ಕೋಲಾರ,ಜು.29: ಕೋಲಾರ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಪಾಲಿಕೆ ಸೂಕ್ತ ಕ್ರಮ ಕೈಗೊಂಡು ನಾಗರೀಕರಿಗೆ ನಾಯಿಗಳಿಂದ ಆಗುತ್ತಿರುವ ಉಪಟಳಕ್ಕೆ ಇಡೀಶ್ರೀ ಹಾಡಬೇಕು ಎಂದು ಹಿರಿಯ ನಾಗರೀಕರ ಒಕ್ಕೂಟದ ಸಂಚಾಲಕ ವಿ.ಮುನಿವೆಂಕಟೇಶ್ ಒತ್ತಾಯಿಸಿದ್ದಾರೆ.ನಗರದ ವಿವಿಧ ಬಡಾವಣೆ ಹಾಗೂ ಹೊರವಲಯಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ, ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ವಾಯು ವಿಹಾರಕ್ಕೆ ತೆರಳುವ ಜನರ ಮೇಲೆ ದಾಳಿ ಮಾಡುತ್ತಿವೆ. ಇದುವರೆಗೂ ಹತ್ತಾರು ಜನರು ಬೀದಿನಾಯಿಗಳ ಹಾವಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೋಲಾರ ನಗರದ 35 (ಮೂವತ್ತೈದು) ವಾರ್ಡ್ಗಳಲ್ಲಿಯೂ ಬೀದಿನಾಯಿಗಳ […]
ಶ್ರೀನಿವಾಸಪುರ : ಶ್ರೀನಿವಾಸಪುರ ಪಟ್ಟಣ, ರಾಯಲಪಾಡು ಹಾಗೂ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ಯುವಕರು ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಈಗಾಗಲೇ ಮುಳಬಾಗಿಲು ತಾಲೂಕಿನಲ್ಲಿ ಇಂತಹ ಬೈಕ್‌ಗಳ ಸುಮಾರು ೧೫೦ ಸೈಲೆನ್ಸರ್‌ಗಳನ್ನು ಪೊಲೀಸರು ಕಿತ್ತು ನಗರದ ಡಿವಿಜಿ ವೃತ್ತದಲ್ಲಿ ರೋಡ್ ರೋಲರ್‌ನಿಂದ ತುಳಿಸಿ ನಜ್ಜುಗುಜ್ಜು ಮಾಡಲಾಗಿದೆ ಎಂದು ಡಿವೈಎಸ್‌ಪಿ ಡಿ.ಸಿ.ನಂದಕುಮಾರ್ ಮಾಹಿತಿ ನೀಡಿದರು.ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಏರ್ಪಡಿಸಿದ್ದ ಜನ ಸಂಪರ್ಕಸಭೆಗೆ ಚಾಲನೆ ನೀಡಿ […]
ಶ್ರೀನಿವಾಸಪುರ : ಕೂರಿಗೇಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಜುಲೈ 26 ರಂದು ಚುನಾವಣೆ ನಡೆದಿದ್ದು ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷರಾಗಿ ಯಲ್ಲಮ್ಮ ಜಯರಾಮ್ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಕೂರಿಗೇಪಲ್ಲಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 12 ಸದಸ್ಯರಿದ್ದು ಕಾಂಗ್ರೇಸ್ ಬೆಂಬಲಿತ 11 ಜೆಡಿಎಸ್ ಬೆಂಬಲಿತ ಒಬ್ಬರು ಮಾತ್ರ ಸದಸ್ಯರಾಗಿರುವ ಕಾರಣ ಅಧ್ಯಕ್ಷರ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಚುನಾವಣಾಧಿಕಾರಿ ನಾರಾಯಣಸ್ವಾಮಿ ಅವಿರೋಧವಾಗಿ ಯಲ್ಲಮ್ಮ ಜಯರಾಮ್ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಜಾಕೀರ್ ಹುಸೇನ್ ಮೊಹಲ್ಲದ ನಿವಾಸಿ ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡು ಬಳಲುತ್ತಿರುವ ಅತಾಉಲ್ಲಾಖಾನ್‌ರವರಿಗೆ ಧರ್ಮಸ್ಥಳ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ರವರಿಂದವೀಲ್‌ಚೇರ್ ವಿತರಣೆ ಮಾಡಿದರು.ಈ ಸಂದರ್ಭ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಈಗಾಗಲೇ 88 ಮಂದಿ ವಿಶೇಷ ಚೇತನರಿಗೆ ವೀಲ್‌ಚೇರ್, ವಾಟರ್ ಬೆಡ್, ಯು ಶೇಪ್ ವಾಕರ್, ಕಮೋಡ್‌ಚೇರ್, ಆಕ್ಸಿಲರಿಕ್ರಚ್ಚಸ್ ಇನ್ನಿತರ ಉಪಕರಣಗಳನ್ನು ಸಂಸ್ಥೆಯು ಉಚಿತವಾಗಿ ನೀಡುತ್ತಿದ್ದು ವಿಶೇಷಚೇತನರಿದ್ದಲ್ಲಿ ಇದರ ಸದುಪಯೋಗವನ್ನು […]
ಶ್ರೀನಿವಾಸಪುರ : ಒಂಟಿ ಮನೆ ಗುರಿಯಾಗಿಸಿಕೊಂಡು ದರೋಡೆ ಮಾಡಿರುವ ಖದೀಮರು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದ ರಾಮಕೃಷ್ಣಪ್ಪ ಕುಟುಂಬ, ಮನೆಯಲ್ಲಿ ಇಬ್ಬರು ಮಹಿಳೆಯರು ಇದ್ದನ್ನು ಗಮನಿಸಿ ದರೋಡೆ ಮಾಡಿರುವ ಶಂಕೆ.ಗೌನಿಪಲ್ಲಿ ಪೊಲೀಸ್ ಠಾಣಾವ್ಯಾಪ್ತಿಯ ತಾಡಿಗೋಲ್ ಕ್ರಾಸ್ ಬಳಿ ಪಿಸ್ತೂಲ್, ಲಾಂಗುಗಳು ತೋರಿಸಿ ಮನೆಯಲ್ಲಿ ದರೋಡೆ ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ. ಮನೆಯ ಯಜಮಾನ ರೇಷನ್ ತರಲು ಹೋಗಿದ್ದ ವೇಳೆ ಘಟನೆ, ನಾಲ್ವರು ದರೋಡೆಕೊರ ಬಂದಿರಬಹುದೆದು ಮಾಹಿತಿ ನೀಡಿದರು.1 ತಾಳಿ,3 […]
ಕೋಲಾರ,ಜು.26: ಜನರಿಗೆ ಜಾಗೃತಿ ಮೂಡಿಸಲು, ಸರಿಯಾದ ಮಾಹಿತಿ ತಲುಪಿಸಲು ಮಾಧ್ಯಮ ಬೇಕು. ಸಮಾಜದಲ್ಲಿನ ತಪ್ಪುಗಳನ್ನು ಹೊರತರಲು ಜೊತೆಯಾಗಿ ಕೆಲಸ ಮಾಡೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶುಕ್ರವಾರ ಆಯೋಜಿಸಿದ್ದ ಸಂವಾದ ಮತ್ತು ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆ ಕುರಿತು ಪತ್ರಕರ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಜನತೆಗೆ ತಿಳಿವಳಿಕೆ ಮೂಡಿಸುವುದು. 15 ದಿನಕ್ಕೊಮ್ಮೆ ಆರಕ್ಷಕರ ದಿನ […]
ಕೋಲಾರ : ಎಸ್.ಎಸ್.ಎಲ್.ಸಿ ನಂತರ ಶೀಘ್ರದಲ್ಲಿಯೇ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಏನು ಮಾಡಬೇಕು ಎಂದು ಯೋಚಿಸುವ ಯುವಕ, ಯುವತಿಯರಿಗೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಗಳಿಸಿಕೊಂಡು ಉದ್ಯೋಗಸ್ಥರಾಗಲು ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಗಳಲ್ಲಿ ಭೋದಿಸಲಾಗುತ್ತಿರುವ ಕೋರ್ಸ್‌ಗಳು ದಾರಿದೀಪಗಳಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜುಲೈ 22 ರಂದು ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳ ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಯ ಪ್ರಾಂಶುಪಾಲರು, ಶಾಲಾ ಶಿಕ್ಷಣ ಮತ್ತು […]
ಕೋಲಾರ:- ರಾಜ್ಯ ಸರಕಾರ 2018-19 ನೇ ಸಾಲಿನಲ್ಲಿ ಘೋಷಿಸಿದ್ದ 1 ಲಕ್ಷ ರೂ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆಯಡಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಚಿಂತಾಮಣಿ ಶಾಖೆಯಲ್ಲಿ 11 ಕೋಟಿ ರೂ ಸಾಲ ಮನ್ನಾದ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಿದೆ ಎಂದು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಶೀಲಾ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.ತಳಗವಾರ ಟಿ.ಎಸ್.ಪ್ರತಾಪ್ ಎಂಬುವರು ಜೂನ್.26, 2024 ರಲ್ಲಿ ಡಿಸಿಸಿ ಬ್ಯಾಂಕಿನ ಚಿಂತಾಮಣಿ ಶಾಖೆಯಲ್ಲಿ 11 ಕೋಟಿ ಅವ್ಯವಹಾರ ಆಗಿದೆ ಎಂದು […]
ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಡಿ.ಕೆ.ಉಮೇಶ್ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರಿಗಳು ಅರ್ಜಿ ಸ್ವೀಕರಿಸಿದ 30 ದಿನಗಳ ಒಳಗೆ ಸಮಸ್ಯೆ ಬಹೆಹರಿಸಬೇಕು. ಸಾಧ್ಯವಿಲ್ಲವಾದರೆ ಅದಕ್ಕೆ ಪೂರಕವಾಗಿ ಹಿಂಬರಹ ನೀಡಬೇಕು ಎಂದು ಹೇಳಿದರು.ಅಧಿಕಾರಿಗಳು ತಮ್ಮ ಕಚೇರಿಗೆ ಬರುವ […]