
ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ವೈಸ್ ಪ್ರಿನ್ಸಿಪಾಲ್ ರೆವ್ ಸಿಸ್ಟರ್ ಐಲೀನ್ ಮಥಿಯಾಸ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿತು ಮತ್ತು ಹೊಸ ವೈಸ್ ಪ್ರಿನ್ಸಿಪಾಲ್ ಅವರನ್ನು ಸ್ವಾಗತಿಸಿದರುಪ್ರೊಫೆಸರ್ ಶ್ರೀಮತಿ ಸುನಿತಾ ಕ್ಲೌಡಿಯಾ ಲೋಬೋ ಅವರು 2ನೇ ಮೇ 2024 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ. ಕಾರ್ಯಕ್ರಮದಲ್ಲಿ ನಮ್ಮ ಅಧ್ಯಕ್ಷರಾದ ಶ್ರೀ ಆರ್ ಎಸ್ ಶೆಟ್ಟಿಯಾನ್, ಕಾರ್ಯದರ್ಶಿ ಶ್ರೀಮತಿ ಆಶಾ ಶೆಟ್ಟಿಯಾನ್, ಟ್ರಸ್ಟಿ ಡಾ ಆಶಿತ್ ಶೆಟ್ಟಿಯಾನ್, ಪ್ರಿನ್ಸಿಪಾಲ್ ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ […]

ದಿನಾಂಕ 03-05-2024 ರಂದು MIT ಕುಂದಾಪುರದ ಮೃದುಲಾ ಮತ್ತು ವಾರ್ಷಿಕ ದಿನಾಚರಣೆ ನಡೆಯಲಿದೆ. ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಪಿ.ರಾವ್ ಅವರು, ಕಂಪ್ಯೂಟರಿನಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಕನ್ನಡ ಕೀಲಿಮಣೆ ಮತ್ತು ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಸಾಫ್ಟ್ವೇರ್ನಲ್ಲಿ ಇತರ ಭಾರತೀಯ ಭಾಷೆಗಳ ಬಳಕೆಯ ವಿಸ್ತರಣೆಗೆ ಪರಿಣಾಮಕಾರಿ ಆಗುವಂತೆ ಮಾಡಿದ್ಧಾರೆ.ಈ ಸಂದರ್ಭದಲ್ಲಿ ವಾರ್ಷಿಕ ಸಾಂಸ್ಕೃತಿಕ ಸಂಭ್ರಮದ ಮೃದುಲಾ ಬಹುಮಾನ ಮತ್ತು ಶೈಕ್ಷಣಿಕ ಸಾಧನೆ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಐಎಂಜೆ ಸಂಸ್ಥೆಗಳ ಅಧ್ಯಕ್ಷ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಅಧ್ಯಕ್ಷತೆ […]

ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ನಾಲಜಿಯಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಸ್ಪರ್ಧಾಕೂಟ ವಿಜೃಂಭಣೆ ಯಿಂದ ಉದ್ಘಾಟನೆಗೊಂಡಿತು. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಕಾರ್ಯಕ್ರಮದ ಲಾಂಛನವನ್ನು ಅನಾವರಣಗೊಳಿಸಿ ಫೆಸ್ಟ್ಗೆ ಚಾಲನೆ ನೀಡಿದರು. ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಸಂಯೋಜಕ ಪ್ರೊ.ವರುಣ್ ಕುಮಾರ್, ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಮನೋಜ್ ಶೆಟ್ಟಿ, ಉಪಾಧ್ಯಕ್ಷೆ ಪನ್ನಗಾ ಶೆಟ್ಟಿ, ವಿದ್ಯಾರ್ಥಿ ಕಾರ್ಯಕ್ರಮದ ಸಂಯೋಜಕ ಶ್ರೀ ಅನೀಶ್. ಪುತ್ರನ್ ಈ […]

ಹೋಮಿಯೋಪಥಿ ಜನಕ ಡಾಕ್ಟರ್ ಸ್ಯಾಮ್ಯುಯೆಲ್ ಹಾನ್ನಿಮನ್ನರ 269ನೇ ಜನ್ಮ ದಿನದ ನೆನಪಿಗಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ದಿನಾಂಕ 30.04.2024 ರಂದು ವಿಶ್ವ ಹೋಮಿಯೋಪಥಿ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 9.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ರಾಹುಲ್ ಪಿ. BHMS, (IAAS), Senior Deputy Accountant General, CAG of India,ಗೌರವಾನ್ವಿತ ಅತಿಥಿಗಳಾಗಿ, 1999ನೇ ಬ್ಯಾಚ್ನ ಹಳೆಯ ವಿದ್ಯಾರ್ಥಿ, ಕೇರಳ ಸರಕಾರ, ಹೋಮಿಯೋಪಥಿ ವಿಭಾಗದ ವೈದ್ಯಕೀಯ […]

ಕುಂದಾಪುರದ ಗೆಳೆಯರ ಬಳಗ ಸ್ವಾವಲಂಬನ ಕೇಂದ್ರಕ್ಕೆ ಬಟ್ಟೆ ಚೀಲ ಹೊಲಿದು ಕೊಡಲು ಬಯಸುವವರಿಗೆ ಹೊಲಿಗೆ ಯಂತ್ರ ಒದಗಿಸಿಕೊಟ್ಟು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಕೇಂದ್ರದ ಸ್ಥಾಪಕರಾದ ವೆಂಕಟೇಶ ಪೈ ತಿಳಿಸಿದ್ದು, ಈಗ ಕೆಲವು ಹೊಲಿಗೆ ಯಂತ್ರಗಳು ಮಾತ್ರ ಇದ್ದು, ಆಸಕ್ತರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ ಎಂದಿದ್ದಾರೆ. ಉಚಿತ ಪ್ರಾಥಮಿಕ ಹೊಲಿಗೆ ತರಬೇತಿ ನೀಡುತ್ತಾ ಬಂದಿರುವ ಕೇಂದ್ರದಲ್ಲಿ ಹಲವು ವಿನ್ಯಾಸಗಳ ಬಟ್ಟೆಯ ಚೀಲ ಹೊಲಿಯಲು ಅವಕಾಶವಿದೆ.ಆಸಕ್ತರು ಕುಂದಾಪುರದ ಬಸ್ ಸ್ಟ್ಯಾಂಡ್ ಬಳಿ, ರಾಮ ಮಂದಿರ […]

ಉಡುಪಿ: ಮಾತೆತ್ತಿದರೆ ಮಾತೆಯರೇ ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ರವರ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ ಗಾಢ ಮೌನಕ್ಕೆ ಜಾರಿದ್ದನ್ನು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಲ್ಮಣ್ ಪ್ರಶ್ನಿಸಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳಿಗೆ ಆದ ಅನ್ಯಾಯ ಆಗಿರಬಹುದು, ಅಥವಾ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದ ಪ್ರಕರಣ ಆಗಿರಬಹುದು, ಈಗ ಸಹಸ್ರಾರು ಮಹಿಳೆಯರನ್ನು ಶೋಷಣೆಮಾಡಿ ತನ್ನ ಲೈಂಗಿಕ ತೃಷೆ ತೀರಿಸಿಕೊಂಡದ್ದಲ್ಲದೇ ಅವನ್ನೆಲ್ಲಾ ವೀಡಿಯೋ ಮಾಡಿದ ಆರೋಪ ಹೊತ್ತ […]

ಕುಂದಾಪುರ: ತೆಕ್ಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ಗುಡ್ಡೆಅಂಗಡಿಯ ಕೊಕಾಡಿ ತಿರುವಿನಲ್ಲಿ ಮರಕ್ಕೆ ಢಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಸ್ನೇಹಿತರಾದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಎಂಬವರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಒಂದು ಪಾರ್ಶ್ವ ಸಂಪೂರ್ಣ […]

ಮಂಗಳೂರು ನಗರದ ಕಪಿತಾನಿಯೊ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತ ಚಲಾಯಿಸಿ ಹೊರಗೆ ಬಂದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪದ್ಮರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮಾಧ್ಯಮದವರನ್ನು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಸಂದೀಪ್ ಎಕ್ಕೂರು ಎಂಬಾತ ಎಷ್ಟು ಹೊತ್ತು ಪ್ರತಿಕ್ರಿಯೆ ನೀಡ್ತೀರಾ ಅಂತ ಪ್ರಶ್ನಿಸಿದ್ದಾನೆ. ಈ ವೇಳೆ ಆತನನ್ನು […]

ಕಾಪು,ಎ.26 : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹಿರಿಯ ದಂಪತಿ ಮತದಾನಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಹಿರಿಯ ದಂಪತಿ ಪಾಸ್ಕಲ್ ಡಿಸೋಜಾ (98 ವರ್ಷ) ಮತ್ತು ಕ್ರಿಸ್ತಿನ್ ಡಿಸೋಜಾ (93 ವರ್ಷ) ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು.