Service Commission and Education Commission of Infant Mary Parish, Bajjodi jointly organized a Felicitation Programme for Meritorious as well as passed out S.S.L.C and P.U.C Students of the 2022 – ’23 batch on 20th August, Sunday. The programme began at 7.45 am with a prayer song by the Ayog members. Mr. Grippen D’Souza welcomed the […]
ಮಂಗಳೂರು : ಸಂತ ಆಗ್ನೇಸ್ ಕಾಲೇಜಿನಲ್ಲಿ ಅಗಸ್ಟ್ 18 ರಂದು ‘ಕೊಂಕಣಿ ಮಾನ್ಯತಾ ದಿನ’ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಕ್ಣೊಂ ಕೊಂಕಣಿ ಪತ್ರದ ಸಂಪಾದಕರಾದ ವಂ. ಫಾ. ರೂಪೇಶ್ ಮಾಡ್ತಾ, ಕೊಂಕಣಿ ಭಾಷೆಯನ್ನು ಪ್ರೀತಿಸಿ ಮನೆ ಮನಗಳಲ್ಲಿ ಮಾತನಾಡಲು ಕರೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅ ತಿಥಿಯಾಗಿ ಆಗಮಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೋಯ್ ಕ್ಯಾಸ್ತಲಿನೋ ಕೊಂಕಣಿ ಭಾಷೆ ವಿವಿಧ ಹಂತಗಳಲ್ಲಿ ನಡೆದು ಬಂದ ರೀತಿಯನ್ನು ವಿವರಿಸಿ, ಮಾತೃ ಭಾಷೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವಂತೆ ಕರೆ […]
ಕುಂದಾಪುರ: ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ 2022-23ನೇ ಸಾಲಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಠ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ.19 ರಂದು ಮಂಗಳೂರಿನಲ್ಲಿ ಜಿಲ್ಲಾ ಬ್ಯಾಂಕಿನ ಉತ್ಕೃಷ್ಠ ಸಹಕಾರಿ ಸೌಧದಲ್ಲಿ ಜರಗಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪಾರ್ಷಿಕ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಮ್. ಎನ್. ರಾಜೇಂದ್ರ ಕುಮಾರ್ ಪ್ರಶಸ್ತಿಯನ್ನುಪ್ರದಾನ ಮಾಡಿದರು. […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ಗಣೇಶ ನಾವುಡ ಇವರ ಚಿಕಿತ್ಸೆ ಗಾಗಿ ರೂಪಾಯಿ ಹದಿನೈದು ಸಾವಿರ ವನ್ನು ನೀಡಲಾಯಿತು. ಕೇಟರಿಂಗ ಉದ್ಯೋಗದಲ್ಲಿರುವ ಇವರಿಗೆ ಕಾಲೇಜು ವ್ಯಾಸಂಗ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರು ರೋಗಿಯ ಪುತ್ರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ […]
ಕುಂದಾಪುರ,20: ಸೈಂಟ್ ಮೇರಿಸ್ ಮತ್ತು ಹೋಲಿ ರೋಜರಿ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರ ಜನ್ಮ ದಿನದ 75 ವರ್ಷಗಳ ಅಮೃತ ಮಹೋತ್ಸವವನ್ನು ಆ.19 ರಂದು ಸಂಭ್ರಮದಿಂದ ಸೈಂಟ್ ಮೇರಿಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಪುಜ್ಯನೀಯ ಸಂಚಾಲಕರು ಕೇಕ್ಅನ್ನು ಕತ್ತರಿಸಿ ಸಿಹಿಯನ್ನು ಹಂಚಿಕೊಂಡರು. ಪೂಜ್ಯರ ಬಗ್ಗೆ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಅಶ್ವಿನ್ ಅರಾನ್ನಾರವರು “ಅವರು 75ರ ಬದಲಾಗಿ ಅವರಿಗೆ […]
ಶ್ರೀನಿವಾಸಪುರ: ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಂ.ವಿ.ಶ್ರೀನಾಥ್, ಉಪಾಧ್ಯಕ್ಷೆಯಾಗಿ ರಾಮಕ್ಕ ಅವಿರೋಧ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ಕೃಷ್ಣಮ್ಮ ತಮ್ಮ ನಾಮಪತ್ರ ಹಿಂಪಡೆದ ಪರಿಣಾಮವಾಗಿ ಎಂ.ವಿ.ಶ್ರೀನಾಥ್ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದರಾದರೂ, ಕೃಷ್ಣಮ್ಮ ಅವರ ನಾಮಪತ್ರ ತಿರಸ್ಕøತವಾಯಿತು. ನಜಿಮುನ್ನೀಸಾ ಅವರು ತಮ್ಮ ನಾಮಪತ್ರ ಹಿಂಪಡೆದರು. ಹಾಗಾಗಿ ರಾಮಕ್ಕ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.ಚುನಾವಣಾಧಿಕಾರಿ ಗಣೇಶ್, ಪಿಡಿಒ ಮಂಜುನಾಥಸ್ವಾಮಿ ಚುನಾವಣಾ ಕಾರ್ಯ ನಿರ್ವಹಿಸಿದರು. ಎ.ನಾಗೇಶ್ ಬಾಬು, […]
ಕುಂದಾಪುರ : ಮಾರ್ಕೆಟ್ ಬಾಯ್ಸ್ ಕುಂದಾಪುರ ಇವರ ಆಶ್ರಯದಲ್ಲಿ 77ನೇ ಸ್ವಾತಂತ್ರ ದಿನಾಚರಣೆಯನ್ನು ಫಿಶ್ ಮಾರ್ಕೆಟ್ ರಸ್ತೆ , ಕುಂದಾಪುರದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿ ಆಗಿ ಆಗಮಿಸಿದ ಸಿಟಿ ಜೆಸಿಐ ಕುಂದಾಪುರ ಇದರ ಅಧ್ಯಕ್ಷೆಯಾದ ಡಾಕ್ಟರ್ ಸೋನಿ ಡಿಕೋಸ್ತ ಧ್ವಜಾರೋಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಡಿದ ವೀರ ಯೋಧರನ್ನು ಸ್ಮರಿಸಲಾಯಿತು. ಸ್ವತಂತ್ರ ಭಾರತದಲ್ಲಿ ಯುವಕರ ಜವಾಬ್ದಾರಿ ಕುರಿತು ಮಾತನಾಡಿದರು. ಸ್ವತಂತ್ರ ದಿನಾಚರಣೆಯನ್ನು ಅಚ್ಚು ಕಟ್ಟಾಗಿ ಆಚರಣೆ ಮಾಡುತ್ತಿರುವ ಮಾರ್ಕೆಟ್ ಬಾಯ್ಸ್ ನ […]
ಸ್ಮಾರ್ಟ್ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಪ್ರವರ್ತಕ ಆವಿಷ್ಕಾರಗಳು ವಿಷಯದ ಕುರಿತು ವಿಶೇಷ ಭಾಷಣವನ್ನು MITK ಮೂಡ್ಲಕಟ್ಟೆಯಲ್ಲಿ ಸಂಸ್ಥೆಯ ಇನ್ನೋವೇಶನ್ ಮತ್ತು ಡೆವಲಪ್ಮೆಂಟ್ ಸೆಲ್ ವತಿಯಿಂದ ಏರ್ಪಡಿಸಲಾಗಿತ್ತು. ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದ ಡಾ.ರಮೇಶ ಶಿವಸಾಮಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಡಾ. ರಮೇಶ್ ಶಿವಸಾಮಿ ಅವರು ತಮ್ಮ ಭಾಷಣದಲ್ಲಿ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಸೇರಿದಂತೆ ದೇಶಗಳು ಮತ್ತು ವಿಶ್ವಸಂಸ್ಥೆಯ ದಶಕಗಳ ಕೆಲಸದ ಮೇಲೆ ನಿರ್ಮಿಸಲಾದ 17 ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಕುರಿತು ಮಾತನಾಡಿದರು. ಅವರು […]
ಬಸ್ರೂರು, ಆ.18: ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಸ್ರೂರು ಬಿ.ಎಂ. ಶಾಲೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು, ಇದೇ ಸಂದರ್ಭದಲ್ಲಿ ಹಾಲಿ ಮತ್ತು ನಿವೃತ್ತ ಸೈನಿಕರಿಗೆ ಸಮ್ಮಾನ ಹಾಗೂ ಅಶಕ್ತರಿಗೆ, ರೋಗಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯತು. ಜಿಲ್ಲಾ ಯುವಜನ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ, ರೇಷ್ಮೆ ಇಲಾಖೆಯ ಜಿ. ರಾಜೇಂದ್ರ ಶೆಟ್ಟಿಗಾರ್, ಉದ್ಯಮಿ ಹನೀಫ್ ಶೇಖ್ ಬಸ್ರೂರು, ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ ಬಿ. ಸತ್ಯನಾರಯಣ, ಉಪಾಧ್ಯಕ್ಷ ಶಾವೆಲ್ ಹಮೀದ್, […]