ಕುಂದಾಪುರ, ಡಿ.17; ಕಥೊಲಿಕ್ ಸಭಾ ಪಿಯುಸ್ ನಗರ್ ಘಟಕ ಮತ್ತು ಕುಂದಾಪುರ ವಲಯ ಕಥೊಲಿಕ್ ಸಭಾ ಆಶ್ರಯದಲ್ಲಿ, ಶೆವೊಟ್ ಶ್ರತಿಷ್ಠಾನ್ ನ್ ಸಹಯೋಗದೊಂದಿಗೆ ಕುಂದಾಪುರ ವಲಯ ಮಟ್ಟದಲ್ಲಿ “ಸೌರ್ಹಾದ ಕ್ರಿಸ್ಮಸ್” ಕಾರ್ಯಕ್ರಮ ಪಿಯುಸ್ ನಗರ ಚರ್ಚಿನ ವಠಾರದಲ್ಲಿ ಡಿ.15 ರಂದು ಸಂಭ್ರದಿಂದ ನಡೆಯಿತು. ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ।ವಂ।ಪೌಲ್ ರೇಗೊ ಅತಿಥಿಗಳೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿ ‘ಪ್ರೀತಿಯಿಂದ ಜೀವಿಸಿ, ಬಡವರಿಗೆ ಕಷ್ಟದಲ್ಲಿರುವರಿಗೆ, ಗೆಳೆಯರೊಂದಿಗೆ ಪ್ರೀತಿ ಹಂಚಿ ಈ ಕ್ರಿಸಮಸ್ ಹಬ್ಬದ […]
ಮಂಗಳೂರು, ಡಿಸೆಂಬರ್ 2024: ಬೆಂದೂರ್‌ನ ಸೈಂಟ್ ಆಗ್ನೆಸ್ ಶಾಲೆ CBSE, ಹಿಂದಿನ ಹೆಸರು ಸೈಂಟ್ ಆಗ್ನೆಸ್ ಇಂಗ್ಲಿಷ್ ಪ್ರಾಥಮಿಕ ಶಾಲೆ, ತನ್ನ ವಜ್ರ ಮಹೋತ್ಸವವನ್ನು ಆಚರಿಸಲು ಹೆಮ್ಮೆಪಡುತ್ತಿದೆ. ಶಿಕ್ಷಣ, ನಂಬಿಕೆ ಮತ್ತು ಸಮುದಾಯ ಸೇವೆಯಲ್ಲಿ ಸಾರ್ಥಕ ಮತ್ತು ಪರಿಪೂರ್ಣತೆಯ 60 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಶ್ರೇಷ್ಠ ಸಮಗ್ರ ಶಿಕ್ಷಣದಡಿಯಲ್ಲಿ ತನ್ನದೇ ಆದ ಛಾಪನ್ನು ಸ್ಥಾಪಿಸಿರುವ ಈ ವಿದ್ಯಾಸಂಸ್ಥೆಯ ವೈಭವಯಾತ್ರೆಯ ಗುರುತಾಗಿ ಈ ಮಹತ್ವದ ಕ್ಷಣವನ್ನು ಆಚರಿಸಲಾಗುತ್ತಿದೆ. 1914ರಲ್ಲಿ, ಮಾತೆ ಎಲ್ವಿಶಿಯಾ ಬೆಂದೂರ್‌ನಲ್ಲಿ ಪ್ರೌಢ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು […]
ಉಡುಪಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯೇಸು ಕ್ರಿಸ್ತರ ಜನನದ ಕಥೆಯನ್ನು ನೃತ್ಯ ರೂಪದ ಮೂಲಕ ಅದ್ಭುತವಾಗಿ ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಕೋರಿಯನ್ ತಂಡದ ಮೂಲಕ ಶನಿವಾರ ಸಂಜೆ ಪ್ರದರ್ಶನಗೊಂಡಿತು. ಉಡುಪಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಲೊಂಬಾರ್ಡ್ ಮಿಶನ್ ಆಸ್ಪತ್ರೆ, ಕರ್ನಾಟಕ ಯುವಕ ಸಂಘ ಮತ್ತು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಯೋಗದೊಂದಿಗೆ “ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಕಾರ್ಯಕ್ರಮದಲ್ಲಿ ಕೋರಿಯದ ಸುಮಾರು 60 ಕಲಾವಿದರ ತಂಡ ವಿಶಿಷ್ಠವಾದ ಧ್ವನಿ ಮತ್ತು ಬೆಳಕಿನ […]
ಕುಂದಾಪುರ: ಸುಮಾರು ಮೂರು ದಶಕಗಳ ಕಾಲ ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಬೆಂಬಲಿತರ ಸುದೀರ್ಘ ಅವಧಿಯ ಆಳ್ವಿಕೆಯನ್ನು ಕೊನೆಗೊಳಿಸಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಅಭ್ಯರ್ಥಿಗಳ ಪರ ಮತ ನೀಡಿದ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಮತದಾರರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ. ರಾಜ್ಯದ ಪ್ರಮುಖ ಬಂದರು ನಗರಿಗಳಲ್ಲಿ ಒಂದಾಗಿರುವ ಗಂಗೊಳ್ಳಿಯ ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿದ್ದರಿಂದ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಕಳೆದ ವರ್ಷಗಳಲ್ಲಿ ನಡೆಯದೆ […]
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಮೇಲುಗೈ ಸಾಧಿಸಿದ್ದು, ಬಿಜೆಪಿ ಯ ಆಡಳಿತ ಅಂತ್ಯ ಹಾಡಿದೆ. ಸತತ ಮೂರು ದಶಕಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಈ ಬಾರಿ ಪರಾಜಯಗೊಂಡಿದ್ದಾರೆ. ಡಿಸೆಂಬರ್ 8ರಂದು ಗಂಗೊಳ್ಳಿ ಗ್ರಾಮ ಪಂಚಾಯ್ತಿಯ 33 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ನಿಗದಿಯಂತೆ ಡಿ.11ರಂದು ಫಲಿತಾಂಶ ಪ್ರಕಟಗೊಳ್ಳಬೇಕಿತ್ತು. […]
ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ 90 ನೇ ವರ್ಷದ ಸಂಭ್ರಮಾಚಾರಾಣೆಯು. ಡಿಸೆಂಬರ್ 11 ರಂದು ಬಹಳ ಅದ್ದೂರಿಯಾಗಿ ನಡೆಯಿತು.ದೇವಾಲಯವು 90 ವರ್ಷ ಪೂರೈಸಿದ ಸಂದರ್ಭದಲ್ಲಿ, ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ.ಎಲೋಶಿಯಸ್ ಪೌಲ್ ಡಿಸೋಜಾ ಪ್ರಧಾನ ಗುರುಗಳಾಗಿ ಆಗಮಿಸಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ದೇವಾಲಯವು 90 ನೇ ವರ್ಷದ ಸಂಭ್ರಮಾಚಾರಣೆ ಮಾಡುವ ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಆಶೀರ್ವಾದಗೈದು. ಶುಭಕೋರಿದರು.” ಮಕ್ಕಳನ್ನು ದೇವರ ಸೇವೆಗೆ ನಿಯೋಜಿಸಲು ಪೋಷಕರು ತಮ್ಮ […]
ಕುಂದಾಪುರ, ಡಿ.12ಃ ರೋಟರಿ ಕ್ಲಬ್ ಆಫ್ ಕುಂದಾಪುರ ಇವರಿಂದ ಕುಂದಾಪುರಕ್ಕೆ 3 ಸಿ.ಸಿ.ಟಿ.ವಿ ಟಿ.ವಿ. ಮತ್ತು ಒಂದು ಮನೆಯ ಕೊಡುಗೆಯನ್ನು ನೀಡಿತುಕುಂದಾಪುರದ ಶಾಸ್ತ್ರಿ ಪಾರ್ಕ್ ಹತ್ತಿರ, ಸಂಗಮ್ ಜಂಕ್ಷನ್ ಹತ್ತಿರ ಮತ್ತು ತಲ್ಲೂರು ಜಂಕ್ಷನ್ ಹತ್ತಿರ ಸಂಚಾರಿ ಠಾಣೆಗಾಗಿ ಸಿ.ಸಿ.ಟಿ.ವಿ ಕ್ಯಾಮರಗಳನ್ನು ಹಾಗೂ ತಲ್ಲೂರಿನ ಮೂಕಾಂಬಿಕಾ ದೇವಾಡಿಗ ಇವರಿಗೆ ಕಟ್ಟಿಸಿ ಕೊಡಮಾಡಿದ ಮನೆಯನ್ನು ಡಿಸ್ಟ್ರಿಕ್ಟ್ ಗವರ್ನರ್ ರೊ.ಸಿ.ಎ. ದೇವ್ ಆನಂದ್, ಅಸಿಸ್ಟೆಂಟ್ ರಾಜೇಂದ್ರ ಶೆಟ್ಟಿ, ಝೊನಾಲ್ ಲೆಫ್ಟಿನೆಂಟ್ ಮಹೇಂದರ್ ಶೆಟ್ಟಿ, ಪ್ರಸ್ತುತ ರೋಟರಿ ಕ್ಲಬ್ ಆಫ್ ಕುಂದಾಪುರ […]
ಮಂಗಳೂರುಃ ಕ್ಯಾಥೋಲಿಕ್ ಸಭಾ, ಬಜಾಲ್ ಯುನಿಟ್ ಆಯೋಜಿಸಿದ ರೋಮಾಂಚಕ ಕುಡ್ಲ ಕಾರ್ನಿವಲ್ 2024, ಸಾಮಾಜಿಕ ಉದ್ದೇಶವನ್ನು ಬೆಂಬಲಿಸುವಾಗ ವಿನೋದ, ಮನರಂಜನೆ ಮತ್ತು ಏಕತೆಯ ದಿನವನ್ನು ಭರವಸೆ ನೀಡುತ್ತದೆ. ಡಿಸೆಂಬರ್ 17, 2024 ರಂದು ಬೆಂದೂರಿನ ಸೇಂಟ್ ಆಗ್ನೆಸ್ ವಿಶೇಷ ಶಾಲಾ ಮೈದಾನದಲ್ಲಿ ನಡೆಯಲಿರುವ ಈವೆಂಟ್, ಎಲ್ಲರಿಗೂ ಉಚಿತ ಪ್ರವೇಶದೊಂದಿಗೆ ಈ ಭವ್ಯವಾದ ಆಚರಣೆಯ ಭಾಗವಾಗಲು ಪ್ರತಿಯೊಬ್ಬರನ್ನು ಆಹ್ವಾನಿಸುತ್ತದೆ. ಸಾಂಸ್ಕೃತಿಕ ಪ್ರದರ್ಶನಗಳಿಂದ ಹಿಡಿದು ರೋಮಾಂಚಕ ಸ್ಪರ್ಧೆಗಳವರೆಗೆ, ಕಾರ್ನೀವಲ್ ಪ್ರತಿಯೊಬ್ಬರಿಗೂ ಏನನ್ನಾದರೂ ಖಾತರಿಪಡಿಸುತ್ತದೆ.ಈ ಕಾರ್ನೀವಲ್ ಅನ್ನು ಇನ್ನಷ್ಟು ವಿಶೇಷವಾಗಿಸುವುದು ಹಿಂದುಳಿದವರನ್ನು […]
ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಉತ್ಪನ್ನ ಘಟಕದ ಬಗ್ಗೆ ಮಾಹಿತಿ- ಪ್ರಾತ್ಯಕ್ಷಿಕೆ ನೀಡುವ ಸಲುವಾಗಿ ‘ಇಂಡಸ್ಟ್ರಿಯಲ್ ವಿಸಿಟ್’ ನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಉಪ್ಪೂರಿನ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಫ್ಯಾಕ್ಟರಿ ಮತ್ತು ಶಿರಿಯಾರದ ತಂಪು ಪಾನೀಯ ಉತ್ಪಾದನಾ ಘಟಕ ‘ ಶ್ರೀ ಕಟೀಲೇಶ್ವರಿ ಬಾಟ್ಲಿಂಗ್ ಕಂಪೆನಿ’ ಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಕೋಟಾದ ಕಾರಂತ ಥೀಮ್ ಪಾರ್ಕ್ […]