ಕುಂದಾಪುರ, ಎ.14: 1992 ರಲ್ಲಿ ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯಿಂದ ಸ್ಥಾಪಿಸಲ್ಪಟ್ಟ ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಸಂಸ್ಥೆ ಕೇವಲ 3 ದಶಕಗಳಲ್ಲಿ 1 ಸಾವಿರ ಕೋಟಿ ವ್ಯವಹಾರ ನಡೆಸಿದ್ದು, ಒಂದು ನೂತನ ಮೈಲಿಕಲ್ಲು ಆಗಿ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಸುಂದರ ಗರಿ ದೊರಕಿ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದ್ದು ಸಾಕ್ಶಿಯಾದಂತಾಗಿದೆ. ಈ ಮೈಲಿಕಲ್ಲು ಸೊಸೈಟಿಯ ಅಧ್ಯಕ್ಷರ, ನಿರ್ದೇಶಕರ, ಅಧಿಕಾರಿಗಳ, ಸಿಬಂದಿ ವರ್ಗದಲ್ಲಿ ಸಂಭ್ರಮ ನೆಲಸಿದೆ.ಈ ಸಂಭ್ರಮವನ್ನು ಅಧ್ಯಕ್ಷರ, ನಿರ್ದೇಶಕರ, ಅಧಿಕಾರಿಗಳ, ಸಿಬಂದಿಯೊಂದಿಗೆ ಆಚರಿಸಲು […]
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಲ್ಪಟ್ಟ “ಸಮ್ಮರ್ ಕ್ಯಾಂಪ್ 2024 – ಪ್ಯಾಟಿ ಮಕ್ಳಳ್ ಹಳ್ಳಿ ಟೂರ್” ನ 7ನೇ ದಿನವಾದ ಎಪ್ರಿಲ್ 11, ಗುರುವಾರದಂದು ವಿದ್ಯಾರ್ಥಿಗಳು ರೈಲು ಪ್ರಯಾಣದ ಅನುಭವವನ್ನು ಪಡೆದರು. ಬೆಳಿಗ್ಗೆ 8.15ಕ್ಕೆ ಕುಂದಾಪುರದ ರೈಲ್ವೆ ನಿಲ್ದಾಣದಿಂದ ಮಡಗಾಂವ್ ಎಕ್ಸ್ಪ್ರೆಸ್ ಟ್ರೈನ್ನಲ್ಲಿ ಹೊರಟ ವಿದ್ಯಾರ್ಥಿಗಳು ಬೈಂದೂರಿನ ಸುರಂಗಮಾರ್ಗದ ಮೂಲಕ ಶಿರೂರು ರೈಲ್ವೆ ನಿಲ್ದಾಣದವರೆಗೆ ಪ್ರಯಾಣಿಸಿ, ರೈಲು ಪ್ರಯಾಣದ […]
ಕುಂದಾಪುರ (ಎ.12) : ನಗು ಸಹಜ, ನಗಿಸುವುದು ಪರಧರ್ಮ. ಜೀವನದಲ್ಲಿ ನಗು ಅಳು ಮನಸ್ಸಿನ ಕನ್ನಡಿಯಂತೆ. ಏನೇ ನೋವುಗಳಿದ್ದರೂ ನಗುನಗುತ್ತಾ ಬದುಕಬೇಕು ಎಂದು ನೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ನ 8ನೇ ದಿನದ ಬೇಸಿಗೆ ಶಿಬಿರದಲ್ಲಿ ಹಾಸ್ಯ ಚಟಾಕಿ ನಡೆಸಿದರು.ಇನ್ನೋರ್ವ ಅತಿಥಿ ಕುಂದಾಪುರದ ಒಡಿ. ಬೀನ್ ಎಂದು ಹೆಗ್ಗಳಿಕೆ ಪಡೆದ ಪ್ರಸಾದ್ ಜೋಗಿ ತಮ್ಮದೇ ಕುಂದಗನ್ನಡದ ಮಾತಿನ ಶೈಲಿಯಲ್ಲಿ ಮಾತನಾಡಿ […]
ಕುಂದಾಪುರ ಎಂಐಟಿ ಯಲ್ಲಿ ಪ್ರಥಮ ವರ್ಷದ ಎಂ ಬಿ ಎ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಬ್ರಹ್ಮಾಸ್ ಇಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಷನ್ಸ್ ಕಂಪನಿ ಲಿಮಿಟೆಡ್ನ ಮ್ಯಾನುಫ್ಯಾಕ್ಚರಿಂಗ್ ನಿರ್ದೇಶಕರಾದ ಶ್ರೀಮತಿ ಆತ್ಮಿಕಾ ಅಮೀನ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಬದಲಾಗುತ್ತಿರುವ ಉದ್ಯಮದ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಸಮಯದಲ್ಲಿ ಸ್ಪರ್ಧಾತ್ಮಕವಾಗಿರಲು ನಿರಂತರ ಕಲಿಕೆಯು ಮುಖ್ಯ ಎಂದರು. ಅವರು ತಮ್ಮದೇ ಆದ ಉದಾಹರಣೆಯನ್ನು ನೀಡುತ್ತಾ ಯಶಸ್ವಿ […]
ಎಪ್ರಿಲ್ 11, ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ, 2024 ಸಾಲಿನ ಯಾಜಕ ದೀಕ್ಷೆಯು, ಗುರುವಾರ, ಮಂಗಳೂರಿನರೊಸಾರಿಯೊ ಪ್ರಧಾನ ದೇವಾಲಯದಲ್ಲಿ ಮಧ್ಯಾನ 3 ಗಂಟೆಗೆ ನೆರವೇರಿತು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದಪರಮಪೂಜ್ಯ ಡಾ. ಪೀಟರ್ ಪಾವ್ಸ್ ಸಲ್ಜಾನ್ಹಾ ಇವರು ಈ ಸಂಸ್ಕಾರ ವಿಧಿಯನ್ನು ನೆರವೇರಿಸಿದರು. ಸೇವದರ್ಶಿಗಳಾದಕುಪ್ಪೆಪದವು ಧರ್ಮಕೇಂದ್ರದ ನೋರ್ಮನ್ ಜ್ಹೋನ್ ಮಥಾಯಸ್, ಫೆರಾರ್ ಧರ್ಮಕೇಂದ್ರದ ಪ್ರದೀಪ್ ರೊಡ್ರಿಗಸ್ ಹಾಗೂಫಜೀರ್ ಧರ್ಮಕೇಂದ್ರದ ಲ್ಯಾನ್ಷನ್ ಪಿಂಟೊ ಇವರು ಯಾಜಕ ದೀಕ್ಷೆಯನ್ನು ಸ್ವೀಕರಿಸಿದರು. ಧರ್ಮಕ್ಷೇತ್ರದ ಪ್ರಧಾನಗುರುಗಳಾದ ಮುನ್ನಿನ್ಕೊರ್ ಮ್ಯಾಕ್ಸಿಮ್ ನೊರೊನ್ಹಾ, ಚ್ಯಾನ್ಸಿಲರ್ ವಂ. ವಿಕ್ಟರ್ ಜೋರ್ಜ್ […]
ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್ ಶಾಲೆಗಳು ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿಟೂರ್ ನ 5ನೇ ದಿನದ ಹೊರಸಂಚಾರದಲ್ಲಿ ಮೊದಲಿಗೆ ಪ್ರಭಾಕರ ಹೆಂಚಿನ ಕಾರ್ಖಾನೆಗೆ ಭೇಟಿ ನೀಡಲಾಯಿತು. ಕಾರ್ಖಾನೆಯ ಮಾಲಿಕರಾದ ಶ್ರೀ ಪ್ರಶಾಂತ್ ತೋಳಾರ್ ಕಾರ್ಖಾನೆಯು ಬೆಳೆದು ಬಂದ ಇತಿಹಾಸವನ್ನು, ಅಲ್ಲಿ ಉತ್ಪಾದನೆಯಾಗುವ ಹೆಂಚುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಬಳಿಕ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರೂ, ಸಂಚಾಲಕರೂ ಆದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರ ಹುಟ್ಟೂರಾದ […]
ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ಆರ್.ಎನ್ ಶೆಟ್ಟಿ ಪಿಯು ಕಾಲೇಜು ಶೆ 99.15 % ಫಲಿತಾಂಶವನ್ನು ಪಡೆದುಕೊಂಡಿದೆ. ಪರೀಕ್ಷೆಗೆ ಕುಳಿತ 475 ವಿದ್ಯಾರ್ಥಿಗಳಲ್ಲಿ 471 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 222 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 226 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸುಹಾನಿ ಎನ್. 588 ಅಂಕಗಳನ್ನು ಪಡೆದು ಮೊದಲ ಸ್ಥಾನ ಗಳಿಸಿದ್ದಾರೆ. ಹಾಗೂ ನಿಶಾ 587 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ತ್ರಿಷಾ ಮತ್ತು ತನುಶ್ರೀ 584 ಅಂಕಗಳನ್ನು ಗಳಿಸಿ […]
ಕುಂದಾಪುರದ ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 96.61 % ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 100, ಕಲಾ ವಿಭಾಗದಲ್ಲಿ 94.73 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.75 ಫಲಿತಾಂಶ ಲಬಿಸಿದ್ದು, ಪರೀಕ್ಷೆಗೆ ಹಾಜರಾದ 118 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ತೇಗರ್ಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ 32, ಪ್ರಥಮ ಶ್ರೇಣಿಯಲ್ಲಿ 70 ವಿದ್ಯಾರ್ಥಿಗಳು ತೇಗರ್ಡೆ ಹೊಂದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಕುಮಾರಿ ಸಹನಾ ಶೇಕಡಾ 97.16 ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮಳಾಗಿ […]
ಅಭಯಹಸ್ತ 201 ರಕ್ತದಾನ ಶಿಬಿರ ಡಿ ಡಿ ಗ್ರೂಪ್ ನಿಟ್ಟೂರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ದಿನಾಂಕ 06/04/2024 ಶನಿವಾರ ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣ ನಿಟ್ಟೂರುನಲ್ಲಿ ನಡೆದ ರಕ್ತದಾನ ಶಿಬಿರವನ್ನು ಸಂತೋಷ್ ಕುಮಾರ್ ನಗರಸಭಾ ಸದಸ್ಯರು ನಿಟ್ಟೂರು ಇವರು ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಕಳೆದ ಹಲವು ದಿನಗಳಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ರಕ್ತದ ಕೊರತೆ ಇದ್ದು, ಈ ಕೊರತೆಯನ್ನು ನೀಗಿಸಲು ತುರ್ತಾಗಿ ಕೇವಲ ಒಂದು […]