂಡಳಿ.ಕಾರ್ಯದರ್ಶಿ ಶ್ರೀಮತಿ ಮೇಬಲ್ ಲೋಬೋ ಉಪಸ್ಥಿತರಿದ್ದರು ಶಿಕ್ಷಣ ಆಯೋಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶ್ರೀ ವಿನೋದ್ ಡಿಎಸ್ಎ ಸ್ವಾಗತಿಸಿದರು, ಶ್ರೀ ಗ್ಲಾನಿಶ್ ಮಾರ್ಟಿಸ್ ಮತ್ತು ಕು. ಅಶ್ವಿನಿ ಡಿಸೋಜಾ ಅವರು ಸನ್ಮಾನಿತರ […]
26 ಅಕ್ಟೋಬರ್ 2022 ರಂದು, ಅಲಂಗಾರ್ನ ಹೋಲಿ ರೋಸರಿ ಚರ್ಚ್ ತನ್ನ ವಾರ್ಷಿಕ ಹಬ್ಬವನ್ನು ಆಚರಿಸಿತು. ಮೂಡುಬಿದಿರೆ ಚರ್ಚ್ನ ಧರ್ಮಗುರು, ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ಅ| ವಂ||ಓನಿಲ್ ಡಿಸೋಜ ದಿವ್ಯ ಬಲಿಪೂಜೆಯ ನೇತ್ರತ್ವ ವಹಿಸಿದ್ದರು. ಸುಮಾರು 25 ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು. “ಒಡನಾಟ ಬಲಗೋಳಿಸೋಣ –ಒಗ್ಗಟ್ಟಿನ ಸಮುದಾಯ ಕಟ್ಟೋಣ” ಎಂಬುದು ಹಬ್ಬದ ಧ್ಯೇಯವಾಕ್ಯವಾಗಿತ್ತು. ವಾರ್ಷಿಕ ಹಬ್ಬದಲ್ಲಿ ಅಪಾರ ಸಂಖ್ಯೆಯ ಭಕ್ತರು ಹಾಗೂ ಮೇರಿ ಮಾತೆಯ ಭಕ್ತರು ಪಾಲ್ಗೊಂಡಿದ್ದರು ವಾರ್ಷಿಕ ಔತಣಕೂಟವನ್ನು ಆಯೋಜಿಸಲು ಸಹಕರಿಸಿದ ಎಲ್ಲಾ […]