ಕುಂದಾಪುರ: ನೀಟ್ ಅಕ್ರಮ ಮೋದಿ ಸರ್ಕಾರದ ಬಹುದೊಡ್ಡ ಹಗರಣ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕೇಂದ್ರ ಸರಕಾರದ ಪ್ರಾಯೋಜಿತ ಭ್ರಷ್ಟಾಚಾರ. ಈ ಅಕ್ರಮಗಳ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರವ ಬಲ್ಲಾಳವರು ಆಗ್ರಹಿಸಿದರು. ಇಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ನಡೆದ ಎನ್ ಎಸ್ ಯು ಐ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅವರು […]
ಕುಂದಾಪುರ 29ನೇ ಜೂನ್ 2024 : UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಪ್ರಥಮ ಮಹಾಸಭೆ ಮತ್ತು ಪೋಷಕರ ಸಭೆ ಕಾರ್ಯಕ್ರಮವನ್ನು 29 ಜೂನ್ ರಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಮತ್ತು ನರ್ಸರಿ ಮುಖ್ಯೋಪಾಧ್ಯಾಯಿನಿ ಸವಿತಾ ಅವರು ಗಣ್ಯರನ್ನು ವೇದಿಕೆಗೆ ಕರೆದೊಯ್ಯುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ಸ್ಕೌಟ್ ಶಿಕ್ಷಕಿ ಸವಿತಾ ಆರ್ ಪ್ರಾರ್ಥನಾ ಗೀತೆಯನ್ನು ಹಾಡಿದರು. ರೆ. ಇಮ್ಯಾನುಯೆಲ್ ಜಯಕರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು […]
ಕೊಲ್ಲೂರು : ಆಕಸ್ಮಿಕವಾಗಿ ಕಾಲು ಜಾರಿ ಮನೆಯ ಬಾವಿಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ವ್ಯಾಪ್ತಿಯ ನಂದ್ರೋಳ್ಳಿ ಎಂಬಲ್ಲಿ ಇಂದು ನಡೆದಿದೆ. ಮೃತರನ್ನು ನಂದ್ರೋಳ್ಳಿ ನಿವಾಸಿ ಶೀಲಾ ಹಾಗೂ ಸತೀಶ್ ಮಡಿವಾಳ ಎಂಬವರ ಮಗ ಧನರಾಜ್ (13) ಹಾಗೂ ಮಗಳು ಛಾಯ (7) ಎಂದು ಗುರುತಿಸಲಾಗಿದೆ. ಮಕ್ಕಳ ರಕ್ಷಣೆಗೆ ಮುಂದಾದ ತಾಯಿ ಶೀಲಾ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಪುರದ ಸೈoಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 29 ಜೂನ್ 2024 ರ ಶನಿವಾರದಂದು ಪ್ರಥಮ ಹಾಗೂ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಜರುಗಿತು.. ಕಾರ್ಯಕ್ರಮದಲ್ಲಿ ಸೈoಟ್ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ಅತಿ .ವಂ.ಫಾದರ್ ಪಾವ್ಲ್ ರೇಗೊ ರವರು ಅಧ್ಯಕ್ಷತೆ ವಹಿಸಿ ಎಲ್ಲಾ ಪಾಲಕರಿಗೂ ಹೃತ್ಪೂರ್ವಕ ಸ್ವಾಗವನ್ನು ಹೇಳಿದರು ..ತಾವೆಲ್ಲರೂ ತಮ್ಮ ಮಕ್ಕಳ ಆಗುಹೋಗುಗಳ ಕುರಿತು ನಿಗಾ ವಹಿಸಬೇಕು. ಅಪ್ಪ ಅಮ್ಮ ಗುರು ಹಿರಿಯರನ್ನು ಗೌರವಿಸಬೇಕು,ಎನ್ನುತ್ತಾ […]
ಮಂಗಳೂರು: “ನಾಯಕತ್ವವು ದೃಷ್ಟಿಯನ್ನು ವಾಸ್ತವಕ್ಕೆ ಭಾಷಾಂತರಿಸುವ ಸಾಮರ್ಥ್ಯವಾಗಿದೆ.” ಜೂನ್ 27, 2024 ರಂದು ಗುರುವಾರ ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ 2024-25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಕ್ಯಾಬಿನೆಟ್ ಉದ್ಘಾಟನಾ ಸಮಾರಂಭದಲ್ಲಿ ನಾಯಕತ್ವದ ಈ ಸಾರವನ್ನು ಸುಂದರವಾಗಿ ಅಡಕಗೊಳಿಸಲಾಯಿತು. ಮುಖ್ಯ ಅತಿಥಿ, ಶ್ರೀ ಡಾ ಮರಿಯಾ ರೂಪ ಎಸಿ, ಉನ್ನತ ಮತ್ತು ಸೇಂಟ್ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ.ಜಲಧಿ ಮತ್ತು ಅವರ ಗುಂಪಿನ ಪ್ರಶಾಂತ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಇದು ಪ್ರಕ್ರಿಯೆಗಳಿಗೆ ಧ್ವನಿಯನ್ನು ಹೊಂದಿಸುವ ಗಂಭೀರ […]
ಕುಂದಾಪುರ ಜೂನ್ 29: ವಯೋ ನಿವೃತ್ತಿ ಗೊಂಡ ಶ್ರೀಮತಿ ಡೋರತಿ ಸುವಾರಿಸ್ಇ ವರಿಗೆ ಬೀಳ್ಕೊಡುಗೆ ಸಮಾರಂಭ 28 ರಂದು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಅತಿ ವo. ಫಾದರ್ ಪೌಲ್ ರೇಗೊ ಅವರು 38 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಶಾಲಾ ಮುಖ್ಯ ಶಿಕ್ಷಕಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಜಿಲ್ಲಾ ಮಟ್ಟದಲ್ಲಿ ಆದರ್ಶ ಶಿಕ್ಷಕಿ ಯಾಗಿ ಪ್ರಶಸ್ತಿ ಪಡೆದ ಕುರಿತು ಅಭಿನಂದನೆಯನ್ನೂ ಸಲ್ಲಿಸಿ ಅವರ ಮುಂದಿನ […]
T20 World Cup ಅಂಗವಾಗಿ ಈಗಾಗಲೇ ಫೈನಲ್ ಗೆ ಪ್ರವೇಶಿಸಿರುವ ಭಾರತ ಎದುರಾಳಿ ದಕ್ಷಿಣಆಫ್ರಿಕಾದ ಎದುರು ನಾಳೆ ಶನಿವಾರ ನಡೆಯಲಿಕ್ಕಿದೆ. ಈ ಪ್ರಯುಕ್ತ ಶುಭಾಷಯವನ್ನು ಸಾರುವ ” Jai Ho -INDIA ಕಲಾಕೃತಿಯನ್ನು ಕೋಟೇಶ್ವರ ಹಳೆ ಅಳಿವೆ ಕಡಲ ತೀರದಲ್ಲಿ ಸ್ಯಾಂಡ್ ಥೀಮ್, ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್, ಹಾಲಾಡಿ, ಉಜ್ವಲ್ ನಿಟ್ಟೆ ಇವರು ಮರಳು ಶಿಲ್ಪವನನು ರಚಿಸಿರುತ್ತಾರೆ.
ಕುಂದಾಪುರ, ಜೂ.: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ತಮ್ಮ ವೃತ್ತಿಯಲ್ಲಿ ಪ್ರಮಾಣಿಕ ಕೆಲಸ ಮಾಡಿದಾಗ ಎಲ್ಲರೂ ಗುರುತಿಸುತ್ತಾರೆ. 38 ವರ್ಷಗಳ ಕಾಲ ಶಿಕ್ಷಕರಾಗಿ ವಯೋನಿವೃತ್ತಿಗೊಂಡ ಭಾಸ್ಕರ ಗಾಣಿಗ ಸೇವೆ ಅನನ್ಯವಾಗಿದೆ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸಂಚಾಲಕರು,ಕುಂದಾಪುರ ವಲಯದ ಧರ್ಮಗುರುಗಳು ಆದ ಅತೀ ವಂ.ಫಾ.ಪಾವ್ಲ್ ರೇಗೊ ಹೇಳಿದರು. ಅವರು ಜೂನ್ ೨೮ ರಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಭಾಸ್ಕರ ಗಾಣಿಗ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]
ಗಂಗೊಳ್ಳಿ, ಜೂ.18: ಗಂಗೊಳ್ಳಿ ಕಥೊಲಿಕ್ ಸಭಾ ಘಟಕದಿಂದ ಶ್ರೀಸಾಮಾನ್ಯರ ದಿನಾಚರಣೆ ಆಚರಿಸಲಾಯಿತು. ಕಳೆದ 34 ವರ್ಷಗಳಿಂದ ಗಂಗೊಳ್ಳಿ ಕಥೊಲಿಕ್ ಸಭಾ ಘಟಕಕ್ಕೆ, ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ನೀಡಿರುವರಿಗೆ ಗಂಗೊಳ್ಳಿ ಚರ್ಚಿನ ಶ್ರೀಸಾಮನ್ಯ ಆಯೋಗ ಮತ್ತು ಕಥೊಲಿಕ್ ಸಭಾ ಘಟಕದಿಂದ ಸನ್ಮಾನಿಸಿ ಕಾಣಿಕೆಯನ್ನು ನೀಡಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿನೋದ್ ಕ್ರಾಸ್ಟೊ ಮಾತನಾಡಿ “ಕಥೊಲಿಕ್ ಸಭಾ ಸಂಘಟನೇಯು, ಶ್ರೀಸಾಮಾನ್ಯರಿಗೆ ಸಮಾಜದಲ್ಲಿ ಸೇವೆ ಮಾಡುವಂತೆ ಪರಿವರ್ತಿಸುತ್ತದೆ, ವಿವಿಧ ರೀತಿಯಲ್ಲಿ ಸೇವೆ ಮಾಡಬಹುದು, ಹೀಗೆ ವಿವಿಧ ರೀತಿಯಲ್ಲಿ ಸೇವೆ ಮಾಡಿ […]