ಬ್ರಹ್ಮಾವರ : ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆ ದಿನಾಂಕ10-06-2024 ರಂದು ಎಸ್ ಎಮ್ ಎಸ್ ಪದವಿಪೂವ೯ ಕಾಲೇಜು ಬ್ರಹ್ಮಾವರದ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ “ ಇನ್ಸ್ಪಾಯರ್ “ನ ಬಿಡುಗಡೆ ಸಮಾರಂಭದ ಅಧ್ಯ ಕ್ಷತೆಯನ್ನು ಒ ಎಸ್ ಸಿ ವಿದ್ಯಾಯಸಂಸ್ಥೆಯ ಸಂಚಾಲಕರಾದ ರೆ. ಫಾ. ಎಮ್ ಸಿ ಮಥಾಯಿ ಅವರು ವಹಿಸಿದ್ದರು.ಅವರು ತಮ್ಮ ಅಧ್ಯಕ್ಷೀಯ ಭಷಣದಲ್ಲಿ ” ಈ ಸಂಚಿಕೆ ವಿದ್ಯಾರ್ಥಿಗಳ ಕ್ರೀಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ”ಎಂದರು. ಬ್ರಹ್ಮಾವರದ ಉದ್ಯಮಿ ಹಾಗೂ ಬ್ರಹ್ಮಾವರ ತಾಲೂಕು […]
ಮಹಿಳೆಯರಿಗೆ , ಶಾಲಾ ಬಾಲಕಿಯರಿಗೆ ಹಾಗೂ ಸಾರಿಗೆ ನಿಗಮಕ್ಕೆ ಶಕ್ತಿ ತಂದ ರಾಜ್ಯ ಸರ್ಕಾರದ ಮಹತ್ತರ ಯೋಜನೆ ಶಕ್ತಿ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಕುಂದಾಪುರ ಕೆಎಸ್ಆರ್ಟಿಸಿ ಡಿಪೋ ದ ಅಧಿಕೃತ ಮಾಹಿತಿ ಈ ಕೆಳಗಿನಂತಿದೆ 01 ) 2022-23 ರ ಒಟ್ಟು ವಾರ್ಷಿಕ ಆದಾಯ 41.54 ಕೋಟಿ ರೂ ಆಗಿದ್ದು ಶಕ್ತಿ ಯೋಜನೆಯು ಜಾರಿಗೊಂಡ ನಂತರ 2023-24 ನೇ ಸಾಲಿನಲ್ಲಿ 60.35 ಕೋಟಿ ರೂ ಆಗಿರುತ್ತದೆ.ಶಕ್ತಿ ಯೋಜನೆ ಬಳಕೆಯಿಂದ ಆದಾಯದಲ್ಲಿ 18.82 ಕೋಟಿ ರೂಪಾಯಿಯಂತೆ […]
ಕುಂದಾಪುರ : ಎಂ. ಸಿ. ಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ದಿನಾಂಕ 10.06.2024 ರಂದು ಸಂತ ಜೋಸೆಫರ ಹಿರಿಯ ಪ್ರಾರ್ಥಮಿಕ ಶಾಲೆ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಾಗಲೇ ಎಂ. ಸಿ. ಸಿ ಬ್ಯಾಂಕ್ ಹಲವು ಯೋಜನೆಗಳನ್ನು ಕೈಗೊಂಡಿದೆ. ಅದರ ಒಂದು ಭಾಗವಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂ. ಸಿ. ಸಿ. ಬ್ಯಾಂಕ್ ಲಿಮಿಟೆಡ್ ಇದರ ಕುಂದಾಪುರ ಶಾಖೆಯ ವ್ಯವಸ್ಥಾಪಕರಾದ ಜ್ಯೋತಿ ಬರೆಟ್ಟೋ, ಬ್ಯಾಂಕ್ ಸಿಬ್ಬಂದಿಗಳಾದ […]
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರದ 2024-25ನೇ ಸಾಲಿನ ಚುನಾವಣೆಯು ದಿನಾಂಕ 09-06-2024ರಂದು ನಡೆಯಿತು. ಚುನಾವಣೆಯಲ್ಲಿ ಆಲ್ವಿನ್ ಡಿಸೋಜ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರುಗಳಾಗಿ ಸ್ಟೀವನ್ ರೊಡ್ರಿಗಸ್ ಮತ್ತು ಜೊಸ್ಸಿ ಕ್ರಾಸ್ತಾ, ಕಾರ್ಯದರ್ಶಿಯಾಗಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಸಹ ಕಾರ್ಯಾದರ್ಶಿಯಾಗಿ ಲವೀನಾ ಗ್ರೆಟ್ಟಾ ಡಿಸೋಜಾ, ಖಜಾಂಚಿಯಾಗಿ ಮೆಲ್ರಿಡಾ ಜೇನ್ ರೊಡ್ರಿಗಾಸ್, ಸಹಾ ಖಜಾಂಚಿಯಾಗಿ ವಿಲ್ಪ್ರೆಡ್ ಮೆಲ್ವಿನ್ ಆಲ್ವರಿಸ್, ಆಯ್ಕೆಯಾಗಿದ್ದಾರೆ. ಸ್ಟ್ಯಾನಿ ಲೋಬೊ ನಿಕಟ ಪೂರ್ವ ಅಧ್ಯಕ್ಷರಾಗಿರುತ್ತಾರೆ.
ಕುಂದಾಪುರ, ಜೂ.9: “ಅವಮಾನವನ್ನು ಸನ್ಮಾನವನ್ನಾಗಿ ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣವು ವಿದ್ಯಾರ್ಥಿಯಲ್ಲಿ ಶಿಸ್ತು, ವಿನಮ್ರತೆ, ವಿಧೇಯತೆ , ಭ್ರಾತೃತ್ವ , ಮಾನವತೆ ಚಾರಿತ್ರ್ಯವನ್ನು ವೃದ್ಧಿಸುವಂತಿರಬೇಕು.ಶೈಕ್ಷಣಿಕ ಹಾದಿಯಲ್ಲಿ ಶ್ರದ್ಧೆ, ಅಧ್ಯಯನಶೀಲತೆ , ಆತ್ಮವಿಶ್ವಾಸ , ಕಠಿಣ ಪರಿಶ್ರಮದಿಂದ ಗುರಿಯಡೆಗೆ ಮುನ್ನುಗ್ಗುವ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಬಹುದು ” ಎಂದು ಸಂಪನ್ಮೂಲ ವ್ಯಕ್ತಿಗಳಾದ ಕುಂದಾಪುರದ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಜಯಶೀಲಾ ಕೃಷ್ಣದಾಸ್ ಕಾಮತ್ ರವರು ನುಡಿದರು. ಶ್ರೀ ಕಾಶಿ […]
ಕುಂದಾಪುರ: ಕುಂದಾಪುರ ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಅಂಬಾ ಟಿವಿ ಸೆಂಟರ್ ಶಾರ್ಟ್ ಸರ್ಕಿಟ್ ನಿಂದ ಅಗ್ನಿ ಅವಘಡವಾಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗಿದೆ. ರವಿವಾರ ರಾತ್ರಿ 10:30ಕ್ಕೆ ಸುಧಾಕರ ಶೆಟ್ಟಿ ಎಂಬವರ ಮಾಲಕತ್ವದ ಅಂಬಾ ಟಿವಿ ಸೆಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ ಸೆಂಟರ್ನ ಒಳಗಿದ್ದ ಎಲ್ಲಾ ಸ್ವತ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಲ್ಲದೆ ಮೂರು ಲಕ್ಷ ರೂ ನಗದು ಕೂಡ ಬೆಂಕಿಗೆ ಆಹುತಿಯಾಗಿದೆ ಒಟ್ಟಾರೆ ಈ ದುರಂತದಿಂದ ಒಂದು ಕೋಟಿಗೂ […]
ಉಡುಪಿ: ನಾಯಕನಾದವನು ಸವಾಲುಗಳನ್ನು ಎದುರಿಸಿದಾಗ ಮಾತ್ರ ಪ್ರಗತಿಶೀಲನಾಗಿ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಹೇಳಿದರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ ಹಾಗೂ ಸಹಮಿಲನವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾರ್ತಕ ಜಗತ್ತಿನಲ್ಲಿ ನಾಯಕನ ಆಲೋಚನೆಗಳು ಸಮಾಜದಲ್ಲಿ ಬದಲಾವಣೆಯನ್ನು ಬಯಸುವಂತದ್ದಾಗಿರಬೇಕಾಗಿದ್ದು ಹೊಸ ಹೊಸ ಪ್ರಯೋಗಗಳು ಮತ್ತು ಆಲೋಚನೆಗಳೊಂದಿಗೆ ಸಂಘಟನೆಯನ್ನು ಮುನ್ನಡೆಸಬೇಕಾಗಿದೆ ಈ ವೇಳೆ ಬರುವ ಟೀಕೆಗಳನ್ನು […]
ಕುಂದಾಪುರ, 8 ಜೂನ್ 2024 ನಗರದ ಸೈಂಟ್ ಮೇರಿಸ್ ಪ ಪೂ ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮವನ್ನು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಸಂಚಾಲಕರಾದ ಅ|ವಂ|ಪಾವ್ಲ್ ರೇಗೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು, ದೀಪವನ್ನು ಬೆಳಗಿಸಿ ಉದ್ಘಾಟಿಸಿ “ವಿದ್ಯಾರ್ಥಿಗಳಲ್ಲಿ ಗುರಿ ಇಲ್ಲದೇ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಉತ್ತಮ ಸಾಧನೆ ಮಾಡಿ. ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ. ಸಾಮಾಜಿಕ ಜಾಲ ತಾಣದಿಂದ ನೀವೆಲ್ಲ ದೂರವಿರಬೇಕು. ನಿಮಗೆಲ್ಲ […]
ಅಭಯ – ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಮಹಿಳಾ ವೇದಿಕೆಯು ಜೂನ್ 6, 2024 ರಂದು ವಿಶ್ವ ಪರಿಸರ ದಿನವನ್ನು ಆಚರಿಸಿತು.ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪ್ರವೀಣ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ತಾಲೂಕು ಅವರನ್ನು ಆಹ್ವಾನಿಸಲಾಯಿತು. ಶ್ರೀ ಪ್ರವೀಣ್ ಅವರು ಸಾವಯವ ಕೃಷಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು ಮತ್ತು ಮಣ್ಣಿನ ಫಲವತ್ತತೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಸೂಚಿಸಿದರು. ಆಧುನೀಕರಣ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಪ್ಲಾಸ್ಟಿಕ್‌ಗಳ ಅತಿರೇಕದ ಬಳಕೆಯು ಮಣ್ಣಿನ ಗುಣಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗಿದೆ. ವರ್ಮಿಕಾಂಪೋಸ್ಟ್ […]