ಕುಂದಾಪುರ: ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಶಿಕಕ ರಕ್ಷಕ ಸಭೆಯು ಜು 22 ರಂದು ಶಾಲಾ ಸಭಾಂಗಣದಲ್ಲಿ ನೆಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ವಿದ್ಯಾರ್ಥಿನಿಯರು ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.ಹೋಲಿ ರೋಜರಿ ಹಾಗೂ ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸ್ಥಳೀಯ ಹೋಲಿ ರೋಜರಿ ಚರ್ಚಿನ ಪ್ರದಾನ ಧಮಗುರುಗಳು ಅ| ವಂ| ಪೌಲ್ ರೇಗೊ ಸಭೆಯ ಅಧ್ಯಕತೆಯನ್ನು ವಹಿಸಿದ್ದರು. ಲೆಸ್ಲಿ ಆರೋಜಾ ಆಪ್ತ ಸಮಾಲೋಚಕರು ಬಿಷಪ್ ಹೌಸ್ ಉಡುಪಿ ಸಂಪನ್ಮೂಲ ವ್ಯಕ್ತಿಗಳಾಗಿ […]
ಮಂಗಳೂರು: ಎಂಎಲ್ಸಿ ಶ್ರೀ ಇವಾನ್ ಡಿಸೋಜಾ ಅವರು ಸೇಂಟ್ ಜೋಸೆಫ್ಸ್ ಪ್ರಶಾಂತ್ ನಿವಾಸ್ ಜೆಪ್ಪು ಕ್ಯಾಂಪಸ್ಗೆ ಭೇಟಿ ನೀಡಿ, ಅಲ್ಲಿ ವಾಸಿಸುತ್ತಿರುವ ನಿವಾಸಿಗಳು ಮತ್ತು ಸಹೋದರಿಯರನ್ನು ಜೂನ್ 21,2024 ರಂದು ಸ್ವಾಗತಿಸಿದರು.ಸೇಂಟ್ ಜೋಸೆಫ್ ಪ್ರಶಾಂತ್ ನಿವಾಸದ ಅಧೀಕ್ಷಕರಾದ ಸೀನಿಯರ್ ಸಿಲ್ವಿಯಾ ಫೆರ್ನಾಂಡಿಸ್ ಅವರು ಸಿಸ್ಟರ್ಸ್ ಸಿಬ್ಬಂದಿ ಮತ್ತು ನಿವಾಸಿಗಳೊಂದಿಗೆ ಕಿರು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದರು. ಶ್ರೀ ಐವನ್ ಡಿಸೋಜ ಎಂಎಲ್ಸಿ ಡಾ. ಕವಿತಾ, ಸೀನಿಯರ್ ಸಿಲ್ವಿಯಾ ಫೆರ್ನಾಂಡಿಸ್, ಸೀನಿಯರ್ ವಿದಾ ಒಲಿವಿರಾ ಮತ್ತು ಸೀನಿಯರ್ ಹೆಲೆನ್ ಫೆರ್ನಾಂಡಿಸ್ […]
ಕುಂದಾಪುರ : ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಯೋಗ ಶಿಕ್ಷಣವನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಇಂದು ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಅದರ ಉದ್ಘಾಟನೆಯನ್ನು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸಂಯೋಜಕರಾದ ಉಮೇಶ ಶೆಟ್ಟಿ,ಅವಿನಾ,ದಿವ್ಯಾ ಪೂಜಾರಿ ಮತ್ತು ಕುಸುಮಾ ಶೆಟ್ಟಿ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ನೀಡುವುದರ ಮೂಲಕ ಉದ್ಘಾಟಿಸಿದರು ಎಲ್ ಕೆ ಜಿ ಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಹೊಸ ಯೋಗಸಮವಸ್ತ್ರದೊಂದಿಗೆ ಸಂಭ್ರಮದಿಂದ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರುಯೋಗ ಶಿಕ್ಷಕ ರತ್ನಕುಮಾರ್ […]
ಬಸ್ರೂರು: ಓಂ ಶ್ರೀ ಯೋಗ ಕೇಂದ್ರ ಬಸ್ರೂರು ಇವರಿಂದ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ .ರಾಧಾಕೃಷ್ಣಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದಂತಹ ಸ್ಥಳೀಯ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿ ಗಳಾದ ವಿಭಾ, ಸ್ಪಂದನ ಉಳ್ಳೂರು, ಸಾನಿಕಾ […]
ಆನಗಳ್ಳಿ ಗ್ರಾಮದ ಹೇರಿಕುದ್ರು ನಿವಾಸಿಯಾಗಿದ್ದ ಗಂಗಾಧರ ಶೆಟ್ಟಿಯವರು ಸಮಾಜ ಸೇವಕರಾಗಿದ್ದು, ಆನಗಳ್ಳಿ ಮತ್ತು ಹೇರಿಕುದ್ರುವಿಗಾಗಿ ಅಮೂಲ್ಯ ಸೇವೆಯನ್ನು ನೀಡಿದ್ದರು, ಈಗ ಅವರ ಸ್ಮರ್ಣಾರ್ಥ ಹೇರಿಕುದ್ರು ಶಾಲೆಯ ರಸ್ತೆಗೆ ಗಂಗಾಧರ ಶೆಟ್ಟಿ ರಸ್ತೆ ಎಂದು ನಾಮಕರಣ ಹಾಗೂ ಅವರ ಪುತ್ಥಳಿ ನಿರ್ಮಾಣ ಮಾಡುವ ಬಗ್ಗೆ ಮನವಿ ಅವರ ಅಭಿಮಾನಿಗಳು ಆನಗಳ್ಳಿ ಗ್ರಾಮ ಪಂಚಾಯ್ತಿಗೆ ಮನವಿ ನೀಡಿದ್ದಾರೆ, ಎಂದು ಅವರ ಅಭಿಮಾನಿಗಳು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಮನವಿ ಕೆಳಕಂಡಂತ್ತೆ ಇದೆ ಆನಗಳ್ಳಿ ಗ್ರಾಮದ ಹೇರಿಕುದ್ರು ನಿವಾಸಿಯಾಗಿದ್ದ ಗಂಗಾಧರ ಶೆಟ್ಟಿಯವರು ನಮ್ಮ […]
ಕುಂದಾಪುರ: ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೋಡಿ ಸಮುದ್ರ ತೀರದ ಸೀ ವಾಕ್ ನಲ್ಲಿ ಯೋಗ ಪ್ರದರ್ಶನ ನಡೆಯಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀರಾಮ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಯೋಗ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಂದಾಪುರ: ಸ್ಥಳೀಯ UBMC & CSI ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 21 ಜೂನ್, 2024 ರಂದು ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮವು ಆವಾಹನೆಯೊಂದಿಗೆ ಪ್ರಾರಂಭವಾಯಿತು. ಸಹಾಯಕ ಶಿಕ್ಷಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಸವಿತಾ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಗಣ್ಯರು ದೀಪ ಬೆಳಗಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಲತಾ ಮತ್ತು ಶ್ರೀಮತಿ ವೀಣಾ, ಯೋಗ ತರಬೇತುದಾರರು ಪ್ರತಿ ಆಸನದ ವಿವರವಾದ ವಿವರಣೆಯನ್ನು ನೀಡಿದರು ಮತ್ತು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. […]
ಕುಂದಾಪುರ :ವಿಶ್ವ ಯೋಗ ದಿನಾಚರಣೆಯ ದಿನದಂದು (21-06-2024) ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ದೈಹಿಕ ಶಿಕ್ಷಕರಾದ ಮೈಕಲ್ ಪುಟಾರ್ಡೊ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ವಿಶ್ವ ಯೋಗ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗದ ಆಸನಗಳನ್ನು ಪ್ರದರ್ಶಿಸಲಾಯಿತು.
ಕುಂದಾಪುರ: ಸಂತ ಮೇರಿಯ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಶ್ವ ಯೋಗ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅತಿಥಿಯಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಶ್ರೀ ಜಯಕರ್ ಶೆಟ್ಟಿ, ಇವರು ವಿದ್ಯಾರ್ಥಿಗಳಿಗೆ ಯೋಗದ ಮೂಲಕ ನಮ್ಮ ದೇಹದಲ್ಲಿರುವ ನಕಾರಾತಮಕ ಶಕ್ತಿಯನ್ನು ಹೊರಹಾಕಬಹುದು ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸಬಹುದು ಎಂಬ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಶ್ರೀ ರಾಮಕೃಷ್ಣ ಆಸ್ಪತ್ರೆಯ ವೈದ್ಯಾದಿಕಾರಿ ಡಾ. ಸೋನಿ ಡಿಕೋಸ್ತಾ ಇವರು ಉತ್ತಮ ಆಹಾರ ಸೇವನೆ ಮಾಡುವುದರಿಂದ […]