ಅಭಯ – ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಮಹಿಳಾ ವೇದಿಕೆಯು ಜೂನ್ 6, 2024 ರಂದು ವಿಶ್ವ ಪರಿಸರ ದಿನವನ್ನು ಆಚರಿಸಿತು.ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪ್ರವೀಣ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ತಾಲೂಕು ಅವರನ್ನು ಆಹ್ವಾನಿಸಲಾಯಿತು. ಶ್ರೀ ಪ್ರವೀಣ್ ಅವರು ಸಾವಯವ ಕೃಷಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು ಮತ್ತು ಮಣ್ಣಿನ ಫಲವತ್ತತೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಸೂಚಿಸಿದರು. ಆಧುನೀಕರಣ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಪ್ಲಾಸ್ಟಿಕ್‌ಗಳ ಅತಿರೇಕದ ಬಳಕೆಯು ಮಣ್ಣಿನ ಗುಣಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗಿದೆ. ವರ್ಮಿಕಾಂಪೋಸ್ಟ್ […]

Read More

ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಜೂ.6 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಟ್ಟು ಸಂರಕ್ಷಿಸಬೇಕು ಎಂದರು. ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು. ಪರಿಸರಕ್ಕೆ ಸಂಬಂಧಪಟ್ಟ ಕವನಗಳನ್ನು ವಾಚಿಸಿದರು. ಶಿಕ್ಷಕಿ ಸೆಲೀನ್ ಇವರು ಸಹಕರಿಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪುರ, 06/06/2024 ಕುಂದಾಪುರದ ಹೃದಯ ಭಾಗದಲ್ಲಿರುವ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಸ್ಥಳಿಯ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಪೂಜ್ಯನೀಯರೆ|ಫಾ| ಪಾವ್ಲ್ ರೇಗೋರವರ 60ನೇ ಜನ್ಮ ದಿನವನ್ನು ವಿದ್ಯಾ ಸಂಸ್ಥೆಗಳ ಅಂಗಳದಲ್ಲಿ ವಿಜೃಂಬಣೆಯಿಂದ ಆಚರಿಸಲಾಯಿತು.ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಅಭ್ಯಾಗತರನ್ನು ಸವಿ ನುಡಿಯಿಂದ ಸ್ವಾಗತಿಸಲಾಯಿತು. ಹುಟ್ಟುಹಬ್ಬಕ್ಕೆ ಸುಶ್ರಾವ್ಯ ಹಾಡಿನೊಂದಿಗೆ ಧ್ವನಿಗೂಡಿಸಿ ಹೋಲಿ ರೋಜರಿ ವಿದ್ಯಾರ್ಥಿಗಳು ಶುಭಕೋರಿದರು. ಪೂಜ್ಯನೀಯ ಸಂಚಾಲಕರು ಕೇಕನ್ನು ಕತ್ತರಿಸಿ ಎಲ್ಲರಿಗೂ ಶುಭವಾಗಲಿ, ನಿಮಗೆಲ್ಲ ಉತ್ತಮಆರೋಗ್ಯ, ನೆಮ್ಮದಿಯನ್ನು ನೀಡಲಿ ಎಂದು ಶುಭ ನುಡಿಗಳನ್ನಾಡಿದರು.ವೇದಿಕೆಯಲ್ಲಿ ವಿದ್ಯಾಸಂಸ್ಥೆಗಳ […]

Read More

ಕುಂದಾಪುರ : ಜೂನ್ 05 ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು.ಅಧ್ಯಕ್ಷತೆ ವಹಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭುಗಳು ಕಾರ್ಯಕ್ರಮದ ಕುರಿತು ಹಿತೈನುಡಿಗಳನ್ನಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ರೇಖಾ ವಿ ಬನ್ನಾಡಿಯವರು ಸಾಧಕ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿವೃಂದವನ್ನು ಕುರಿತು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಹಾಗೂ ರಾಜೇಂದ್ರ ತೋಳಾರ್ ಇವರು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ನೀಡಿದರು.ವಿದ್ಯಾರ್ಥಿ ಕ್ಷೇಮಪಾಲನ […]

Read More

ಭಾರತೀಯ ಜೇಸಿಐನ ವಲಯ ಹದಿನೈದರ ನೇತೃತ್ವದಲ್ಲಿ ವಿಟ್ಲದಲ್ಲ್ಲಿ ಜರಗಿದ ವಲಯದ ಮಧ್ಯಂತರ ಸಮ್ಮೇಳನ “ತುಂತುರು – ಇದು ಜೇಸಿಗಳ ಸಿಂಚನಾ” ಕಾರ್ಯಕ್ರಮದಲ್ಲಿ ಸರಿತಾ ದಿನೇಶ್ ಸುವರ್ಣ ಸಾರಥ್ಯದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ವಲಯದ ಪ್ರತಿಷ್ಠಿತ ಪ್ರಶಸ್ತಿಗಳಾದ ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್, ಅತ್ಯುತ್ತಮ ಘಟಕ ರನ್ನರ್, ಡೈಮಂಡ್ ಘಟಕ, ಪ್ರಶಸ್ತಿ ಸೇರಿದಂತೆ ಗೋ ಗ್ರೀನ್, ಪ್ರೇರಣಾ ತರಬೇತಿ, ಯುವ ರತ್ನ, ರಜತ ಸಿಂಚನ, ಕ್ಲೀನ್ ಪ್ಲೇಟ್ ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷರಾದ ಗಿರೀಶ್ ಎಸ್. ಪಿ. ಅವರು ಬೆಳ್ಮಣ್ಣು ಜೇಸಿಐಗೆ […]

Read More

ಕುಂದಾಪುರ,ಜೂ.5: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳ ವಿತರಣೆಯನ್ನು ಜೂ. 5 ರಂದು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂ|ಭಗಿನಿ ಸುಪ್ರಿಯಾ ವಹಿಸಿಕೊಂಡಿದ್ದರು.ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ”ಶಿಕ್ಷಕರು ಮಕ್ಕಳಿಗೆ ಜಾನ್ಞವನ್ನು ಹಂಚುತ್ತಾರೆ, ನಾವು ಶಾಲೆಯಲ್ಲಿ ಕಲಿತದ್ದನ್ನು ನಾವು ಸಮಾಜದ ಒಳಿತಿಗಾಗಿ ವಿನೀಯೊಗಿಸಬೇಕು, ಇಲ್ಲಿ ಚೆನ್ನಾಗಿ ಜಾನ್ಞವನ್ನು ಪಡೆದುಕೊಂಡು ನೀವು ಜಾನ್ಞವಂತರಾಗಬೇಕು, ಹಾಗೆ […]

Read More

ಕುಂದಾಪುರ,ಜೂ.5: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೂ. 5 ರಂದು ಶಾಲಾ ಬ್ಯಾಗ್ ಮತ್ತು ಕೊಡೆ ವಿತರಣೆಯನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಜಂಟಿ ಕಾರ್ಯದರ್ಶಿಗಳಾದ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ವಹಿಸಿಕೊಂಡಿದ್ದು, ಅವರು ಮತ್ತು ಅತಿಥಿಗಳು ಗೀಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನವನ್ನು ಆಚರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..ಎಮ್.ಸಿ.ಸಿ.ಬ್ಯಾಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು […]

Read More
1 70 71 72 73 74 382