ಶ್ರೀನಿವಾಸಪುರ:ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ವಾಲ್ಮೀಕಿ ಸಮುದಾಯದ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಸರಾಮಾಯಣ ಮಹಾಕಾವ್ಯ ರಚಿಸುವುದರ ಮೂಲಕ ಮಾನವ ಕುಲಕ್ಕೆ ಆದರ್ಶ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರನ್ನು ಯಾವುದೇ ಒಂದು […]
ಕೋಲಾರ ಆ,27, ನಗರಾದ್ಯಂತ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಮಕ್ಕಳು ಹಾಗೂ ಹಿರಿಯರ ಜೀವವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ನಗರಸಭೆ ಆಯುಕ್ತರಾದ ಶಿವಾನಂದ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಕೋಲಾರ ನಗರದಲ್ಲಿ ಕತ್ತಲಾದರೆ ನಾಯಿಗಳೇ ಹುಲಿಗಳಂತೆ ಮಕ್ಕಳು ಹಾಗೂ ವೃದ್ದರ ಮೇಲೆ ದಾಳಿ ಮಾಡುವ ಭಯದ ವಾತಾವರಣ ನಿರ್ಮಾಣವಾಗಿದ್ದರೂ ನಾಯಿಗಳ ಆಕ್ರಮಗಣಕ್ಕೆ ಕಡಿವಾಣ ಹಾಕದ ನಗರಸಭೆ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಷ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರದಲ್ಲಿ ಕಳೆದ […]
ಶ್ರೀನಿವಾಸಪುರ:ಖರೀದಿಸುವ ವಸ್ತುವಿನ ಮೇಲೆ ಗುಣಮಟ್ಟ ಕುರಿತು ಪ್ರಮಾಣೀಕರಿಸಿದ ಮುದ್ರೆ ಇರುವುದನ್ನು ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಬೇಕು ಎಂದು ಬೆಂಗಳೂರಿನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ ಅಧಿಕಾರಿ ಹೇಳಿದರು.ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದಲ್ಲಿ ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಏರ್ಪಡಿಸಲಾಗಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿನಿಯರಿಂದ ಗುರುವಾರ ಏರ್ಪಡಿಸಿದ್ದ ವಸ್ತುಗಳ ಗುಣಮಟ್ಟ ಕುರಿತ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದ ನಾಗರಿಕರಲ್ಲಿ ವಸ್ತು ಖರೀದಿಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಬೇಕು. […]
ಶ್ರೀನಿವಾಸಪುರ : ಆದಿ ಕವಿಯಂದೇ ಖ್ಯಾತರಾದ ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯದ ಮೂಲಕ ಮನಕುಲಕ್ಕೆ ಬದುಕಿನ ಸಂದೇಶವನ್ನು ಸಾರಿದ ಸರ್ವತೋಮುಖ ಚಿಂತಕ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಬುಧವಾರ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜೋತ್ಸವ ಆಚರಣೆಗಾಗಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು.ತಾಲೂಕಿನ ಎಲ್ಲಾ ಪಂಚಾಯಿತಿ ಕೇಂದ್ರಗಳಿಂದ ವಾಲ್ಮೀಕಿ ಸ್ತಬ್ದ ಚಿತ್ರವನ್ನು ಹೊತ್ತು ತಾಲೂಕಿನ ಕೇಂದ್ರಕ್ಕೆ ಬರವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿ, ಮುಂದಿನ ತಿಂಗಳು ನವಂಬರ್ ೧ ರಂದು ಕನ್ನಡ […]
ಶ್ರೀನಿವಾಸಪುರ: ದಸರಾ ನಾಡಿನ ಸಾಂಸ್ಕøತಿಕ ಪರಂಪರೆಯ ಸಂಕೇತ. ದಸರಾ ಸಂಭ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವುದು ಒಂದು ವಿಶೇಷ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ಪಟ್ಟಣದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ವಿಜಯದಶಮಿ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಿಲ್ಲಿಗೆ ಬಾಣ ಹೂಡಿ ಬಿಟ್ಟ ಬಳಿಕ ಮಾತನಾಡಿದ ಅವರು, ಮಾನವ ಕುಲ ಒಂದೇ ಎಂದು ಸಾರುವುದು ನಿಜವಾದ ಧರ್ಮ. ಸಕಲ ಪ್ರಾಣಿಗಳಲ್ಲಿ ದಯೆ ತೋರುವುದು ಮಾನವ ಧರ್ಮ ಎಂದು ಹೇಳಿದರು.ದುಷ್ಟ ಶಕ್ತಿ […]
ಶ್ರೀನಿವಾಸಪುರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಹಿರಿದು. ಅಂಥ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿದ್ದರು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಸಮಾರಂಭದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಪ್ರೇಮ ಹಾಗೂ ಶೌರ್ಯ ಮಹಿಳಾ ಸಮುದಯಕ್ಕೆ ಮಾದರಿಯಾಗಿದೆ. ಹಾಗಾಗಿಯೇ ಅವರು ದೇಶದ […]
ಶ್ರೀನಿವಾಸಪುರ: ಕೊಲೆಯಾದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಅವರ ಪಾಥೀವ ಶರೀರದ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೃತ ಶ್ರೀನಿವಾಸ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದ್ದ ವಾಹನ, ಎಂಜಿ ರಸ್ತೆ ಹಾಗೂ ಮುಳಬಾಗಿಲು ರಸ್ತೆ ಮೂಲಕ ಮೃತರ ತೋಟಕ್ಕೆ ಸಾಗಿತು. ರಸ್ತೆ ಪಕ್ಕದ ಮೃತರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಎಂ.ಶ್ರೀನಿವಾಸನ್ ಅವರ ಪತ್ನಿ ಡಾ. ಚಂದ್ರಕಳಾ, ಪುತ್ರ […]
ಶ್ರೀನಿವಾಸಪುರ: ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಜೊತೆಗ ದಾನಿಗಳು ನೀಡುವ ಶೈಕ್ಷಣಿಕ ನೆರವು ಪಡೆದು ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ಚಿಕ್ಕಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್.ಮುನಿರಾಜು ಹೇಳಿದರು.ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಥ್ಯಾಂಕ್ಸ್ ಟು ಧಮೇರ್ಶ್ ಕಾರ್ಯಕ್ರಮದಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ದಾನಿ ಧರ್ಮೇಶ್ ನೀಡಿದ ಲೇಖನ ಸಾಮಗ್ರಿ, ಕುಡಿಯುವ ನೀರಿನ ಬಾಟೆಲ್ ಮತ್ತಿತರ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಆರ್.ಧರ್ಮೇಶ್ ತಮ್ಮ […]
ಶ್ರೀನಿವಾಸಪುರ: ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ರೂ.350 ಕೋಟಿ ವೆಚ್ಚದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ರೋಣೂರು ಹಾಗೂ ಕೊಳತೂರು ಗ್ರಾಮದಲ್ಲಿ ಶನಿವಾರ ಜಲ್ ಜೀವನ್ ಮಿಷನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೋಣೂರಿಗೆ ರೂ. 5.50 ಕೋಟಿ ಹಾಗೂ ಕೊಳತೂರಿಗೆ ರೂ.1 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಸಲಾಗುವುದು. ಮೂರು ತಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಗ್ರಾಮ ಹಾಗೂ ಪಟ್ಟಣ ಪ್ರದೇಶದ […]