
ಕುಂದಾಪುರ: “ಮಹಿಳೆಯರಿಗೆ ಗೌರವ ಕೊಟ್ಟಿದ್ದೆ ಕಾಂಗ್ರೆಸು. ಇದು ಸಾಧ್ಯವಾಗಿದ್ದು ಭಾರತದ ಸಂವಿದಾನದಿಂದ. ಬಿಜೆಪಿ ಭಾರತದ ನಕಾಶೆಯ ಚಿತ್ರ ಬರೆದು ಕಿರೀಟ ಮತ್ತು ವೇಷ ತೊಟ್ಟ ಮಹಿಳೆಯ ಕೈಯಲ್ಲಿ ರಾಷ್ಟ್ರಧ್ವಜವನ್ನು ತೋರಿಸಿ ಭಾರತ ಮಾತೆ ಎನ್ನುತ್ತದೆ. ಆದರೆ ಕಾಂಗ್ರೆಸ್ ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಭಾರತಮಾತೆ ಎಂದು ಗೌರವಿಸುತ್ತದೆ, ಈ ವಂವಿಧಾನದಿಂದ ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾದರು, ಇಂದಿರಾ ಗಾಂಧಿ ಮಹಿಳೆಯಾಗಿ ಕ್ರಾಂತಿಕಾರಿ ಅಭಿವ್ರದ್ದಿಗಳನ್ನು ಮಾಡಿದರು, ಎಂದು ಕಾಂಗ್ರೆಸ್ ಮುಖಂಡೆ, ಮಂಗಳೂರು ಮಹಾನಗರ ಪಾಲಿಕೆಯ ಮಾಜೀ ಸದಸ್ಯೆ […]

ಶ್ರೀನಿವಾಸಪುರ: ಸೇವೆಯ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು ಎಂದು ಮಾಜಿ ಸಂಸದ ಡಾ. ವೆಂಕಟೇಶ್ ಹೇಳಿದರು.ಪಟ್ಟಣದ ವೆಂಕಟೇಶ್ವರ ಸಭಾಂಗಣದಲ್ಲಿ ಎಎಪಿ ವತಿಯಿಂದ ಶನಿವಾರ ಏರ್ಪಡಿಸಿದ್ದ, ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ರಚನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ತೆರಿಗೆದಾರರಾಗಿರುವ ಬಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ಹೇಳಿದರು.ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಗಳಿಕೆ ತಂತ್ರ ಒಳಗೊಂಡ ಪ್ರಣಾಳಿಕೆ ಬಿಡುಗಡೆಗೊಳಿಸುವುದು ಸಾಮಾನ್ಯ. ಅಂಥ ಪ್ರಣಾಳಿಕೆಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರಬರುತ್ತವೆ. ಆದರೆ ಎಎಪಿ, ಸಾರ್ವಜನಿಕರಿಂದ […]

Times Business Awards presented in Mysuru on March 14, 2023 at Silent Shores Resort and SPA Mysuru, and the Emerging project of the year was awarded to ‘Rohan City’, Mangalore, a Project of Rohan Corporation India Pvt ltd, Chairman, Mr Rohan Monteiro. Award received by Mr. Deemanth Suvarna (General Manager, Sales Marketing) & Mr. Alphonse […]

ಕುಂದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೇವಲ ಸಾಲ ನೀಡುವ ಅಥವಾ ಲಾಭ ಮಾಡುವ ಉದ್ದೇಶದಿಂದ ಪ್ರಾರಂಭಿಸಿದ್ದಲ್ಲ. ಸಮುದಾಯದ ಜನರ ಸರ್ವಾಂಗೀಣ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಲು ಮತ್ತು ಆ ಮೂಲಕ ಗ್ರಾಮೀಣ ಜನರನ್ನು ಸ್ವಾವಲಂಬಿಗಳು ಮತ್ತು ಸಶಕ್ತರಾಗಿಸುವ ಉದ್ದೇಶದಿಂದ ಯೋಜನೆ ರೂಪುಗೊಂಡಿದೆ. ಈ ಎಲ್ಲಾ ಅನುಷ್ಠಾನಗಳಿಗೆ ಸಾಲದ ಬೆಂಬಲವೂ ಅಗತ್ಯವಿರುವುದರಿಂದ ಸಾಲ ಯೋಜನೆ ಪರಿಚಯಿಸಲಾಗಿದೆ. ಆದರೆ, ಕ್ಷೇತ್ರದ ವತಿಯಿಂದ ಸಾಲ ನೀಡುವುದಿಲ್ಲ. ಬ್ಯಾಂಕ್ ಒದಗಿಸುವ ಸಾಲಗಳಿಗೆ ಕ್ಷೇತ್ರದ ದೃಢೀಕರಣವಿರುತ್ತದಷ್ಟೇ ಎಂದು ಶ್ರೀ ಕ್ಷೇತ್ರ […]

ಕುಂದಾಪುರ:ನಿಮ್ಮ ಜೊತೆ ಸೇರಿ ನನಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಮಿತ್ರಸಂಗಮ ಸಂಸ್ಥೆ ಜನಪರ ಕಾರ್ಯಗಳನ್ನು ಸಮಾಜಕ್ಕೆ ನೀಡುತ್ತಾ ಆಶಕ್ತರಿಗೆ ನೆರವು ನೀಡಿ ಸಮಾಜ ಮುಖಿಯಾಗಿ ತನ್ನದೇ ಆದ ವಿಶಿಷ್ಠ ಸೇವೆಯನ್ನು ನೀಡಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ, ಗ್ರಾಮಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮುಖ್ಯ ಎಂದು ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು. “ಸನ್ಮಾನ […]

ಭಾರತೀಯ ಜೇಸಿಐನ ವಲಯ 15ರಲ್ಲಿ ಹಿರಿಯ ಘಟಕಗಳಲ್ಲಿ ಒಂದಾದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟೀಯ ಉಪಾಧ್ಯಕ್ಷರಾದ ಡಾ. ಸುಶಾಂತ್ ಅವರು ಮಾರ್ಚ್ 17ರಂದು ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬೆಳ್ಮಣ್ಣು ಜಂತ್ರ ಶಿವಗಿರಿ ಬಳಿ ನವೀಕರಣಗೊಳಿಸಿದ ಪ್ರಯಾಣಿಕರ ತಂಗುದಾಣ ಶಾಶ್ವತ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವತಿಯಿಂದ ವಿಎಲ್ಎಸ್ಐ ಸಿಸ್ಟಮ್ ವಿನ್ಯಾಸ ಎಂಬ ವಿಷಯದ ಬಗ್ಗೆ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಸಿಐಯೆಂಟ್ ಸೆಮಿಕಂಡಕ್ಟರ್ ಇದರ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ರಿಝ್ವಾನ್ ರೋಶನ್ ಹಾಗೂ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾದ ದಿಲೀಪ್ ಮೊಗವೀರ ಇವರು ಆಗಮಿಸಿದ್ದು ವಿಧ್ಯಾರ್ಥಿಗಳಿಗೆ ಕಾರ್ಯಗಾರ ನಡೆಸಿಕೊಟ್ಟರು. ಸೆಮಿಕಂಡಕ್ಟರ್ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುತ್ತ, ಚಿಪ್ ತಯಾರಿಸುವ ಬಗೆ, ಸೆಮಿಕಂಡಕ್ಟರ್ ಕಂಪೆನಿಯಲ್ಲಿನ ಅವಕಾಶಗಳನ್ನು ಸವಿವರವಾಗಿ […]

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಪ್ರಾಕ್ತನ ವಿದ್ಯಾರ್ಥಿ ಸಂಘ (ರಿ) ಕುಂದಾಪುರ ಇದರ ವಾರ್ಷಿಕ ಮಹಾಸಭೆಯು ಶನಿವಾರ ದಿನಾಂಕ 18-03-2023ರಂದು ಅಪರಾಹ್ನ 3ಗಂಟೆಗೆ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಗೆ ಎಲ್ಲಾ ಸದಸ್ಯರು, ಸದಸ್ಯರಾಗ ಬಯಸುವವರು ಮತ್ತು ಈ ಹಿಂದಿನ ಎಲ್ಲಾ ಸಂಘದ ಪದಾಧಿಕಾರಿಗಳು ಭಾಗವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ, ಮಾ.14: ಕುಂದಾಪುರ ಚರ್ಚ್ ರಸ್ತೆಗೆ ಸಂಬಂಧಿಸಿದ ಕಾನ್ವೆಂಟ್ ಕ್ರಾಸ್ ರಸ್ತೆಯ ಒಸ್ವಲ್ಡ್ ಕರ್ವಾಲ್ಲೊ ಮನೆಯ ನೆರೆಮನೆಯ ಆವರಣದಲ್ಲಿ ನಿನ್ನೆ ರಾತ್ರಿ ಹೆಬ್ಬಾವು ಕಂಡು ಬಂದಿದೆ. ಕೊನೆಗೆ ಅದನ್ನು ಹಿಡಿಯಲಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವುದೇ ಈ ವಾರ್ತೆಯ ಮುಖ್ಯ ಉದ್ದೇಶ. ಸ್ಥಳೀಯ ಪ್ರದೇಶದಲ್ಲಿ ಈಗ ತಾಪಮಾನ ಹೆಚ್ಚಾಗಿದ್ದು, ಬಿಲ, ಪೊದೆಯಲ್ಲಿ, ಮಣ್ಣಿನ ಒಳಗಡೆ ಇರುವ ಸರಿಸ್ರಪಗಳು, ತಾಪಮಾನ ತಾಳದೆ ಹೊರಗೆ ಬರುತ್ತವೆ, ನಮ್ಮ ಪರಿಸರದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಬಂದು ಸುತ್ತಾಡುತ್ತೀವೆ ಎಂದು ತಿಳಿದು ಬಂದಿದೆ, […]