ಮಂಗಳೂರು, ಕರ್ನಾಟಕ – ಜನವರಿ 2, 2025: ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸಂದೇಶ ಪ್ರತಿಷ್ಠಾನ, ತನ್ನ ಬಜ್ಜೋಡಿ, ಮಂಗಳೂರಿನ ಆವರಣದಲ್ಲಿ “ಕೃಪೆಯ ಕುರುಬ: ಡಾ. ಹೆನ್ರಿ ಡಿ’ಸೋಜ ಅವರ 75 ವರ್ಷಗಳ ಆಶೀರ್ವಾದಗಳ ಮಹೋತ್ಸವ” ಶೀರ್ಷಿಕೆಯ ಅಡಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿತು. ಸಂಜೆ 6 ಗಂಟೆಗೆ ಆರಂಭವಾದ ಈ ಕಾರ್ಯಕ್ರಮವು ಡಾ. ಹೆನ್ರಿ ಡಿ’ಸೋಜ ಅವರ ಜೀವನ ಮತ್ತು ಅವರ ಐತಿಹಾಸಿಕ ಸೇವೆಯನ್ನು ಗೌರವಿಸುವ ಮಹತ್ವದ ಸಂದರ್ಭವಾಗಿ ಗುರುತಿಸಲ್ಪಟ್ಟಿತು. ಕಾರ್ಯಕ್ರಮದಲ್ಲಿ ಹಲವು ಪ್ರಮುಖ ವ್ಯಕ್ತಿಗಳಿಂದ […]
ಕುಂದಾಪುರ : ದಿನಾಂಕ 2/01/2025 ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆ, ಬ್ರಮ್ಮಾವರದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ವಿಜೇತರ ಯಾದಿ :ಪ್ರೀತಮ್ (9ನೇ ತರಗತಿ)ಆದಿತ್ಯ ಬಿ (ದ್ವಿತೀಯ ಪಿ ಯು ಸಿ )ರಸಪ್ರಶ್ನೆ : ಪ್ರಥಮಶ್ರೀಶಾಂತ್ ಎಸ್ (ಪ್ರಥಮ ಪಿಯುಸಿ )ಕನ್ನಡ ಕವನವಾಚನ:ತೃತೀಯಪ್ರತೀಕ್ಷಾ (ಪ್ರಥಮ ಪಿಯುಸಿ)ಚರ್ಚಾ ಸ್ಪರ್ಧೆ ದ್ವಿತೀಯ ಈ ಎಲ್ಲಾ ಪ್ರತಿಭೆಗಳಿಗೆ ಆಡಳಿತಮಂಡಳಿ, ಪ್ರಾಂಶುಪಾಲರು, […]
ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 3 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಮೋಜು ಮತ್ತು ಆಂಗ್ಲಭಾಷಾ ಕಲಿಕೆ ಕಾರ್ಯಾಗಾರ ಆಯೋಜಿಸಲಾಗಿತ್ತುವಿದ್ಯಾರ್ಥಿ ಮತ್ತು ಶಿಕ್ಷಕರಸಾಂಕೇತಿಕ ನೃತ್ಯದ ಮೂಲಕ ಕಾರ್ಯಾಗಾರ ಆರಂಭಗೊಂಡಿತುಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಕುಮಾರಿ ಅಲಿಟಾ ಡೇಸ್ ಆಂಗ್ಲಭಾಷಾ ಉಪನ್ಯಾಸಕರು ಸೈoಟ್ ಅಲೋಸಿಯಸ್ ಡಿಮಡ್ ಟು ಬಿ ಯೂನಿವರ್ಸಿಟಿ ಮಂಗಳೂರುಇವರು 3ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 3 ಹಂತಗಳಲ್ಲಿ ವಿವಿಧ ಮೋಜಿನ ಗುಂಪು ಚಟುವಟಿಕೆಗಳೊಂದಿಗೆ ಆಂಗ್ಲಭಾಷಾ […]
ಶ್ರೀನಿವಾಸಪುರ; ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಜನ ಜಾತ್ರೆ ಅದ್ದೂರಿಯಾಗಿ ನಡೆಯಿತು.ಪಟ್ಟಣದ ಹೊರವಲಯದಲ್ಲಿರುವ ಕೇತಗಾನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ನೆಲಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು, ಬೆಳಗ್ಗೆ 5 ಗಂಟೆಯಿಂದಲೇ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಟ್ಟಣದ ನಾಗರೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ತಂಡೋಪ […]
ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳುಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ವಿಲ್ಫ್ರೇಡ್ ಗ್ರೆಗೋರಿ ಮೊರಾಸ್, ಝಾನ್ಸಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆರ್ಪಿಸುವರು. ಅದೇ ದಿ ಬೆಳಿಗ್ಗೆ 10.30 ಘಂಟೆಗೆ ಅತೀ ವಂದನೀಯ ಡಾ. ಅಲೋಶಿಯಸ್ ಪಾಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ನೆರವೇರಿಸುವರು. ಇದು […]
ಸಂತ ಲೋರೆನ್ಸ್ ಬಸಿಲಿಕ, ಅತ್ತೂರು – ಕಾರ್ಕಳ ಇದರ ವಾರ್ಷಿಕ 2025 ರ ಮಹತ್ಸೋವವು ಜನವರಿ 26 ರಂದು ಆರಂಭವಾಗುತ್ತದೆ. ಇದು ಜನವರಿ 30 ರ ವರೆಗೆ ನಡೆಯುತ್ತದೆ. ಈ ವಿವರವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಐಸಾಜ್ ಲೋಬೊ, ಸಂತ ಲೋರೆನ್ಸ್ ಬಸಿಲಿಕ, ಅತ್ತೂರು ಇದರ ರೆಕ್ಟರ್ ಅ।ವಂ।ಆಲ್ಬನ್ ಡಿಸೋಜಾ ಮತ್ತು ಧರ್ಮಕೇಂದ್ರದ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರದ ಪ್ರತಿಗಳನ್ನು ಲಗತ್ತಿಸಲಾಗಿದೆ.
ಕುಂದಾಪುರ(ಜ.1):ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 4ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕೆ ಪೂಜಾರಿ, ನಿಹೊನ್ಸಿಕಿ ಕರಾಟೆ ಆಂಡ್ ಸ್ಪೋರ್ಟ್ಸ ಫೆಡರೇಶನ್ ನ ವತಿಯಿಂದ ಕರಾಟೆಯಲ್ಲಿ ಕೊಡಮಾಡುವ 2024 ನೇ ಸಾಲಿನ ʼದಿ ಬೆಸ್ಟ್ ಸ್ಟೂಡೆಂಟ್ʼ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು
ಶ್ರೀನಿವಾಸಪುರ : ಬೆಂಗಳೂರಿನ ಸ್ಪೂರ್ತಿ ಕಲಾ ಟ್ರಸ್ಟ್ ವತಿಯಿಂದ ಉದಯಭಾನು ಕಲಾ ಸಂಘದ ಸಭಾಂಗಣದಲ್ಲಿ ಭಾನುವಾರ ಸ್ಪೂರ್ತಿ ಕುಮಾರ ಸೇವ ರತ್ನ ಪ್ರಶಸ್ತಿಯನ್ನ ಪಡೆದ ಶ್ರೀನಿವಾಸಪುರ ತಾಲೂಕಿನ ಆರ್.ಶಿವಕುಮಾರ್ ಗೌಡ , ಕೆ.ಎಲ್.ಕಾರ್ತಿಕ್ ಪಡೆದಿದ್ದು ತಾಲೂಕಿನ ಹೆಗ್ಗಳಿಕೆ ಕಾರಣರಾಗಿದ್ದಾರೆ. ಈ ಸಮಯದಲ್ಲಿ ಸಂಘದ ಸಂಸ್ಥಾಕ ಅಧ್ಯಕ್ಷೆ ಡಿ.ವನಜ, ಮುಖಂಡರಾದ ಎಂ.ಸಿ.ರಾಮಲಿಂಗಯ್ಯ, ಆರ್.ಬಾಲಾಜಿಸಿಂಗ್ ಇದ್ದರು.
ಕುಂದಾಪುರ (ಡಿ.31): ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ(ರಿ.) ಉಪ್ಪುಂದ ಇದರ ವತಿಯಿಂದ ಬ್ರಹ್ಮಾವರದಲ್ಲಿ ಡಿ.22 ರಂದು ನಡೆದ ಶ್ರೀ ಸಿದ್ಧಿವಿನಾಯಕ ಟ್ರೋಫಿ 2024 ರ ಚೆಸ್ ಪಂದ್ಯಾಟದಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ಎರಡನೇ ತರಗತಿ ವಿದ್ಯಾರ್ಥಿ ಶ್ರೀನಿತ್ ಶೇಟ್ 7ರ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿ 6 ರೌಂಡ್ಸ್ ಗಳಲ್ಲಿ5 ಪಾಯಿಂಟ್ಸ್ ಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗು ಎಲ್ಲಾ […]