ಚಿತ್ರದುರ್ಗ ನಗರ ಹೊರವಲಯದ ಚಳ್ಳಕೆರೆ ಟೋಲ್ ಗೇಟ್ನ ಬಳಿಯಲ್ಲಿ ಇರುವ ಪಾಳು ಮನೆಯಲ್ಲಿ ಶವಗಳು ಸಂಪೂರ್ಣ ಕೊಳೆತು ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜಗನ್ನಾಥರೆಡ್ಡಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು ಮನೆ ಮುಂಭಾಗ ಜಗನ್ನಾಥರೆಡ್ಡಿ ಹೆಸರಿನ ಬೋರ್ಡ್ ನೇತಾಡುತ್ತಿದೆ.ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿಯವರಾದ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರು ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರೋಗ್ಯ ಮತ್ತೊಷ್ಟು ಹದಗೆಟ್ಟಿತ್ತು. ಇದರಿಂದ ಬೇಸತ್ತು ಯಾರ […]
ಬೆಂಗಳೂರು: ಹೊಸ ವರ್ಷದಂದು ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಪೊಲೀಸರು ರೂಲ್ಸ್ ಜಾರಿಗೊಳಿಸುತ್ತಿದ್ದಾರೆ. ಹೊಸ ಕಾನೂನುಗಳಲ್ಲಿ ರಾತ್ರಿ 1 ಗಂಟೆಗೆ ಎಲ್ಲಾ ಪಾರ್ಟಿಗಳು ಬಂದ್ ಆಗಬೇಕು. ಕ್ಲಬ್, ಪಬ್, ಹೊಟೇಲ್ ಸೇರಿದಂತೆ ಎಲ್ಲಾ ಪಾರ್ಟಿಗೂ ರಾತ್ರಿ 1 ಗಂಟೆವರೆಗೆ ಮಾತ್ರ ಅವರಾಶ ನೀಡಿದ್ದಾರೆ. ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಡಿಸೆಂಬರ್ 31ರ ರಾತ್ರಿ ಬೆಂಗಳೂರು ಪೊಲೀಸರು ನಗರದ ವಿವಿಧ ಭಾಗಗಳಲ್ಲಿ 48 ಚೆಕ್ ಪೊಂಯ್ಟ್ ಗಳನ್ನು ನಿರ್ಮಿಸಿ ಎಲ್ಲರ ಮೇಲೂ ಹದ್ದಿನ […]
ಬೆಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ರವಿವಾರ ಮಂಡ್ಯದಲ್ಲಿ ನೀಡಿರುವ ಅತ್ಯಂತ ಅವಹೇಳನಕಾರಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು. ಇಂದು ಆತನ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 354, 294, 509, 506, 1534, 295, 295%, 298ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೋರಾಟಗಾರ್ತಿ ನಜ್ಮಾನರೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ […]
ಬೆಂಗಳೂರು,:ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರೆಂಟಿ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯುವನಿಧಿ ನೋಂದಣಿ ಪ್ರಕ್ರಿಯೆಗೆ ವಿಧ್ಯುಕ್ತ ಚಾಲನೆ ನೀಡಿದರು. ಜ. 12ಕ್ಕೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವಜನರ ಭವಿಷ್ಯಕ್ಕಾಗಿ ಈ ಯುವನಿಧಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಗ್ಯಾರೆಂಟಿಗಳನ್ನು […]
ಚಿತ್ರದುರ್ಗ, ಡಿಸೆಂಬರ್ 25, 2023: ಶಿವಮೊಗ್ಗದ ಧರ್ಮಪ್ರಾಂತದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಡಿಸೆಂಬರ್ 10 ರಂದು ನಕ್ಷತ್ರವನ್ನು ಹಾರಿಸುವ ಮೂಲಕ ಕ್ರಿಸ್ಮಸ್ ಆಚರಣೆಯನ್ನು ಅನಾವರಣಗೊಳಿಸಲಾಯಿತು. ಧರ್ಮಕೇಂದ್ರದ ಧರ್ಮಗುರು ಫ್ರಾಂಕ್ಲಿನ್ ಡಿಸೋಜಾ ಅವರೊಂದಿಗೆ ಪ್ಯಾರಿಷಿಯನ್ನರು ಡಿಸೆಂಬರ್ 11 ರಿಂದ 16 ರವರೆಗೆ ಕರೋಲ್‌ಗಳನ್ನು ಆಯೋಜಿಸಿದರು. ಧರ್ಮಕೇಂದ್ರದ ಯುವಕರು ಚರ್ಚ್ ಮುಂದೆ ಸುಂದರವಾದ ಕೊಟ್ಟಿಗೆಯನ್ನು ಸಿದ್ಧಪಡಿಸಿದರು. ಡಿಸೆಂಬರ್ 24 ರಂದು ರಾತ್ರಿ 10:30 ಕ್ಕೆ […]
ಹುಬ್ಬಳ್ಳಿ: ಅಪರಿಚಿತನೊಬ್ಬ ದೇವರ ಹೆಸರೇಳಿಕೊಂಡು ಕೊಟ್ಟ ತೀರ್ಥ ಹಾಗೂ ಪ್ರಸಾದ ಸೇವಿಸಿದ ಮಹಿಳೆಯೊಬ್ಬರ ಮಾತೇ ನಿಂತುಹೋದ ಘಟನೆ ಕುಂದಗೋಳದ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಭಿಕ್ಷುಕನೊಬ್ಬ ಕೊಟ್ಟ ಭಸ್ಮ ಹಾಗೂ ಹಾಲನ್ನು ಸೇವಿಸಿದ ಗ್ರಾಮದ ಮಹಿಳೆ ಮೀನಾಕ್ಷಿ ಎಂಬುವರಿಗೆ ಮಾತು ನಿಂತುಹೋಗಿದೆ. ಮನೆ ಬಳಿ ಬಂದಿದ್ದ ಭಿಕ್ಷುಕನಿಗೆ ಮಹಿಳೆ 5 ರೂ. ನೀಡಿದ್ದಾರೆ. ಈ ವೇಳೆ ಆತ ಪ್ರಸಾದ ಹಾಗೂ ತೀರ್ಥ ಎಂದು ಭಸ್ಮ ಮತ್ತು ಹಾಲನ್ನು ನೀಡಿದ್ದಾನೆ. ಇದನ್ನು ಸೇವಿಸಿದ ಬಳಿಕ ಮಹಿಳೆಗೆ ಈ ಸಮಸ್ಯೆ ಉಂಟಾಗಿದೆ. […]
ಕಲ್ಯಾಣಪುರ: ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಉಡುಪಿಯ ಕಲ್ಯಾಣಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಅಫ್ಕಾರ್(17) ಎಂದು ತಿಳಿದು ಬಂದಿದೆ. ಅಫ್ಕಾರ್ ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ತಿಯಾಗಿದ್ದು, ಆತ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ. ಅಫ್ಕಾರ್ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಘ್ಕಾರ್,ಡಿ.6 ರಂದು ನಾರಾಯಣ ಹೃದಯಾಲದಲ್ಲಿ ಚಿಕಿತ್ಸೆ ಪಡೆದು ಡಿ.18 ರಂದು ಆಸ್ಪತ್ರೆಯಿಂದ ಮರಳಿದ್ದ. ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರು ಪೇರಾಗಿ, […]
ಶ್ರೀನಿವಾಸಪುರ: ದೇಶದ ಎಲ್ಲಾ ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ಯುವ ಸಮುದಾಯದವರಿಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಅನುಕೂಲಗಳನ್ನು ಅವಕಾಶಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದ ಸಂಸದ ಎಸ್. ಮುನಿಸ್ವಾಮಿ.ತಾಲ್ಲೂಕಿನ ದಳಸನೂರು, ಮಾಸ್ತೇನಹಳ್ಳಿ ಪಂಚಾಯಿತಿಗಳಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಅಂಚೆ ಇಲಾಖೆ ಗ್ರಾಮೀಣ ಬ್ಯಾಂಕ್ ಹಾಗು ವಿವಿಧÀ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿಸ್ವಾಮಿ ಕೇಂದ್ರ ಸರ್ಕಾರ ಗ್ರಾಮೀಣ ಜನತೆ ಅಭಿವೃದ್ದಿ ಹೊಂದಬೇಕು […]
ಕುಂದಾಪುರ: ಕಥೋಲಿಕ್ ಸಭಾ ಉಡುಪಿ ಪ್ರದೇಶ (ರಿ.), ಕಥೋಲಿಕ್ ಸಭಾ ವಲಯ ಸಮಿತಿ – ಶೆವೊಟ್ ಪ್ರತಿಷ್ಠಾನ್ (ರಿ.) ಕುಂದಾಪುರ, ಹೋಲಿ ರೋಜರಿ ಚರ್ಚ್ ಕುಂದಾಪುರ ಘಟಕದ ವತಿಯಿಂದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ದಿನಾಂಕ 17/12/2023 ಭಾನುವಾರ ಸಂಜೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅತೀ|ವಂ|ಫಾ|ಸ್ಟ್ಯಾನಿ ತಾವ್ರೊ ಹಾಗೂ ವೇದಿಕೆಯ ಮೇಲೆ ಉಪಸ್ಥಿತರಿದ್ದ ಸರ್ವ ಗಣ್ಯರು ಹಣತೆಯನ್ನು ಬೆಳಗುವುದರ ಮುಖಾಂತರ ಈ ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ […]