ಶಂಕರನಾರಾಯಣ : ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಐ ಟಿ ಕ್ವಿಜ್ – 2024 ರ ಸ್ಪರ್ಧೆಯಲ್ಲಿ ಮದರ್ ತೆರೇಸಾಸ್ ಪಿ ಯು ಕಾಲೇಜು ಶಂಕರನಾರಾಯಣ ಇಲ್ಲಿನ ವಿದ್ಯಾರ್ಥಿಗಳಾದ ಮಾಸ್ಟರ್ ಅಮೋಧ್ ಹಾಗೂ ಮಾಸ್ಟರ್ ಸುಜನ್ ಶೆಟ್ಟಿ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ವಿಜೇತರಾದ ವಿದ್ಯಾರ್ಥಿಗಳಿಗೆ ಆಡಳಿತಮಂಡಳಿ,ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿರುತ್ತಾರೆ
ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿಯ ಅತ್ಯುತ್ತಮ ಸಾಧನೆಶಂಕರನಾರಾಯಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕುಂದಾಪುರ ಮತ್ತು ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ ಯಡಾಡಿ ಮತ್ಯಾಡಿ ಇವರ ಸಹಭಾಗಿತ್ವದಲ್ಲಿ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ -2024 ರ ಸ್ಪರ್ಧೆಯ ವೈಯಕ್ತಿಕ ವಿಭಾಗ ದಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿ ನಂದಶ್ರೀ ತೃತೀಯ ಸ್ಥಾನ ಪಡೆದಿರುತ್ತಾರೆ ಇವರಿಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು […]
ಕುಂದಾಪುರ, ಅ. 26; ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ‘ರೋಜೇರಿಯನ್’ ಕಲೆ, ಕರಕುಶಲ ವಸ್ತುಗಳು ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು 26/10/2024 ರಂದು ಶಾಲಾ ಜಂಟಿ ಕಾರ್ಯದರ್ಶಿ ಹಾಗು ಹೋಲಿ ರೋಜರಿ ಚರ್ಇನ ಧರ್ಮಗುರುಗಳಾದ ಅ। ವಂ। ಪೌಲ್ ರೇಗೋರವರ ಉದ್ಘಾಟಿಸಿ “ಮಕ್ಕಳು ಚೆನ್ನಾಗಿ ವಸ್ತು ಪ್ರದರ್ಶನವನ್ನು ಮಾಡಿದ್ದಾರೆ, ಹೊಸ ಹೊಸ ಆಲೋಚನೆಗಳಿಂದ ಕೂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಹಿರಿಯ ಅಸೋಶಿಯೆಟ್ ಪಿ.ಡಬ್ಲ್ಯು.ಸಿ. ಶ್ರೀನಿಧಿ […]
ಅಕ್ಟೋಬರ್ 25 ರಂದು, ಸೇಂಟ್ ಆಗ್ನೆಸ್ ಪಿಯು ಕಾಲೇಜು ಅಜ್ಜಿಯರ ದಿನವನ್ನು ಅನುಗ್ರಹದಿಂದ ಮತ್ತು ಹೃತ್ಪೂರ್ವಕ ಮೆಚ್ಚುಗೆಯೊಂದಿಗೆ ಆಚರಿಸಿತು, ಅಜ್ಜಿಯರು ಕುಟುಂಬಗಳಿಗೆ ತರುವ ಬುದ್ಧಿವಂತಿಕೆ ಮತ್ತು ಪ್ರೀತಿಯನ್ನು ಗೌರವಿಸಿದರು. ಕಾರ್ಯಕ್ರಮವು 25 ಮಂದಿ ಅಜ್ಜಿಯರಿಗೆ ಗುಲಾಬಿಯನ್ನು ನೀಡುವ ಮೂಲಕ ಆತ್ಮೀಯ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರ ಆಕರ್ಷಕ ಮೌಲ್ಯಾಧಾರಿತ ನೃತ್ಯ ನಾಟಕವು ಅಜ್ಜಿ ಮತ್ತು ಅವರ ಮಕ್ಕಳ ನಡುವಿನ ಆಳವಾದ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. 1960 ಮತ್ತು 70 ರ ದಶಕದ ರೆಟ್ರೊ […]
ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಈ ಇಬ್ಬರು, ಬೀಜಾಡಿ ಬೀಚ್ ಸಮೀಪದ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆನ್ನಲಾಗಿದೆ. ಬೆಳಿಗ್ಗೆ ಇಬ್ಬರೂ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ. ಕೂಡಲೇ ಸ್ಥಳೀಯರು ಓರ್ವನನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆ ಮೃತಪಟ್ಟರು. ಆದರೆ ನಾ ಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ […]
ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಬೆಳ್ಮಣ್ಣು ಜೇಸಿಐನ 44ನೇ ವರ್ಷದ ಜೇಸಿ ಸಪ್ತಾಹ “ಅಮೃತೋತ್ಸವ” ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕೃಷಿ, ಸ್ವಚ್ಛತೆ ಮುಂತಾದ ಹಲವಾರು ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ಜನಪಯೋಗಿ ಕಾರ್ಯಕ್ರಮ ನಡೆಸುತ್ತ ಬರುತ್ತಿರುವ ಸಂಸ್ಥೆಯ ಸಾಧನೆಯನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ […]
ಉಡುಪಿ, ಅಕ್ಟೋಬರ್ 24 ಮತ್ತು 25: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬ್ರಹ್ಮಾವರ ವಲಯದ, ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2024-25ನ್ನು ಮಿಲಾಗ್ರಿಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಶ್ರೇಷ್ಠಗುರು ಫರ್ಡಿನೆಂಡ್ ಗೊನ್ಸಾಲ್ವಿಸ್‍ರವರು ಪಥಸಂಚಲನದ ತಂಡಗಳಿಂದ ಗೌರವವನ್ನು ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಆಭಿನ್ ದೇವಾಡಿಗರವರು ಕ್ರೀಡಾಜ್ಯೋತಿ ಬೆಳಗಿ, […]
ಕುಂದಾಪುರ; ಹದಿನೇಳು ವರ್ಷದಿಂದ ಎಂಡೋಸಲ್ಫಾನ್ ಕಾರಣದಿಂದ ಹಾಸಿಗೆ ಹಿಡಿದ ಸೇನಾಪುರದ ಸಂತ್ರಸ್ತೆಗೆ ಕುಂದಾಪುರದ ಇಂಡಿಯನ್ ರೆಡ್ ಕ್ರಾಸನ ವತಿಯಿಂದ ದಿನನಿತ್ಯ ಅಗತ್ಯವಿರುವ ಅಂಡರ್ ಪ್ಯಾಡ್ ಗಳನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ ಗಡದ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ರೆಡ್ ಕ್ರಾಸನ ಸಭಾಪತಿ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ ಹಾಗೂ ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ ಉಪಸ್ಥಿತರಿದ್ದರು.