ಉಡುಪಿ : ಕಲ್ಯಾಣಪುರದ ವೀರಭದ್ರ ದೇವಸ್ಥಾನದ ಹಿಂಭಾಗದಲ್ಲಿ ಇರುವ ವಾರಾಹಿ ನೀರಾವರಿ ಯೋಜನೆಯ ಪೈಪ್ ಶೇಖರಣಾ ಸ್ಥಳದಲ್ಲಿ ಭಾರೀ ಬೆಂಕಿ ಅನಾಹುತ ಘಟನೆ ಇಂದು ಸಂಜೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಶೇಖರಣಾ ಕೇಂದ್ರದಲ್ಲಿ ದಾಸ್ತಾನು ಇರಿಸಿದ್ದ ಪೈಪ್ ರಾಶಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ಜನರು ಮತ್ತು ಪೊಲೀಸರು ಈ ಕಾರ್ಯದಲ್ಲಿ ಆಗ್ನಿ ಶಾಮಕ ಸಿಬಂದಿಗೆ ಸಹಾಯ ಮಾಡಿದರು.. […]
ಉಡುಪಿ : ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದ್ದು ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಿಂಚು,ಗುಡುಗು ಸಹಿತ ಮಳೆ ಆಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಭಾರೀ ಮಳೆಯಾಗುತಿದ್ದು, ಕರ್ನಾಟಕದ ಕರಾವಳಿಗೆ ಎಲ್ಲೋ ಅಲರ್ಟ್ ನೀಡಲಾಗಿದ್ದು, ಮಂಗಳವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ನವ ಮಂಗಳೂರು […]
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ 16 ಅಕ್ಟೋಬರ್ 2023 ರಂದು ಭವ್ಯವಾದ ಉದ್ಘಾಟನಾ ಮತ್ತು ವಿಧ್ಯುಕ್ತ ಸಮಾರಂಭದಲ್ಲಿ ಬೆಳ್ಳಿ ಮಹೋತ್ಸವದ ಗಂಟೆಗಳನ್ನು ಬಾರಿಸಿತು. ಈ ಮೂಲಕ ವೈದ್ಯಕೀಯ ಕಾಲೇಜಿನ ಪದವಿ ಪೂರ್ವ ಕಾರ್ಯಕ್ರಮ ಆರಂಭವಾಗಿ 25 ವರ್ಷ ಕಳೆದಿರುವುದು ಬೆಳಕಿಗೆ ಬಂದಿದೆ. ಅಪರೂಪದಲ್ಲಿ ಫಾದರ್ ಮುಲ್ಲರ್ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮದ ನಂತರ ಯುಜಿ ಕಾರ್ಯಕ್ರಮವು ಪ್ರಾರಂಭವಾಯಿತು. ಈ ದಿನ ಎಂಬಿಬಿಎಸ್ ವಿದ್ಯಾರ್ಥಿಗಳ ಬೆಳ್ಳಿಹಬ್ಬದ ಬ್ಯಾಚ್ ಮುಲೇರಿಯನ್ ಫೋಲ್ಡ್ಗೆ ದೀಕ್ಷೆ ನೀಡಲಾಯಿತು.ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ.ಫಾ. […]
ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) *ಸಿಟಿ ವಲಯ* ದ *ಬೆಳ್ಳಿ ಹಬ್ಬ* ದ ಸಮಾರಂಭ ಆದಿತ್ಯವಾರ ದಿನಾಂಕ 15.10.2023 ರಂದು ಸಂಜೆ 4:30 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ *ದಿವ್ಯ ಬಲಿ ಪೂಜೆ* ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದಲ್ಲಿ ನಡೆಯಿತು. 6:00 ಗಂಟೆಗೆ *ಸಭಾ ಕಾರ್ಯಕ್ರಮ* ವು ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ಶ್ರೀ […]
ವೃತ್ತಿಜೀವನವನ್ನು ರೂಪಿಸುವಲ್ಲಿ ಮತ್ತು ಅವರಿಗೆ ನೈಜ-ಪ್ರಪಂಚದ ಅನುಭವವನ್ನು ಒದಗಿಸುವಲ್ಲಿ ಇಂಟರ್ನ್ಶಿಪ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದಕ್ಕಾಗಿಯೇ ಎಂಐಟಿಕೆ ವಿದ್ಯಾರ್ಥಿಗಳಿಗೆ ಹಲವು ಪ್ರಸಿದ್ಧ ಕಂಪನಿಗಳೊಂದಿಗೆ ಇಂಟರ್ನ್ ಮಾಡಲು ಅವಕಾಶಗಳನ್ನು ಒದಗಿಸಲಾಗಿದೆ. ಈ ಇಂಟರ್ನ್ಶಿಪ್ಗಳು ಕೇವಲ ಜ್ಞಾನವನ್ನು ಗಳಿಸುವುದಲ್ಲ; ಅವು ವಿದ್ಯಾರ್ಥಿಗಳನ್ನು ಭವಿಷ್ಯದ ಯಶಸ್ಸಿನತ್ತ ಕೊಂಡೊಯ್ಯುವ ಪರಿವರ್ತಕ ವಿಷೇಶ ಅನುಭವಗಳಾಗಿವೆ. ನಮ್ಮ ವಿದ್ಯಾರ್ಥಿಗಳು ಅರ್ನ್ಸ್ಟ್ ಮತ್ತು ಯಂಗ್ ಎಂ.ಸಿ.ಫ್, ಮಣಿಪಾಲ್ ಟೆಕ್ನಾಲಜೀಸ್, ಜನತಾ ಫಿಶ್ ಮೀಲ್, ಮ್ಯಾಕ್ಸ್ ಲೈಫ್ಸ್ಟೈಲ್ ಮತ್ತು ಹರ್ಷ ಮುಂತಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ತರಬೇತಿ ಪಡೆಯುವ ಸವಲತ್ತುಗಳನ್ನು […]
ಉಡುಪಿ: ಉದ್ಯಾವರ ಐಸಿವೈಎಮ್ ಸಕ್ರೀಯ ಸದಸ್ಯ ಮಂಗಳೂರಿನ ಪಿಜಿಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಭವಿಸಿದೆ. ಉದ್ಯಾವರ ನಿವಾಸಿ ರೋಸಿ ಲೂಯಿಸ್ ಅವರ ಪುತ್ರ ರೋಯಲ್ ಲೂವಿಸ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಮಾಹಿತಿಗಳ ಪ್ರಕಾರ ರೋಯಲ್ ಲೂವಿಸ್ ಅವರು ಉದ್ಯಾವರ ಪಿತ್ರೋಡಿ ನಿವಾಸಿಯಾಗಿದ್ದು, ಉಡುಪಿಯ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು ವೈಯಕ್ತಿಕ ಕಾರಣ ಮತ್ತು ಖಿನ್ನತೆಯಿಂದ ಕೆಲಸವನ್ನು ಬಿಟ್ಟು ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಉದ್ಯೋಗದ ನಿಮಿತ್ತ ಅಲ್ಲಿಯೇ ಪಿಜಿಯಲ್ಲಿ ವಾಸವಾಗಿದ್ದ ರೋಯಲ್ ಶನಿವಾರ ವಿಷ […]
ಶಿಮೊಗ್ಗಾಧರ್ಮಕ್ಷೇತ್ರದಧರ್ಮಾಧ್ಯಕ್ಷರಾದಅತೀ ವಂದನೀಯಫ್ರಾನ್ಸಿಸ್ ಸೆರಾವೊರವರು, ಮಂಗಳೂರಿನ ಫಾತಿಮಾಧ್ಯಾನ ಮಂದಿರದಲ್ಲಿಕರ್ನಾಟಕ ಜೆಸ್ವಿಟ್ ಪ್ರಾಂತ್ಯದಆರು ಉಪಯಾಜಕರುಗಳಿಗೆ ಯಾಜಕ ದೀಕ್ಷೆ ನೀಡಿದರು.ಯಾಜಕ ದೀಕ್ಷೆಯನ್ನು ಪಡೆದ ನವಯಾಜಕರು: ಆಶ್ವಿನ್ ಡಿ’ಸಿಲ್ವಾ ಮೂಡಬಿದ್ರೆಯ ಸಂಪಿಗೆ, ವಿಶಾಲ್ಪಿಂಟೋ ಕಿನ್ನಿಗೋಳಿ, ಜೈಸನ್ಲೋಬೊ ಸಿದ್ದಕಟ್ಟೆ, ವಿನೋದ್ಸಲ್ಡಾನ್ಹಾ ವಿರಾಜ್ಪೇಟೆ, ಆರ್ವಿನ್ಪಾಯ್ಸ್ ಮಡಂತ್ಯಾರು ಮತ್ತು ಲೆಸ್ಟನ್ಲೋಬೊ ಮೂಡುಬೆಳ್ಳೆತಮ್ಮ ಪ್ರಭೊಧನೆಯಲ್ಲಿಕ್ರಿಸ್ತನನ್ನುತಮ್ಮಜೀವನದಲ್ಲಿ ಪ್ರತಿಬಿಂಬಿಸಲು ಕರೆನೀಡಿದರು.ಕ್ರಿಸ್ತನುತನ್ನ ಶಿಷ್ಯರ ಪಾದಗಳನ್ನು ತೊಳೆಯುವುದರ ಮೂಲಕ ಸೇವೆಯ ಮನೋಭಾವನೆಯನ್ನು ಬೋಧಿಸಿದರು.ಕ್ರಿಸ್ತಯೇಸು ಕಲಿಸಿದ ಬೋಧನೆಗಳನ್ನು ತಮ್ಮಜೀವನದಲ್ಲಿ ಮೈಗೂಡಿಸಿ ಕ್ರಿಸ್ತನನ್ನು ಪ್ರತಿಭಿಂಬಿಸಬೇಂದುಕರೆನೀಡಿದರು.ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಸ್ವಾಮಿ ಡಯನೀಶಿಯಸ್ ವಾಸ್, ಫಾತಿಮಾಧ್ಯಾನ ಮಂದಿರದ […]
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸೌರವ್ಯೂಹದ ವಿಶೇಷ ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲಬೇಕು ಎಂದು ಇಸ್ರೋ ವಿಜ್ಞಾನಿ ಡಾ. ರಾಮಚಂದ್ರ ಹೇಳಿದರು.ಪಟ್ಟಣದ ಭೈರವೇಶ್ವರ ವಿದ್ಯಾ ನಿಕೇತನದ ಆವರಣದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕøತಿಕ ಹಾಗೂ ನೈತಿಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಯುವ ವಿಜ್ಞಾನಿಗಳ ಆದ್ಯತಾ ಕ್ಷೇತ್ರವಾಗಿದೆ ಎಂದು ಹೇಳಿದರು.ಭಾರತ ಕೈಗೊಂಡ ಚಂದ್ರಯಾನ-3 ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದೆ. ಚಂದ್ರಯಾನದ ಯಶಸ್ಸು ಇಸ್ರೋ ವಿಜ್ಞಾನಿಗಳ ಸಾಂಘಿಕ ಪ್ರಯತ್ನದ […]