
ಲಕ್ನೊ: ಹಾಡಹಗಲೇ ಸಾರ್ವಜನಿಕ ರಸ್ತೆಯೊಂದರಲ್ಲಿ ಮೊಸಳೆಯೊಂದು ಓಡಾಡಿದ ವಿಡಿಯೋ ವೈರಲ್ ಆಗಿದೆ. ಭಾರೀ ಗಾತ್ರದ ಮೊಸಳೆ ಕಂಡು ಸ್ಥಳೀಯರು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.ಜನರು ಓಡಾಟ ನಡೆಸುವ ಬೀದಿಯಲ್ಲೇ ಮೊಸಳೆ ಓಡಾಡಿದೆ. ಮೊಸಳೆ ಕಂಡ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಬರುವವರೆಗೆ ಮೊಸಳೆ ಎಲ್ಲೆಂದರಲ್ಲಿ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಕೆಲವು ಗಂಟೆಗಳ ನಂತರ ಬಂದ ಅರಣ್ಯಾಧಿಕಾಧಿಕಾರಿಗಳು ಮೊಸಳೆಯನ್ನು ಹಿಡಿದು ಸುರಕ್ಷಿತ ತಾಣಕ್ಕೆ ಬಿಟ್ಟಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿ, 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆಂಬ ಕಾರಣಕ್ಕೆ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ಅಂಕಿತ್ ಮಯಾಂಕ್, “ವಿನೇಶ್ ಫೋಗಟ್ ಅವರನ್ನು ಹರಿಯಾಣದಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಪರಿಗಣಿಸುತ್ತಿದೆ” ಎಂದು ಹೇಳಿದ್ದಾರೆ.“ಪ್ರಸ್ತುತ ರಾಜ್ಯಸಭೆಯಲ್ಲಿ ದೀಪೇಂದರ್ ಸಿಂಗ್ ಹೂಡಾ ಅವರ ಅಧಿಕಾರವಧಿ ಮುಗಿದಿದ್ದು, ಅವರಿಂದ ತೆರವಾಗುವ […]

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸದಾಶಿವಗಡದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಕಾಳಿ ಸೇತುವೆ ಕುಸಿದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ, ಬೇರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಭೂಕುಸಿತ ಮತ್ತು ಮಳೆ ಹಾನಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ, ಗೋವಾ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಕಾಳಿ ನದಿಗೆ ಅಡ್ಡಲಾಗಿರುವ 40 ವರ್ಷಗಳ ಹಳೆಯ ಸೇತುವೆ ಕುಸಿದಿದ್ದು, ಟ್ರಕ್ ಚಾಲಕ ಗಾಯಗೊಂಡಿದ್ದಾರೆ.ಬುಧವಾರ ನಸುಕಿನ 1 ಗಂಟೆ ಸುಮಾರಿಗೆ ಟ್ರಕ್ ಸೇತುವೆ ಮೇಲೆ […]

ಉಡುಪಿ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದುರಂತದಲ್ಲಿ ನಿರಾಶ್ರಿತರಾದವರ ನೆರವಿಗೆ ಧರ್ಮಪ್ರಾಂತ್ಯ ಎಲ್ಲಾ ರೀತಿಯ ಸಹಕಾರ ನೀಡಲು ಬಯಸಿದೆ ಎಂದು ಹೇಳಿದ್ದಾರೆ.ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಿಂದ ಮಾಹಿತಿಗಳ ಪ್ರಕಾರ ಈಗಾಗಲೇ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದು ಅವರುಗಳ ಹುಡುಕಾಟ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕತ್ಸೆ ಪಡೆಯುತ್ತಿದ್ದು, […]

ವಯನಾಡ್: ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಿಂದ ವಯನಾಡ್‌ನಲ್ಲಿ 84 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಸಿಲುಕಿಕೊಂಡಿದ್ದಾರೆ. ರಕ್ಷಣಾ ತಂಡಗಳು ಆತನನ್ನು ತಲುಪಲು ಹೆಣಗಾಡುತ್ತಿರುವಾಗ, ಗಂಟೆಗಟ್ಟಲೆ ಕೆಸರುಗದ್ದೆಯಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಯೊಬ್ಬರು ಸಹಾಯಕ್ಕಾಗಿ ಕೂಗುತ್ತಿರುವಾಗ ವಿಶೇಷವಾಗಿ ಸಂಕಟದ ದೃಶ್ಯವು ಹೊರಹೊಮ್ಮಿದೆ. ಭೀಕರ ದೃಶ್ಯಗಳು ಹೊರಹೊಮ್ಮುತ್ತಿರುವುದರಿಂದ ಈ ವಿಪತ್ತು ವ್ಯಾಪಕ ವಿನಾಶವನ್ನು ಉಂಟುಮಾಡಿದೆ: ಮನೆಗಳು ನಾಶವಾಗಿವೆ, ವಾಹನಗಳು ಪ್ರವಾಹದಿಂದ ಕೊಚ್ಚಿಹೋಗಿವೆ ಮತ್ತು ಬೇರುಸಹಿತ ಮರಗಳಿಂದ ಮುರಿದ ಕೊಂಬೆಗಳು ಹಾನಿಯನ್ನು ಮತ್ತಷ್ಟು ಹೆಚ್ಚಿಸಿವೆ. ಊದಿಕೊಂಡ ಜಲಮೂಲಗಳು ಮಾರ್ಗವನ್ನು ಬದಲಾಯಿಸಿವೆ, ಜನವಸತಿ […]

ಕೇರಳ:ಜುಲಾಯ್ 30, ಇಂದು ಬೆಳಿಗ್ಗೆ ನಡೆದ ಭೀಕರ ವಯನಾಡಿನಲ್ಲಿ ಅತೀ ಮಳೆಯಿಂದಾಗಿ, ಗುಡ್ಡ ಕುಸಿತ ಅರಿಣಾವಾಗಿ ಇಷ್ಟರ ವರೆಗೆ ಸುಮಾರು 74 ಮೃತದೇಹಗಳು ಗುಡ್ಡ ಕುಸಿತದ ನಂತರದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಗಂಟೆ-ಗಂಟೆಗೂ ಮರಣದ ಸಂಖ್ಯೆಗಳು ಹೆಚ್ಚುತ್ತಾಗಲಿದ್ದು, ಇನ್ನೂ ಹೆಚ್ಚು ಸಾವನ್ನಪ್ಪಿರುವ ಶಂಕೆ ಇದೆ. ಚಾಲಿಯಾರ್ ನದಿಯಲ್ಲಿ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಮಂದಿ ಘಟನೆ ಸಿಲುಕಿ ಗಾಯಗೊಂಡಿದ್ದಾರೆ. ಇದೀಗ ಸಮೀಪದ ಮದ್ರಸ ಮತ್ತುಮಸೀದಿಗಳನ್ನು ಆಸ್ಪತ್ರೆಗಳಾಗಿ ಬದಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿಯಂತೆ ಇನ್ನೂ ಹಲವು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು […]

ದೆಹಲಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2021ರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಾಮ್ ಪೋರ್ಟಲ್ ಪ್ರಾರಂಭಿಸಿದ್ದು, ವಲಸೆ ಕಾರ್ಮಿಕರು ಮತ್ತು ಗೃಹ ನಿರ್ಮಾಣ ಕಾರ್ಮಿಕರು. ಸೇರಿದಂತೆ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಅದರಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇ-ಶ್ರಮ್ ಕಾರ್ಡ್ ಅಥವಾ ಶ್ರಮ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಈ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇ-ಶ್ರಮ್ ಕಾರ್ಡ್ ಮೂಲಕ ವಿವಿಧ. ಪ್ರಯೋಜನಗಳನ್ನು ಪಡೆಯಬಹುದು. ಏನಿದು ಇ-ಶ್ರಮ್ ಕಾರ್ಡ್ […]

ದೆಹಲಿ: ದೇಶಾದ್ಯಂತ ಏಕರೂಪದ ಚಿನ್ನದ ಬೆಲೆಯನ್ನು ಬಯಸುವ ಚಿನ್ನಕ್ಕೆ ಒನ್ ನೇಷನ್ ಒನ್ ರೇಟ್ (ಒಎನ್‌ಒಲರ್) ನೀತಿಯನ್ನು ಅಳವಡಿಸಿಕೊಳ್ಳಲು ದೇಶಾದ್ಯಂತದ ಪ್ರಮುಖ ಆಭರಣ ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ವಿವಿಧ ಮಾಧ್ಯಮ ವರದಿಗಳ ಪ್ರಕಾರ, ವಿವಿಧ ರಾಜ್ಯಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿನ ಅಂತರವನ್ನು ತಗ್ಗಿಸುವ ಗುರಿಯನ್ನು ಒಎನ್‌ಒಆರ್ ಹೊಂದಿದೆ.ರತ್ನ ಮತ್ತು ಅಭರಣ ಮಂಡಳಿ (ಜಿಜೆಸಿ) ಬೆಂಬಲದೊಂದಿಗೆ ಒಎನ್‌ಒಆರ್ ಉಪಕ್ರಮವು ಸೆಪ್ಟೆಂಬರ್ನಲ್ಲಿ ಸಭೆ ಸೇರಲಿದ್ದು, ನಂತರ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ವರದಿಗಳು ತಿಳಿಸಿವೆ.ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅಮೂಲ್ಯ […]

ಬೆಂಗಳೂರು, ಜುಲೈ 10, 2024 (CCBI): ಬೆಂಗಳೂರು ಆರ್ಚ್‌ಡಯಾಸಿಸ್‌ನ ಅತಿ ವಂದನೀಯ ಅಲ್ಫೋನ್ಸ್ ಮಥಿಯಾಸ್ (96 ) ನಿವ್ರತ್ತ ಆರ್ಚ್‌ಬಿಷಪ್ ಅವರು ಜುಲೈ 10, 2024 ರಂದು ಬುಧವಾರ ಸಂಜೆ 5.20 ಕ್ಕೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು. ಕಳೆದ ಕೆಲವು ತಿಂಗಳುಗಳಿಂದ ಅವರು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆಯ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಅವರು ಚಿಕ್ಕಮಗಳೂರಿನ ಬಿಷಪ್ (1964-1986) ಮತ್ತು ಬೆಂಗಳೂರಿನ ಆರ್ಚ್ ಬಿಷಪ್ (1986-1998). ಅವರು 1989 ಮತ್ತು 1993 ರಲ್ಲಿ […]