ಕುಂದಾಪುರ, ಆ.30 (30-8-2024) : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಇಂದು ಅಗೋಸ್ತ್ 30 ರಂದು ಆರಂಭವಾಯಿತು. ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿದರು ಮಕ್ಕಳು ಮತ್ತು ದೊಡ್ಡವರು ಭಕ್ತಿ ಗಾಯನದೊಂದಿಗೆ ಹೂ ಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.
ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಒತ್ತುವರಿ (Encroachment) ತೆರವುಗೊಳಿಸದಂತೆ ವಿಧಾನ ಪರಿಷತ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕೇರಳ ಹಾಗೂ ಕಾರವಾರದಲ್ಲಿ ಭೂಮಿ ಕುಸಿತದ ಬಳಿಕ ರಾಜ್ಯ ಸರಕಾರ 2015ರಿಂದ ಈಚೆಗೆ ಆಗಿರುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವ ಕ್ರಮ ಸರಿಯಾಗಿದೆ. ಆದರೆ ಹೊಟ್ಟೆ ಪಾಡಿಗಾಗಿ ಸಾಗುವಳಿ ಮಾಡಿಕೊಂಡಿರುವ ರೈತರ ಭೂಮಿ ತೆರವು ಮಾಡಬಾರದು.ಎಂದು […]
ಗುಲ್ಬರ್ಗ : ಗುಲ್ಬರ್ಗ ಧರ್ಮ ಕ್ಷೇತ್ರದ ಬಸವಕಲ್ಯಾಣ ವಲಯದ ಮುಚ್ಚಳಂಬ ಧರ್ಮ ಕೇಂದ್ರದಲ್ಲಿ 25/8/2024 ರಂದು ವಲಯದ ಎಲ್ಲ ಯುವ ಜನರಿಗೆ ಯುವ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 50 ಯುವ ಜನರು ಭಾಗವಹಿಸಿದ್ದರು, ಏಕತೆ ಮತ್ತು ವೈವಿಧ್ಯತೆಯಲ್ಲಿ ನಮ್ಮ ಸಮಾನತೆಯನ್ನು ಕಾಣುವುದು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ ಮುಚ್ಚಳಾಂಬ ಕೇಂದ್ರದವರು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಅಧ್ಯಕ್ಷ ಸ್ಥಾನವನ್ನು ವಹಿಸಿದಂತ ಫಾದರ್ ಸ್ಟಾನಿ ಮುಚ್ಚಳಂಬ […]
ಹರಿಹರ ಬೆಸಿಲಿಕಾ ಇತಿಹಾಸ ಅನೇಕ ಚರ್ಚುಗಳು ಮತ್ತು ಬೆಸಿಲಿಕಾಗಳು ತಮ್ಮ ಇತಿಹಾಸದಲ್ಲಿ ಕೆಲವು ಹಂತದಲ್ಲಿ ಸಂಭವಿಸಿದ ಅಸಾಧಾರಣ ಘಟನೆಯ ಹಿನ್ನೆಲೆಯಲ್ಲಿ ಸ್ಥಾಪಿಸಲ್ಪಟ್ಟವು. ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾ ಹೆಚ್ಚು ವ್ಯಾಪಕವಾಗಿ ತಿಳಿದಿರುವಂತೆ ಹರಿಹರ ಚರ್ಚ್ ಈ ನಿಯಮಕ್ಕೆ ಹೊರತಾಗಿಲ್ಲ. ಇದರ ಕಥೆಯು 1800 ರ ದಶಕದ ಆರಂಭದಲ್ಲಿ ಅದರ ದಡದಲ್ಲಿ ಸ್ನಾನ ಮಾಡುತ್ತಿದ್ದ ಬ್ರಾಹ್ಮಣನು ಆಕಸ್ಮಿಕವಾಗಿ ಊದಿಕೊಂಡ ತುಂಗಭದ್ರಾ ನದಿಗೆ ಬಿದ್ದಾಗ ಪ್ರಾರಂಭವಾಗುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಅವರು ಅವರ್ ಲೇಡಿ ಆಫ್ ಹೆಲ್ತ್ನ ತೇಲುವ […]
ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸೆಂಟ್ ಜೋಸೆಫ್ ಸಿಬಿಎಸ್ಇ ಶಾಲೆಯಲ್ಲಿ ಭವಿಷ್ಯದ ನವೀಕರಣ ಎಂಬ ಘೋಷವಾಕ್ಯದಡಿಯಲ್ಲಿ ದಿನಾಂಕ. 24.08.2024 ರಂದು ವಿಜ್ಞಾನ ಮತ್ತು. ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮನೋಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆಮುಖ್ಯ ಅತಿಥಿಗಳಾಗಿ ಕುಶಾಗ್ರಮತಿ ಅನಲಾಟಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಅದ ಡಾ. ಅನಂತ್ ಆರ್. ಕೊಪ್ಪರ್ ರವರು ಆಗಮಿಸಿದ್ದರು. ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಮುಖ್ಯ ಅತಿಥಿಗಳು ಹವಾಮಾನ ವೈಪರಿತ್ಯ ಮತ್ತು […]
ಶ್ರೀನಿವಾಸಪುರ : ಶ್ರೀನಿವಾಸಪುರ ಪುರಸಭೆಗೆ ಒಟ್ಟು 23 ಸದಸ್ಯರಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದ ಚುನಾವಣೆಯಲ್ಲಿ ಬಿ.ಆರ್.ಬಾಸ್ಕರ್ ಬಿನ್ ರಾಮಚಂದ್ರಯ್ಯ ರವರು ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಎಂದು ಪುರಸಭೆ ನೂತನ ಅಧ್ಯಕ್ಷರ ಅತ್ತೆ ಚಂದ್ರಕಳಾ ಶ್ರೀನಿವಾಸ್ ಮಾಹಿತಿ ನೀಡಿದರು.ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಬಡವಾಣೆಯ ಸ್ವಗೃಹದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ನೀಲಾವತಿಯವರ ಮತವನ್ನು ಕಾಂಗ್ರೇಸ್ ಪಾರ್ಟಿಯ ಪರವಾಗಿ ಪಡೆಯದೇ ಇರಲು ಕಾಂಗ್ರೇಸ್ ಪಾರ್ಟಿಯ ಎಲ್ಲಾ ಮುಖಂಡರು ಮತ್ತು ಅಭ್ಯರ್ಥಿಯಾಗಿದ್ದ ಬಿ.ಆರ್ ಬಾಸ್ಕರ್ ರವರು ಮೊದಲೇ ನಿರ್ಧರಿಸಿದ್ದರು. ಈ […]
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆಯುವ ಲಕ್ಷಣಗಳು ಗೋಚರಿಸಿವೆ, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಶಿವಮೊಗ್ಗ ಜಿಲ್ಲೆಗೆ ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಉಳಿದಂತೆ ದಕ್ಷಿಣ ಕನ್ನಡ, ಬಾಗಲಕೋಟೆ, ರಾಯಚೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಂಟೆಗೆ […]
ಕಾರ್ಕಳ,ಅ, 24: ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ಅತ್ಯಂತ ಸರಳ ಸಜ್ಜನ ರಾಜಕಾರಣಿ. ಅವರು ಎಂದೂ ಮೋದಿ, ಅಮಿತ್ ಷಾ, rss ನಂತೆ ದ್ವೇಷದ ರಾಜಕಾರಣ ಮಾಡಿದವರು ಅಲ್ಲಾ. ಎಲ್ಲಾ ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನು ಸಮಾನವಾಗಿ ಕಾಣುವುದು ಅವರ ಉದಾತ್ತ ಗುಣ.ಅದಕ್ಕಾಗಿ ಅವರನ್ನು ಜನರು ಅನ್ನರಾಮಯ್ಯ, ಸಿದ್ದಣ್ಣ, ಟಗರು ಮುಂತಾದ ಅನ್ವರ್ಥ ನಾಮಗಳಿಂದ ಗುರುತಿಸುತ್ತಿರುವುದು. ಅವರ ಮುಂದಾಲೋಚನೆಯಿಂದ ಇಂದು ಕರ್ನಾಟಕ ಸದೃಢ, ಸುಭಿಕ್ಷಾ, ಸಾಮ್ರಾದ್ಧ ರಾಜ್ಯವಾಗಿ ಬೆಳೆಯುತ್ತಿದೆ ಮತ್ತು ಬೆಳಗುತ್ತಿದೆ.ಅಂತಹ […]
ಕೋಲಾರ:- ಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ತಡೆಯಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು,ಪೋಷಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.ಜಿಲ್ಲಾಡಳಿತ, ಜಿಪಂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, […]