ಕುಂದಾಪುರ. ಆ.29: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಮೋಹನ ದಾಸ ಶೆಣೈ ಆಯ್ಕೆಯಾಗಿದ್ದಾರೆ, ಹಾಗೇ ಉಪಾಧ್ಯಕ್ಷೆಯಾಗಿ ಬಿಜೆಪಿಯ ವನಿತಾ ಬಿಲ್ಲವ ಆಯ್ಕೆಯಾಗಿದ್ದಾರೆ.ಮೀಸಲಾತಿಯ ಪ್ರಕಾರ ಅಧ್ಯಕ್ಷತೆಗೆ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೋಹನ ದಾಸ್ ಶೆಣೈ, ಕಾಂಗ್ರೆಸ್ ನಿಂದ ಚಂದ್ರಶೇಖರ್ ಖಾರ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಬಿಲ್ಲವ ಪಕ್ಷೇತರ ಅಭ್ಯರ್ಥಿ ಕಮಲ ಮಂಜುನಾಥ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ 14 ಸದಸ್ಯಬಲ ಕಾಂಗ್ರೆಸ್ 8 […]

Read More

ಕುಂದಾಪುರ: ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ, ಇನ್ನರ್ ವ್ಹೀಲ್ ಮತ್ತು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, WVS India ಇವರ ಸಹಭಾಗಿತ್ವದಲ್ಲಿ ಕುಂದಾಪುರ ಸರಕಾರಿ ಪಶು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 2 ರಿಂದ 6ರ ತನಕ, ಮನೆಯಲ್ಲಿ ಸಾಕಿದ ದೇಸಿ ನಾಯಿಗಳಿಗೆ(ಬೀದಿ ನಾಯಿ ಅಲ್ಲ) ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಶಸ್ತ್ರಚಿಕಿತ್ಸೆಯು ಉಚಿತವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸಂಘಟಕರ ಆಶಯ.ನಾಯಿಯ ಮಾಲಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮುಂಚಿತವಾಗಿ ನೋಂದಾಯಿಸ ಬೇಕಾಗಿ ಕೋರಿದ್ದಾರೆ.8277390909, 9844790531

Read More

ಗಂಗೊಳ್ಳಿ: ಕೊಸೇಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿಯಲ್ಲಿ ಆಗಸ್ಟ್ 18 ರಂದು ಕಥೋಲಿಕ್ ಸಭಾ, ಕಾರ್ಮಿಕರ ಆಯೋಗ ಮತ್ತು ನೀತಿ ಮತ್ತು ಶಾಂತಿ ಆಯೋಗದ ಸಹಯೋಗದೊಂದಿಗೆ ಕಾರ್ಮಿಕರ ದಿನ ಮತ್ತು ನ್ಯಾಯ ಮತ್ತು ನೀತಿಯ ದಿನದ ಆಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆಯ ಪ್ರಾಂಶುಪಾಲರಾದ ಶ್ರೀಯುತ ಎಡ್ವರ್ಡ್ ಲಾರ್ಸನ್ ಡಿಸೋಜಾ ಹಾಗೂ ಉಡುಪಿ ಧರ್ಮ ಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಶ್ರೀಯುತ ಎಲ್ರಾಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು. ಶ್ರೀ ಲಾರ್ಸೆನ್ […]

Read More

ಕುಂದಾಪುರ,ಅ.28: ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಅ.26 ಸೋಮವಾರ ಸಂಜೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಾಕೋಬ್ ಡಿಸೋಜರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಭೆಯಲ್ಲಿ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಜಾಕೋಬ್ ಡಿಸೋಜ ಓರ್ವ ಸರಳ, ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದು, ಕುಂದಾಪುರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಜಾಕೋಬ್ ಡಿಸೋಜಾ, ಉತ್ತಮ ನಾಯಕರಾಗಿ ಪಾರದರ್ಶಕ ಆಡಳಿತವನ್ನು ಪುರಸಭೆ ಮತ್ತು […]

Read More

1984-85ನೇ ಸಾಲಿನ ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜು ಹಳೇ ವಿದ್ಯಾರ್ಥಿಗಳು ಸ್ಥಾಪಿಸಿದ ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆದು, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ ಮಾಡಲಾಯಿತು.ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ ಎಮ್. ಅಧ್ಯಕ್ಷತೆ ವಹಿಸಿ, ಸಂಘ ಉತ್ತಮ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, 4.40 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.ಸಂಘದ ನಿರ್ದೇಶಕರಾದ ದಿನೇಶ ನಾವಡ, ರಘುರಾಮ್ ಶೆಟ್ಟಿ ಸಿ, ಶಾಂತಿ ಕಾಮತ್ […]

Read More

25 ಆಗಸ್ಟ್ 2024 ರಂದು ಭಾನುವಾರ ಸೇಂಟ್ ರಾಫೆಲ್ ಚರ್ಚ್ ಬದ್ಯಾರ್‌ನಲ್ಲಿ ನೀರು ಕೊಯ್ಲು ಜಾಗೃತಿ ಕಾರ್ಯಕ್ರಮ ‘ಜಲಬಂಧನ್’ ನಡೆಯಿತು. ಮಾಸಾಚರಣೆಯ ನಂತರ, ಬಾವಿ ಮತ್ತು ಕೊಳವೆ ಬಾವಿಗಳನ್ನು ತೆರೆಯಲು ನೀರು ಕೊಯ್ಲು ಮಾಡುವ ವಿಧಾನಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಅಧಿವೇಶನವನ್ನು ಯೋಜಿಸಲಾಗಿದೆ. ಈ ಸಂವಾದಾತ್ಮಕ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ನಂತರ ಚರ್ಚ್ ಸಭಾಂಗಣದಲ್ಲಿ ಜಾಗೃತಿ ಸಂವಾದವನ್ನು ಆಯೋಜಿಸಲಾಯಿತು ಮತ್ತು ಡಾ.ಯು.ಪಿ.ಶಿವಾನಂದ್ ಸಿಇಒ, “ಸುಧಿ” ಮಾಧ್ಯಮ ಸಮೂಹ ಬೆಳ್ತಂಗಡಿ ಸಂಪನ್ಮೂಲ […]

Read More

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ದಿನಾಂಕ 26 ಆಗಸ್ಟ್ 2024 ರಂದು ಮಹಾನ್ ಮಾನವತಾವಾದಿಯಾಗಿರುವ ಮದರ್ ತೆರೇಸಾರವರ 114ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಸರಿಸುಮಾರು 45 ವರ್ಷಗಳ ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಮರಣಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಇವರು ಒಬ್ಬ ಮಾನವತಾವಾದಿಗಳಾಗಿ ಬಡವರ, ನಿರ್ಗತಿಕರ,ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಭಾರತರತ್ನ, ಗೋಲ್ಡನ್ […]

Read More

ಕುಂದಾಪುರದ ರಂಗನಹಿತ್ಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಸಹಾಯನಿಧಿ ಚರ್ಚ್‍ರೋಡ್ ಫ್ರೆಂಡ್ಸ್ ಇವರ ಆಶ್ರಯದಲ್ಲಿ ರವಿವಾರ ನಡೆದ ಮುದ್ದು ರಾಧೆ, ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಹಾಯನಿಧಿ ಚರ್ಚ್‍ರೋಡ್ ಫ್ರೆಂಡ್ಸ್ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಹಕರಿಸಿದ ಎಲ್ಲಾ ಸಹಾಯನಿಧಿ ಚರ್ಚ್‍ರೋಡ್ ಫ್ರೆಂಡ್ಸ್‍ನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಪೋಷಕ ವೃಂದದವರಿಗೂ ವಂದಿಸಲಾಯಿತು.

Read More

ಕಾರ್ಕಳ, ಅ.27: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಭಯ್ ಎಂಬವನೆ ಬಂಧಿತ ಆರೋಪಿಯಾಗಿದ್ದು,ಈತ ಬಿಜೆಪಿ ಕಾರ್ಯಕರ್ತ ಎನ್ನಲಾಗಿದೆ, ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ.ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್‌ಗೆ ಡ್ರಗ್ಸ್ ಪೂರೈಕೆ ಮಾಡಿರುವುದು ತಿಳಿದು ಬಂದಿದ್ದು,ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣದ […]

Read More
1 45 46 47 48 49 381