ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 21-02-2024ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲ್ತೊಡನಲ್ಲಿ ನಡೆಯಿತು.ದೀಪಕ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ರೈತರ ಸಂಘ, ಬೈಂದೂರು ಇವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.ಇನ್ನೊರ್ವ ಮುಖ್ಯ ಅತಿಥಿ ಕರುಣಾಕಾರ ಶೆಟ್ಟಿ, ಅಧ್ಯಾಪಕರು, ನಾವುಂದ ಇವರು ಏನ್ ಎಸ್ ಎಸ್ ಶಿಬಿರ ಜೀವನದಲ್ಲಿ ಯಾವ ರೀತಿ […]
ಕುಂದಾಪುರ,ಫೆ.23: ದಿನಾಂಕ 21/02/2023 ರಂದು ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ ಅತೀ ವಂದನೀಯ ಧರ್ಮಗುರು ವಿನ್ಸೆಂಟ್ ರಾಬರ್ಟ್ ಕ್ರಾಸ್ತಾರವರು ವಿದ್ಯಾಸಂಸ್ಥೆಗಳಿಗೆ ಅಧಿಕೃತ ಭೇಟಿ ನೀಡಿ ಸಂಸ್ಥೆಯ ಪ್ರತಿಯೊಂದು ಕಾರ್ಯ ಚಟುವಟಿಕೆಯ ಕಡತಗಳನ್ನು ಪರಿಶೀಲಿಸಿದರು.ಬೆಳಗಿನ ಅವಧಿಯಲ್ಲಿ ಪ್ರಾರ್ಥನಾ ಸಭೆಯನ್ನು ಏರ್ಪಡಿಸಿ ಅವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು. ಬೆಳಗಿನಿಂದ ಸಂಜೆಯ ತನಕ ಇದ್ದು ಸಂಸ್ಥೆಯ ಎಲ್ಲಾ ಶಿಕ್ಷಣಾ ಸಂಸ್ಥೆಗಳಾದ, ಸಂತ ಮೇರಿಸ್ ಹಿರಿಯ ಕಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಸಂತ ಮೇರಿಸ್ ಪಿ.ಯು.ಕಾಲೇಜ್ […]
ಶನಿವಾರ 24 ರ ಸಂಜೆ ಮೂರು ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಫಾತಿಮಾ ರಲಿಯಾ ಅವರ ಕವನ ಸಂಕಲನ ‘ಅವಳ ಕಾಲು ಸೋಲದಿರಲಿ’ ಬಿಡುಗಡೆಯಾಗಲಿದೆ. ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಸುಧಾ ಆಡುಕಳ ಮಾತಾಡಲಿದ್ದಾರೆ. ವಿಲ್ಸನ್ ಕಟೀಲ್ ಮತ್ತು ಮುಆದ್ ಜಿ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಪುಸ್ತಕವನ್ನು ‘ಉಡುಗೊರೆ ಪ್ರಕಾಶನ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರಚರ ಮೂರನೇ ಕೃತಿಯಾಗಿದೆ. ಹಿಂದಿನ ಎರಡು ಕೃತಿಗಳಾದ […]
ಕುಂದಾಪುರ (ಫೆ.22) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಸರಿಗನ್ನಡಂ ಗೆಲ್ಗೆ” ಎಂಬ ವಿಷಯಾಧಾರಿತ ಸಂವಾದ ಕಾರ್ಯಾಗಾರ ಜರುಗಿತು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾಗಿರುವ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಆಗಮಿಸಿ, ಕನ್ನಡ ಭಾಷೆಯ ಹುಟ್ಟು, ಬೆಳವಣಿಗೆ, ಕನ್ನಡದ ಸೊಗಡು, […]
ಕಥೋಲಿಕ್ ಸಭಾ ಮಂಗಳೂರು (ರಿ) ಇವರ ಆಶ್ರಯದಲ್ಲಿ ಮಂಗಳೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ವಿಚಾರಣಾ ಕೇಂದ್ರಗಳು ಹಾಗೂ ಎಲ್ಲಾ ಆಯೋಗಗಳ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮೆರ್ಸಿ ಅಮ್ಮ ಅವರ ದೇವಾಲಯ ಉಳ್ಳಾಲ್ ಪಾನೀರ್ ಇಲ್ಲಿಂದ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರ ಮುಡಿಪು ಇಲ್ಲಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪ್ರಾಯಶ್ಚಿತ್ತ ಕಾಲದಲ್ಲಿ ಕಥೋಲಿಕ ಕ್ರೈಸ್ತರು ಜೀವನ ಪರಿವರ್ತನೆಗಾಗಿ ಹಾಗೂ ತ್ಯಾಗ ಮತ್ತು ಒಳ್ಳೆಯ ಕೆಲಸ ಮಾಡಿ ದೇವರ ಅನುಗ್ರಹ ಪಡೆಯಲು ಈ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ […]
ಕುಂದಾಪುರ: ಫೆಬ್ರವರಿ 19ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಇವರು ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವದ ಕುರಿತು ಸವಿಸ್ತಾರವಾಗಿ ಅರಿವು ಮೂಡಿಸುವುದರ ಜೊತೆಗೆ,ಊರ ಗ್ರಾಮಸ್ಥರು,ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನೇತ್ರಾವತಿ ಆಚಾರ್ಯ, ಪೂರ್ಣಿಮಾ, ಕುಸುಮ, ಗಿರಿಜಾ, ಪೂನಮ್ಮ , ದೀಪಿಕಾ ಶೆಟ್ಟಿ, ದಿನೇಶ್ ಭಟ್, […]
ಸೇಂಟ್ ಆಗ್ನೆಸ್ ಪಿಯು ಕಾಲೇಜು 2023-’24 ಶೈಕ್ಷಣಿಕ ವರ್ಷದಲ್ಲಿ ಸಮುದಾಯ ಸೇವೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವತ್ತ ಗಮನಹರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿತು. ದೇಶದ ಉತ್ತಮ ನಾಗರಿಕರಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಶಿಕ್ಷಣದ ಗುರಿಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ, ಅಂತಹ ಉಪಕ್ರಮಗಳು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿವೆ. ಕಾರ್ಯಕ್ರಮವು ಸಾಮಾಜಿಕ ಅಸಮಾನತೆಗಳ ಅರಿವು ಮೂಡಿಸುವ, ಪರಾನುಭೂತಿ, ಸಾಮಾಜಿಕ ಜವಾಬ್ದಾರಿ ಮತ್ತು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಬೆಳವಣಿಗೆಯನ್ನು ಬೆಳೆಸುವ ಗುರಿಯನ್ನು ಹೊಂದಿರುವ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸಿತು. ಇದು ಅವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅವರನ್ನು […]
ಕೋಲಾರ : ಚುನಾವಣಾ ಕರ್ತವ್ಯ ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಅತಿ ಸಣ್ಣ ವಿಷಯವೂ, ನಿರ್ಲಕ್ಷ್ಯತೆ ಬಹಳ ದೊಡ್ಡ ಪರಿಣಾಮ ಬೀರಬಹುದು. ಆದ್ದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿಗಳು ಈಗಿಂದಲೇ ಚುನಾವಣಾ ಕರ್ತವ್ಯಕ್ಕೆ ಮಾನಸಿಕವಾಗಿ ಸಿದ್ಧರಾಗಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು. ಇಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯದಿಂದ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಸೆಕ್ಟರ್ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ, ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸೆಕ್ಟರ್ […]
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 39ನೇ ಬ್ಯಾಚ್ ಬಿ.ಎಚ್.ಎಮ್.ಎಸ್ ಕೋರ್ಸ್ ಹಾಗೂ 26 ನೇ ಬ್ಯಾಚ್ ಸ್ನಾತಕೋತ್ತರ ಕೋರ್ಸ್‍ನ್ನು ದಿನಾಂಕ 17.02.2024 ರಂದು ಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಸಲಹೆಗಾರರು ಹಾಗೂ ಪ್ರಾಧ್ಯಾಪಕರು ಮತ್ತು ಕರ್ನಾಟಕ ರಾಜ್ಯ ಚಾಪ್ಟರ್‍ನ ಅಧ್ಯಕ್ಷರಾದ ಡಾ. ಪ್ರವೀಣ್‍ರಾಜ್ ಪಿ.ರವರು ಮುಖ್ಯ ಅತಿಥಿಗಳಾಗಿ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಅಧ್ಯಕ್ಷರಾಗಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರ […]