
ಶ್ರೀನಿವಾಸಪುರ : ಪುರಸಭಾ ಅಧ್ಯಕ್ಷರ ಕಛೇರಿಯಲ್ಲಿಂದು ಪುರಸಭಾ ಅಧ್ಯಕ್ಷರಾದ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರ ಕುಂದು ಕೊರತೆಗಳ ಸಭೆ ನಡೆಸಿದರು. ಪ್ರತಿ ದಿನ ಬೆಳಿಗ್ಗೆ ಎಲ್ಲಾ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರು ಸಮವಸ್ತ್ರ-ಸುರಕ್ಷಿತ ಸಲಕರಣೆಗಳನ್ನು ಧರಸಿ ಕರ್ತವ್ಯಕ್ಕೆ ಹಾಜರಾಗಿ ಶ್ರೀನಿವಾಸಪುರ ನಗರದ ಸುಚ್ಚಿತ್ವವನ್ನು ಕಾಪಾಡಲು ತಿಳಿಸಿದರು. ಖಾಯಂ ಪೌರಕಾರ್ಮಿಕರಿಗೆ ಪ್ರತಿ ಮಾಹೆಯಾನ ವೇತನ ಪಾವತಿಯಾಗುವಂತೆ ಹೊರಗುತ್ತಿಗೆ ಕಾರ್ಮಿಕರಿಗೂ ಸಹ ಪ್ರತಿ ಮಾಹೆಯ 5ನೇ ತಾರೀಖಿನ ಒಳಗಾಗಿ ವೇತನ ಪಾವತಿ ಮಾಡುವಂತೆ ನೌಕರರು […]

ಶ್ರೀನಿವಾಸಪುರ ಪುರಸಭಾ ಸಭಾಂಗಣದಲ್ಲಿಂದು ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ “ಏಳ ಬಳಕೆ ಪ್ಲಾಸ್ಟಿಕ್ ನಿಷೇಧ” ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸಪುರ : ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನಕ್ಕೆ ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ಆರ್. ಭಾಸ್ಕರ್ ರವರು ಚಾಲನೆ ನೀಡಿ ಮಾತನಾಡಿ ಕಡಿಮೆ ಉಪಯುಕ್ತತೆ ಮತ್ತು ಪರಿಸರ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿರುವ “ಏಳ ಬಳಕೆಯ ಪ್ಲಾಸ್ಟಿಕ್” ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಸಲುವಾಗಿ ಸರ್ಕಾರದ […]

ಕೋಲಾರ,ಆ.28: ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈಗಿರುವ ಕಾನೂನುಗಳ ಬಗ್ಗೆ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ ಎಸ್ ಹೊಸಮನಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಹಕಾರ ಒಕ್ಕೂಟದಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ […]

ಕೋಲಾರ,ಆ.28: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ತಾಲೂಕಿನ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ಹಾಗೂ ಎಸ್.ಜೈದೀಪ್ ಅವರನ್ನು ರಾಜ್ಯಪಾಲರ ಅಜ್ಞನುಸಾರ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಕೆ ಮಂಜುನಾಥ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ,ತಾಲೂಕಿನ ಸೀಸಂದ್ರ ಗ್ರಾಮದ ಎಂ.ಗೋಪಾಲಗೌಡ ಅವರು ಕಾಂಗ್ರೆಸ್ ವಿಧ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದಾರೆ ವಿಧ್ಯಾರ್ಥಿ ದೆಸೆಯಿಂದಲೂ ಬೆಂಗಳೂರು ವಿವಿಯ […]

ಕೋಲಾರ:- ನಗರದ 12 ಕೇಂದ್ರಗಳಲ್ಲಿ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 4422 ಅಭ್ಯರ್ಥಿಗಳ ಪೈಕಿ ಬೆಳಗಿನ ಅವಧಿ ಪರೀಕ್ಷೆಗೆ 1630 ಮಂದಿ ಹಾಗೂ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ 1634 ಮಂದಿ ಗೈರಾಗಿದ್ದು, ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರೀಕ್ಷೆಗೆ ಗೈರಾದವರ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕೃಷ್ಣಮೂರ್ತಿ, […]

ಕೋಲಾರ:- ಭಾರತ ಸೇವಾದಳ ಸ್ಥಾಪನೆಯ ಮೂಲಕ ದೇಶಪ್ರೇಮ ಸೇವಾ ಮನೋಭಾವವನ್ನು ಸಮಾಜದಲ್ಲಿ ಭಿತ್ತಿದ ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರ ಆದರ್ಶವನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ದೇಶದ ಆಸ್ತಿಯಾಗಿ ಉನ್ನತಿ ಸಾಧಿಸಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು.ನಗರದ ಹಳೇ ಮಾಧ್ಯಮಿಕ ಶಾಲೆ, ಉರ್ದು ಹಿರಿಯಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಸಮ್ಮುಖದಲ್ಲಿ ನಾ.ಸು.ಹರ್ಡೀಕರ್ ಅವರ 49ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಕರ್ನಾಟಕದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡರೂ ಎದೆಗುಂದದೆ ಸೇವಾ […]

ಶ್ರೀನಿವಾಸಪುರ : ರೈತರು ಬೆಳೆದ ಅನ್ನ ತಿಂದು ರೈತರಿಗೆ ದ್ರೋಹ ಮಾಡುವ ಅಧಿಕಾರಿಗಳು, ಸಚಿವರು ಕಂಡಲ್ಲಿ ರಾಜ್ಯದಾದ್ಯಂತ ತರಕಾರಿಗಳಿಂದ ಹೊಡೆಯುವ.ಚಳುವಳಿ ಮಾಡುವ ಮೂಲಕ ರೈತರ ಆಕ್ರೋಶ ವ್ಯಕ್ತಪಡಿಸಬೇಕೆಂದು ರಾಜ್ಯ ಮುಖಂಡ ಬಂಗಾವದಿ ನಾಗರಾಜ ಸಲಹೆ ನೀಡಿದರು.ತಾಲೂಕಿನ ಬಳಗೆರೆ ರಂಗೇಗೌಡರ ಟಮೋಟೋ ತೋಟಕ್ಕೆ ಗುರುವಾರ ರೈತ ಸಂಘ ವತಿಯಿಂದ ತೋಟಕ್ಕೆ ಬೇಟಿ ನೀಡಿ ಪಸಲು ಪರಿಶೀಲಿಸಿ ಮಾತನಾಡಿದರು.ರೈತರಾದ ಬಳಗೆರೆ ರಂಗೇಗೌಡ ಮಾತನಾಡಿ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಸ್ಥಳೀಯ ವ್ಯಕ್ತಿಯಾದ ಅರಿಕೆರೆ ರಾಮನಾಥ್ ರವರ ಮಾತು ಕೇಳಿ […]

ಶ್ರೀನಿವಾಸಪುರ : ಪಟ್ಟಣದ ಸರೋಜನಿ ರಸ್ತೆಯಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ನಡೆದ ರಾಘವೇಂದ್ರ ಸ್ವಾಮಿಗಳ ಆರಾದನಾ ಮಹೋತ್ಸವದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.ತಹಶೀಲ್ದಾರ್ ಜಿ.ಎನ್.ಸುದಿಂದ್ರ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ , ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್ , ಕಂದಾಯ ನಿರೀಕ್ಷಕ ಎನ್.ಶಂಕರ್, ಎಫ್‍ಡಿಎ ನಾಗೇಶ್, ಸುರೇಶ್, ಸಿಬ್ಬಂದಿ ಶಾರದ, ಭಾಗ್ಯಮ್ಮ, ಶ್ರೀನಾಥ್ ದೇವರ ದರ್ಶನ ಪಡೆದರು.

ಶ್ರೀನಿವಾಸಪುರ : ತಾಲೂಕಿನ ಯೋಜನಾ ಕಚೇರಿಯ ವ್ಯಾಪ್ತಿಯಲ್ಲಿ 2023 – 24 ನೇ ಸಾಲಿನ 669 ನೇ ನಮ್ಮೂರು ನಮ್ಮ ಕೆರೆ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಮೋರಪಲ್ಲಿಯ ಲಕ್ಕಮ್ಮನಕೆರೆ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಊರಿನ ಗಣ್ಯರಾದ ಶಂಕರ್ ರೆಡ್ಡಿ ಅವರು ಉದ್ಘಾಟಿಸಿದರು.. ಕಾರ್ಯಕ್ರಮದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಯವರಾದ ಪ್ರಕಾಶ್ ಕುಮಾರ್ ಮಾತನಾಡುತ್ತಾ ರಾಜ್ಯದಲ್ಲಿ 67% […]