ಶಿವಮೊಗ್ಗ ಧರ್ಮಪ್ರಾಂತ್ಯದ ವರ್ಚಸ್ವಿ ನವೀಕರಣ ಆರಾಧನೆ ಆರನೇ ಮಧ್ಯಸ್ಥಿಕೆ ರಾತ್ರಿ ಜಾಗರಣೆಯನ್ನು ಭದ್ರಾವತಿಯ ಹೊಸ ಪಟ್ಟಣದಲ್ಲಿ ನಡೆಯಿತು ಶಿವಮೊಗ್ಗ, ಸೆಪ್ಟೆಂಬರ್ 24, 2023: ಲೀಜನ್ ಆಫ್ ಮೇರಿ ಮತ್ತು ಸೇಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿಯ ಜೊತೆಗೂಡಿ ಡಯೋಸಿಸನ್ ಸರ್ವಿಸ್ ಆಫ್ ಕಮ್ಯುನಿಯನ್ (ಡಿಎಸ್‌ಸಿ) ಭದ್ರಾವತಿಯ ನ್ಯೂ ಟೌನ್‌ನ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನಲ್ಲಿ ಸೆಪ್ಟೆಂಬರ್ 23 ರಂದು ರಾತ್ರಿ 9 ರಿಂದ 24 ರ ಬೆಳಿಗ್ಗೆ 5 ರವರೆಗೆ ಮಧ್ಯಸ್ಥಿಕೆ ರಾತ್ರಿ ಜಾಗರಣೆ ನಡೆಸಿತು. ವರ್ಚಸ್ವಿ ನವೀಕರಣದ […]
ಬೀಜಾಡಿ: ಸರಕಾರಿ ಶಾಲೆಗಳು ಉಳಿಸಿ ಬೆಳೆಸಬೇಕಾದರೇ ದಾನಿಗಳ ಸಹಕಾರ ಅಗತ್ಯವಾಗಿದೆ. ಹಳೆ ವಿದ್ಯಾರ್ಥಿಗಳು ಶಾಲೆಯ ಆಸ್ತಿ. ಶಾಲೆಯ ಸರ್ವತೋಮಖ ಅಭಿವೃದ್ದಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಗತ್ಯವಾಗಿ ಬೇಕು ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.ಅವರು ಭಾನುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ನಡೆದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ‘ರೂವಾರಿ-2023’ ಭಾವ-ನೆನಪುಗಳ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಾಲಾ ಹಳೆ ವಿದ್ಯಾರ್ಥಿ,ಅರೆವಳಿಕೆತಜ್ಞ […]
ಕಾರವಾರ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯದಲ್ಲಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಶವವನ್ನು ಎಸೆದು ಹೋಗಿದ್ದರು. ಬಂಧಿತ ಆರೋಪಿಗಳನ್ನು ಹಾನಗಲ್‍ನ ಗೆಜ್ಜೆಹಳ್ಳಿಯ ಕಿರಣ್ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ (19) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳು ಅದೇ […]
ಕುಂದಾಪುರ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ಉದ್ಯಮಿಯನ್ನು ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂಪರ ಸಂಘಟನೆಯ ಚೈತ್ರಾ ಕುಂದಾಪುರ ಕೋಟಿ ಕೋಟಿ ಆಸ್ತಿಯ ಒಡತಿ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.ಚೈತ್ರಾ ಕುಂದಾಪುರ ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.ಚೈತ್ರಾ ಕುಂದಾಪುರ ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ. ಎಲ್ಲಾ ಸೇರಿಸಿ ಸುಮಾರು […]
ಮರಳು ಶಿಲ್ಪ:- ಪ್ರಥಮ ಪೂಜಿತ, ಜ್ಞಾನ ಮತ್ತು ಬುದ್ದಿಯ ಅಧಿಪತಿ, ಗಣಗಳ ಒಡೆಯನಾದ ಗಣೇಶನ ಹಬ್ಬದ ಆಚರಣೆ ದೇಶಾದ್ಯಂತ ತಯಾರಿಯಲ್ಲಿರುವ ಈ ಸುಸಂದರ್ಭದಲ್ಲಿ ಕಲಾಕೃತಿಯ ಮೂಲಕ 15 ವಿದ್ಯಾರ್ಥಿಯರ ಕೈಯಲ್ಲಿ ಮೂಡಲಿರುವ ಗಣೇಶ ಮೂಡಿ ಬಂದನು. *ಕಲಾಕೃತಿಯ ವಿಶೇಷತೆ*ಮೋದಕ ಪ್ರಿಯ ಸೊಂಡಿಲ ಬಾಲ ಗಣಪ ಪ್ರಕೃತಿ ಮಡಿಲಲ್ಲಿ -ಬುದ್ದಿಯ ಪ್ರತೀಕವಾಗಿ ಮೂಷಿಕ ವಾಹನವನ್ನು ವಿಶ್ವ ಪರ್ಯಾಟನೆಯ ಸಂಕೇತವಾಗಿ ಶಿವಲಿಂಗದೊಂದಿಗೆ ಬಣ್ಣದ ಮೂಲಕ ಕಂಗೊಳಿಸುವ “ವರ್ಣ ವಿನಾಯಕ ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾವಿದ ಮತ್ತು ತ್ರಿವರ್ಣ ಕಲಾಕೇಂದ್ರದ ಹರೀಶ್ […]
ಕುಂದಾಪುರ: ಬೆಂಗಳೂರು ಮೈಸೂರು ರೈಲು ಮಂಗಳೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ರೈಲನ್ನು ಈಗ ಮುರುಡೇಶ್ವರದ ವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 16ರಿಂದ ಮುರುಡೇಶ್ವರದ ವರೆಗೆ ರೈಲು ಸಂಚಾರ ಆರಂಭಗೊಳ್ಳಲಿದೆ. ಬೆಂಗಳೂರಿನಿಂದ ಸೆಪ್ಟೆಂಬರ್ 16ರ ರಾತ್ರಿ ಹೊರಡಲಿದ್ದು ಮೈಸೂರು, ಸಪ್ಟಂಬರ್ 17ರಂದು ಬೆಳಿಗ್ಗೆ ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರ ತಲುಪಲಿದೆ.ಈ ಹಿಂದೆ ಈ ರೈಲು ಮಂಗಳೂರು ವರೆಗೆ ಮಾತ್ರ ಸಂಚರಿಸುತ್ತಿದ್ದು, ಈಗ ಸಂಚಾರವನ್ನು ವಿಸ್ತರಿಸಲಾಗಿದೆ ಇದರಿಂದ ಕುಂದಾಪುರ ಭಾಗದವರಿಗೆ ಹೆಚ್ಚು ಅನುಕೂಲವಾಗಲಿದೆಯೆಂದು ಅಭಿಪ್ರಾಯ ಪಡಲಾಗಿದೆ ಈ ವಿಸ್ತರಣೆಗಾಗಿ ಕರಾವಳಿ ಅದರಲ್ಲೂ ಕುಂದಾಪುರ […]
ಶ್ರೀನಿವಾಸಪುರ: ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಬೇಕು ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ರೈತರು ಮತ್ತಿತರ ಫಲಾನುಭವಿಗಳಿಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಬ್ಯಾಂಕ್ ಸಾಲ ನೀಡುವುದಿಲ್ಲ ಎಂದು ಹೇಳಿದರು.ಮುಖ್ಯವಾಗಿ ರೈತ ಸಮುದಾಯದ ಹಿತ ಕಾಯಲು ಬ್ಯಾಂಕ್ ಸ್ಥಾಪಿಸಲಾಗಿದೆ. ಆದರೆ […]
ಬೆಂಗಳೂರು: ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ, ವಿಚಾರಣ ಸಮಯದಲ್ಲಿ ಕುಸಿದು ಬಿದ್ದುದರಿಂದ ಇವಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದು, 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ. ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ […]
ಉಡುಪಿ : ಕೇಂದ್ರ ರಾಜ್ಯದಲ್ಲಿ ನಿಸ್ವಾರ್ಥ ರಾಜಕಾರಣ ಮಾಡಿರುವ ಕೇಂದ್ರದ ಮಾಜಿ ಸಚಿವ ದಿವಂಗತ ಆಸ್ಕರ್ ಫೆರ್ನಾOಡಿಸ್ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರು. ಯಾವುದೇ ಪ್ರಚಾರ ಬಯಸದ ಆಸ್ಕರ್ ಫೆರ್ನಾOಡಿಸ್ ನಿಜವಾಗಿಯೂ ಸಮಾಜಸೇವೆಗೆ ಮತ್ತೊಂದು ಹೆಸರು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂಎ ಗಪೂರ್ ತಿಳಿಸಿದರು. ಅವರು ದಿವಂಗತ ಆಸ್ಕರ್ ಫೆರ್ನಾOಡಿಸ್ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ದಿವಂಗತ ಆಸ್ಕರ್ ಫೆರ್ನಾOಡಿಸ್ ರವರ ದ್ವಿತೀಯ ಪುಣ್ಯತಿಥಿಯ ಸ್ಮರಣಾರ್ಥ […]