ಕುಂದಾಪುರ ಜು 4: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯುತ್ತಮವಾಗಿ ನೆರವೇರಿತು. “ಕಲಿಕೆಯು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ, ಕಲಿತದ್ದು ಬದುಕಿನುದ್ದಕ್ಕೂ ಇರಬೇಕಾಗಿದೆ. ಆದ್ದರಿಂದ ಆಳವಾದ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನೇ ಗುರಿ ಕಂಡರೂ ಅದನ್ನು ಸಾಧಿಸುವ ಗರಿಷ್ಠ ಪ್ರಯತ್ನವನ್ನು ಮಾಡಬೇಕು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್ಆರ್ ಹೇಳಿದರು.   ಅತಿಥಿಯವರಾಗಿ ಆಗಮಿಸಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿಯವರು “ಕಲಿಕೆ ಮುಗಿದ ಮೇಲೆ ನಾವು ಬೇರೆಯವರಿಗೆ ಆಯ್ಕೆಯಾಗಿ ಇರಬೇಕೆ ಹೊರತು, ಯಾವುದೇ ಆಯ್ಕೆ ಇಲ್ಲದೆ […]

Read More

ರೋಟರಿ ಸಮುದಾಯ ದಳ ತಲ್ಲೂರು, ರೊ. ಕೆ. ಪಿ ಭಟ್ ದಂಪತಿಗಳು ಹಾಗೂ ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು. ರೋಟರಿ ಸಮುದಾಯ ದಳದ ಜಗದೀಶ್ ಆಚಾರ್ಯ, ಸದಾನಂದ ಆಚಾರ್ಯ, ರೊ. ಕೆ. ಪಿ. ಭಟ್, ರೊ. ಶೋಭಾ ಭಟ್, ರೊ. ಸತ್ಯನಾರಾಯಣ ಪುರಾಣಿಕ, ರೊ ಸಚಿನ್ ನಕ್ಕತ್ತಾಯ ಹಾಗೂ ಫಲಾನುಭವಿ ಶ್ರೀಮತಿ ರಕ್ಷಿತಾಳ ತಂದೆ ತಾಯಿ ಉಪಸ್ಥಿತರಿದ್ದರು.

Read More

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ನಡೆಸಿಕೊಟ್ಟರು. ಕುಂದಾಪುರ ರೋಟರಿ ದಕ್ಷಿಣ, ರೋಟರಿ ಜಿಲ್ಲಾ ನಿಧಿಯೊಂದಿಗೆ ಈ ಯೋಜನೆ ರೂಪಿಸಲು ಸಹಕರಿಸಿದುದಕ್ಕೆ ಅಭಿನಂದಿಸಿದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಮತ್ತು ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.

Read More

ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯನ್ನು ಏರ್ಪಡಿಸಲಾಯಿತು ಇಂದು ನಾವು ದಿನನಿತ್ಯದ ಜೀವನದಲ್ಲಿ ಕೆಲವು ಅಂಗಡಿಯಿಂದ ಸಣ್ಣಪುಟ್ಟ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ತರುತ್ತಿದ್ದೇವೆ. ಇಂಥ ಪ್ಲಾಸ್ಟಿಕ್‌ ವಸ್ತುವಿನ ಮರುಬಳಕೆ ಮಾಡಲಾಗದೆ ಅವುಗಳನ್ನು ಎಸೆಯುವುದರಿಂದ ನಮ್ಮ ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ […]

Read More

ಭಾನುವಾರ. ಜೂ 28, 2023 ರಂದು ಕಿನ್ನಿಗೋಳಿಯ ಕೊಯ್ಲಾದಲ್ಲಿ. ‘ಮಿತ್ರರ ಸನ್ನಿಧಿ’ ಎಂಬ ಸಭಾ ಸದನದ ಉದ್ಘಾಟನೆ, ಶ್ರಿ ದುರ್ಗಾ ಪರಮೇಶ್ವರಿ ಮಹಮಾಯಿ ದೇವಸ್ಥಾನದ ಮೊಕ್ತೇಸರ, ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಇವರಿಂದ. ದಿವಂಗತ ಶೇಖರ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಕುಟಂಬಸ್ತರಿಂದ ಹಾಗೂ ಗಣ್ಯ ಅತಿಥಿಗಳಿಂದ. ದಿವಂಗತ ಮಿತ್ರರಾದ ಗಣೇಶ್ ಕುಡ್ವ ಹಾಗೂ ಗಣೇಶ್ ನಾಯಕ್ ರವರ ಭಾವಚಿತ್ರಗಳನ್ನು ‘ಮಿತ್ರರ ಸನ್ನಿಧಿ’ ಗೆ ವರ್ಗಾವಣೆ. ಹೊರಹೋಗುವ ಟ್ರಸ್ಟೀ ಡಾಕ್ಟರ್ ಡೆಂಜಿಲ್ ಪಿಂಟೋ ಅವರಿಗೆ […]

Read More

ಮಂಗಳೂರು, ಉಡುಪಿ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರ ಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆದ್ರ್ರ ಮಳೆಯು ಒಂದೆರಡು ದಿನಗಳಿಂದ ತೀವ್ರಗೊಂಡಿದ್ದು., ಸೋಮವಾರ ಬಿರುಸುಗೊಂಡಿದ್ದ ಮಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾನಿಯನ್ನು ಉಂಟುಮಾಡಿದೆ. ಜೂ.8 ರವರೆಗೆ ಭಾರಿ ಮಳೆಯಾಗಲಿದೆಯೆಂದು ಹವಮಾನ ಇಲಾಖೆ ಎಚ್ಚರಿಸಿದೆ. ಮಂಗಳೂರಿನಲ್ಲಿ ಪಂಪ್ ವೆಲ್ ಭಾಗದಲ್ಲಿ. ಮೇಲ್ ಸೇತುವೆ ಕೆಳಗಡೆ ಅಸಮರ್ಪಕ ಕಾಮಾಗಾರಿಯಿಂದ ನೀರು ನಿಂತು ದೊಡ್ಡ ಕೆರೆಯಂತೆ ಆಗಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ಉಡುಪಿಯ ಶಿರ್ವದ ಬಳಿ ಆವರಣಗೋಡೆ […]

Read More

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಕುಂದಾಪುರ ಆಯುಷ್ಯಧಾಮ ಆಸ್ಪತ್ರೆಯ ವೈದ್ಯರಾದ ಡಾ ಸೋನಿ ಡಿಕೋಸ್ತಾರವರನ್ನು ಕುಂದಾಪುರದ ಹೋಟೆಲ್ ಶ್ರೇಯಸ್ ಇನ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿದ ವೈದ್ಯರು ಮಾತನಾಡಿ ’ತಮ್ಮ ಜವಾಬ್ದಾರಿ ಅರಿತು ಸೇವೆ ಮಾಡಿದಾಗ ಮಾತ್ರ ಸಮಾಜ ಅವರನ್ನು ಗೌರವಿಸುತ್ತದೆ. ಹಾಗೆಯೇ ರೋಗಿಗಳು ಕೂಡ ತಮ್ಮ ವೈದ್ಯರಲ್ಲಿ ವಿಶ್ವಾಸವಿರಿಸಿ ಅವರ ಸಲಹೆಗಳನ್ನು ಪಾಲಿಸಬೇಕು’ ಎಂದು ಹೇಳಿದರು. ಸಮಾರಂಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, […]

Read More

ಕುಂದಾಪುರದ ಆರ್‌.ಎನ್.‌ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಕುಮಾರಿ ಪೂರ್ವಿಕಾ ಇವರು ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ. ಕು.ಪೂರ್ವಿಕಾ ಇವರು ವಿದುಷಿ ಪ್ರವಿತ ಮತ್ತು ಅಶೋಕ್ ಕುಮಾರ್ ರವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಮೆಚ್ಚಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ.‌ಎಮ್. ಸುಕುಮಾರ್ […]

Read More

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ ಬ್ಯಾಚುಲರ್‌ ಆಫ್‌ ಕಾಮರ್ಸ್‌ (ಬಿಕಾಂ) ಮತ್ತು ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌ (ಬಿಸಿಎ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಐಎಂಜೆಐಎಸ್‌ ಸಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಫಲಿತಾಂಶವು ಯುವ ಮನಸ್ಸುಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಬಿಂಬಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಸಾಧನೆಗಳನ್ನು ಗುರುತಿಸಿ ಕೊಳ್ಳಲು ಅವಕಾಶವಾಗಿದೆ. ಶೈಕ್ಷಣಿಕ ಪ್ರಯಾಣದುದ್ದಕ್ಕೂ ವಿದ್ಯಾರ್ಥಿಗಳನ್ನು ಪೋಷಿಸುವ ಮತ್ತು ಬೆಂಬಲಿಸುವಲ್ಲಿ ಉಪನ್ಯಾಸಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಪ್ರಯತ್ನಕ್ಕೆ […]

Read More